ಬಸವನಬಾಗೇವಾಡಿ ತಾಲೂಕಿನ ಯರನಾಳ ಶ್ರೀ ವಿರಕ್ತಮಠದಲ್ಲಿ 1822 ನೇ ಮದ್ಯವರ್ಜನ ಶಿಬಿರದ ಉದ್ಘಾಟನಾ ಕಾರ್ಯಕ್ರಮ

Janajagurthi Vedike News

ಪರಮಪೂಜ್ಯ ಡಾ| ಡಿ. ವೀರೇಂದ್ರ ಹೆಗ್ಗಡೆಯವರು ಮತ್ತು ಮಾತೃಶ್ರೀ ಡಾ| ಹೇಮಾವತಿ ವಿ. ಹೆಗ್ಗಡೆಯವರ ಕೃಪಾಶೀರ್ವಾದಗಳೊಂದಿಗೆ ಮದ್ಯವರ್ಜನ ಶಿಬಿರ ವ್ಯವಸ್ಥಾಪನಾ ಸಮಿತಿ ಬಸವನಬಾಗೇವಾಡಿ ತಾಲೂಕು ಇವರ ಆಶ್ರಯದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ (ರಿ.) ಬಸವನಬಾಗೇವಾಡಿ ತಾಲೂಕು, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ (ರಿ.) ಬೆಳ್ತಂಗಡಿ, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ (ರಿ.) ವಿಜಯಪುರ ಜಿಲ್ಲೆ, ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ವ್ಯಸನಮುಕ್ತಿ ಮತ್ತು ಸಂಶೋಧನಾ ಕೇಂದ್ರ ಲಾಯಿಲ ಉಜಿರೆ, ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ ಬೆಂಗಳೂರು ಇವರ ಮಾರ್ಗದರ್ಶನದೊಂದಿಗೆ ಜಗದ್ಗುರು ಶ್ರೀ ಪಂಪಾಪತಿ ಮಹಾ ಶಿವಯೋಗೀಶ್ವರ ವಿದ್ಯಾವರ್ಧಕ ಸಂಘ ಯರನಾಳ, ಸರ್ಕಾರಿ ಆಸ್ಪತ್ರೆ ಮನಗೂಳಿ, ಆರಕ್ಷಕ ಠಾಣೆ ಮನಗೂಳಿ, ಪ್ರಗತಿಬಂಧು ಸ್ವ-ಸಹಾಯ ಸಂಘಗಳ ಒಕ್ಕೂಟ ಮನಗೂಳಿ ವಲಯ, ಸ್ಥಳೀಯ ಸಂಘ ಸಂಸ್ಥೆಗಳ ದಾನಿಗಳ ಸಹಕಾರದೊಂದಿಗೆ 1822 ನೇ ಮದ್ಯವರ್ಜನ ಶಿಬಿರದ ಉದ್ಘಾಟನಾ ಸಮಾರಂಭ ಯರನಾಳ ಶ್ರೀ ವಿರಕ್ತಮಠದಲ್ಲಿ ಜರುಗಿತು. ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಅಭಿನವ ಶ್ರೀ ಸಂಗನಬಸವ ಶಿವಾಚಾರ್ಯರು ಹಿರೇಮಠ ಮನಗೂಳಿ ಇವರು ವಹಿಸಿ ದೀಪ ಪ್ರಜ್ವಲಿಸಿ ಆಶೀರ್ವಚನವನ್ನು ನೀಡಿದರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಪರಯಪೂಜ್ಯ ವೀರೇಂದ್ರ ಹೆಗ್ಗಡೆಯವರು ಮಾಡುತ್ತಿರುವ ವಿನೂತನ ಕಾರ್ಯಕ್ರಮವೇ ಈ ಮದ್ಯವರ್ಜನ ಶಿಬಿರ ಸಮಾಜದಲ್ಲಿ ಇದುವರೆಗೂ ಯಾರು ಮಾಡದಿರುವ ವಿಶೇಷವಾದ ಕಾರ್ಯಕ್ರಮವನ್ನು ಜಗತ್ತಿನಲ್ಲಿ ಯಾರಾದರೂ ಮಾಡುವವರಿದ್ದರೆ ಅದು ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರು ಎಂದರು. ಸಂಸ್ಥೆಯ ಮುಖೇನ ಸಮುದಾಯದ ಕಾರ್ಯಕ್ರಮ, ಸಾಂಸ್ಕೃತಿಕ ಕಾರ್ಯಕ್ರಮ, ಶೈಕ್ಷಣಿಕ ಕಾರ್ಯಕ್ರಮ, ಧಾರ್ಮಿಕ ಕಾರ್ಯಕ್ರಮ ಮತ್ತು