ಕೊಪ್ಪಳ ಪ್ರಾದೇಶಿಕ ವಿಭಾಗದ ಬಾಗಲಕೋಟೆ ತಾಲೂಕಿನ ಅನವಾಲ ಶ್ರೀ ಶ್ರದ್ದಾನಂದ ಮಹಾಸ್ವಾಮಿಗಳ ಜನ್ಮಸ್ಥಳವಾದ ಪೂರ್ಣಾನಂದ ಆಶ್ರಮದಲ್ಲಿ 1810 ನೇ ಮಧ್ಯವರ್ಜನ ಶಿಬಿರದ ಉದ್ಘಾಟನಾ ಕಾರ್ಯಕ್ರಮ ನೆರವೇರಿತು. ಶ್ರೀ ಪರಮ ಪೂಜ್ಯ ಡಾಕ್ಟರ್ ಕೈಲಾಸಪತಿ ಮಹಾಸ್ವಾಮಿಗಳು ಶ್ರದ್ದಾನಂದಮಠ ಅನವಾಲ ದೀಪವನ್ನು ಉದ್ದೀಪನ ಮಾಡುವುದರೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಜಿಲ್ಲಾ ನಿರ್ದೇಶಕರಾದ ಶ್ರೀ ಚೆನ್ನಕೇಶವ ರವರು ಕಾರ್ಯಕ್ರಮದ ಬಗ್ಗೆ, ಯೋಜನೆಯ ಬಗ್ಗೆ ಮಾಹಿತಿ ಮತ್ತು ಮಾರ್ಗದರ್ಶನ ನೀಡಿದರು. ಜನಜಾಗೃತಿ ಕೊಪ್ಪಳ ಪ್ರಾದೇಶಿಕ ವಿಭಾಗದ ಯೋಜನಾಧಿಕಾರಿಗಳಾದ ಶ್ರೀಯುತ ನಾಗೇಶ್ ರವರು ಪ್ರಾಸ್ತಾವಿಕ ಮಾಹಿತಿಯೊಂದಿಗೆ ವಿಚಾರ ತಿಳಿಸಿದರು. ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಶ್ರೀ ಅನಿಲ್ ಕುಮಾರ್ ದೇಸಾಯಿ ಅಧ್ಯಕ್ಷರು ವ್ಯವಸ್ಥಾಪನ ಸಮಿತಿ, ಶ್ರೀ ಶ್ರೀಕಾಂತ ಎಸ್. ಸಂದಿಮನಿ ಅಧ್ಯಕ್ಷರು ಜಿಲ್ಲಾ ಜನಜಾಗೃತಿ ವೇದಿಕೆ ಬಾಗಲಕೋಟೆ, ಶ್ರೀ ರವೀಂದ್ರ ವಂದಕುದರಿ ಜಿಲ್ಲಾ ಜನಜಾಗೃತಿ ವೇದಿಕೆ ಮಾಜಿ ಅಧ್ಯಕ್ಷರು, ಶ್ರೀ ಹನುಮಂತಪ್ಪ ಹೊಸಕೋಟಿ ಸದಸ್ಯರು ಜಿಲ್ಲಾ ಜನಜಾಗೃತಿ ವೇದಿಕೆ, ಶ್ರೀಮತಿ ನೀಲಮ್ಮ ಕೊಳೂರು ಗ್ರಾಮ ಪಂಚಾಯತ್ ಅಧ್ಯಕ್ಷರು ಅನವಾಲ, ಶ್ರೀ ಬಸವರಾಜ್ ಅಂಗಡಿ ಯೋಜನಾಧಿಕಾರಿಗಳು ಬಾಗಲಕೋಟೆ, ವಲಯ ಮೇಲ್ವಿಚಾರಕರು ಅರುಣ್ ಉಪಸ್ಥಿತರಿದ್ದರು.