ಜನತೆಯಲ್ಲಿ ಅರಿವು ಮತ್ತು ಜಾಗೃತಿ ಮೂಡಿಸುವ ವಿಶಿಷ್ಟ ಮತ್ತು ವಿಭಿನ್ನ ಕಾರ್ಯಕ್ರಮಗಳೆಲ್ಲವು ಶ್ಲಾಘನೀಯ ಎಂದು ಸಂತಸ ವ್ಯಕ್ತಪಡಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಬಸವರಾಜ ಬ್ಯಾಕೋಡ ಅಧ್ಯಕ್ಷರು 1822 ನೇ ಮದ್ಯವರ್ಜನ ಶಿಬಿರ ವ್ಯವಸ್ಥಾಪನಾ ಸಮಿತಿ ಮನಗೂಳಿ ಇವರು ವಹಿಸಿ ಅಧ್ಯಕ್ಷೀಯ ಮಾತುಗಳನ್ನಾಡಿದರು. ಶ್ರೀ ರಾಜೇಶ್ ಯೋಜನಾಧಿಕಾರಿ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಪ್ರಾದೇಶಿಕ ವಿಭಾಗ ಕಲ್ಬುರ್ಗಿ ಇವರು ಕಾರ್ಯಕ್ರಮದ ಕುರಿತು ಪ್ರಾಸ್ತಾವಿಕ ಮಾತುಗಳನ್ನಾಡಿದರು. ಮುಖ್ಯ ಅತಿಥಿಗಳಾಗಿ ಶ್ರೀ ಸಂತೋಷ್ ಕುಮಾರ್ ರೈ ಮಾನ್ಯ ಜಿಲ್ಲಾ ನಿರ್ದೇಶಕರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ (ರಿ.) ವಿಜಯಪುರ ಜಿಲ್ಲೆ ಇವರು ಮಾತನಾಡಿ ಮದ್ಯವರ್ಜನ ಶಿಬಿರ ಇದೊಂದು ಪವಿತ್ರ ಕಾರ್ಯಕ್ರಮ ಇದು ಕೇವಲ ಧರ್ಮಸ್ಥಳದ ಕಾರ್ಯಕ್ರಮ ಅಲ್ಲ ಬದಲಾಗಿ ಇದೊಂದು ಸಮುದಾಯದ ಸಹಭಾಗಿತ್ವದ ಕಾರ್ಯಕ್ರಮ ಆದ್ದರಿಂದ ಸಾರ್ವಜನಿಕರ ತನು-ಮನ-ಧನ ಸಹಕಾರದೊಂದಿಗೆ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ. ಮದ್ಯಪಾನವೆಂಬುದೊಂದು ಸಮಾಜವನ್ನು ಬಾದಿಸುವ ಮತ್ತು ಜಾಗೃತೆ ತಪ್ಪಿದರೆ ಯಾರನ್ನೂ ಬಿಡದ ಖಾಯಿಲೆ ಮದ್ಯಪಾನಕ್ಕೆ ಜಾತಿ, ಧರ್ಮ, ಪಕ್ಷ, ಭೇದ ಯಾವುದೂ ಇರುವುದಿಲ್ಲ ಹಾಗಾಗಿ ಇದೊಂದು ಸರ್ವಧರ್ಮ ಕಾರ್ಯಕ್ರಮ ಶಿಬಿರವನ್ನು ಸಂಘಟಿಸಿದ ವ್ಯವಸ್ಥಾಪನಾ ಸಮಿತಿ ಹಾಗೂ ಜನಜಾಗೃತಿ ವೇದಿಕೆಯ ಅತ್ಯುತ್ತಮ ಸಹಕಾರವನ್ನು ಸ್ಮರಿಸಿ ಕಾರ್ಯಕ್ರಮಕ್ಕೆ ಶುಭಾಶಯವನ್ನು ಕೋರಿದರು. ಕಾರ್ಯಕ್ರಮದಲ್ಲಿ ಶ್ರೀ ಸೋಮನಗೌಡ ಬಿ. ಪಾಟೀಲ ಅಧ್ಯಕ್ಷರು ಅಖಿಲ ಕರ್ನಾಟಕ ಜಿಲ್ಲಾ ಜನಜಾಗೃತಿ ವೇದಿಕೆ ವಿಜಯಪುರ, ಶ್ರೀಮತಿ ಶಾಂತವ್ವ ಕೋಲಕಾರ ಅಧ್ಯಕ್ಷರು ಗ್ರಾಮ ಪಂಚಾಯಿತಿ ಯರನಾಳ, ಶ್ರೀಮತಿ ರತ್ನಾಬಾಯಿ ಬಿಜಾಪುರ ಮಾಜಿ ಸದಸ್ಯರು ತಾಲೂಕು ಪಂಚಾಯಿತಿ ಯರನಾಳ, ಶ್ರೀ ಶ್ರೀ ಶೈಲಾ ವಾಲಿಕಾರ ರಾಜ್ಯ ಕಾರ್ಯದರ್ಶಿಗಳು ಕಾಂಗ್ರೆಸ್ ಸಮಿತಿ ಹಿಂದುಳಿದ ವರ್ಗಗಳ ವಿಭಾಗ ಬೆಂಗಳೂರು, ಶ್ರೀ ಐ.ಸಿ. ಪಟ್ಟಣ ಶೆಟ್ಟಿ ನಿರ್ದೇಶಕರು ಸಹಕಾರ ಮಂಡಳಿ ಬೆಂಗಳೂರು, ಶ್ರೀ ಅಶೋಕ ಹಾರಿವಾಳ ಅಧ್ಯಕ್ಷರು ಕರ್ನಾಟಕ ರಕ್ಷಣಾ ವೇದಿಕೆ ಉಪಸ್ಥಿತರಿದ್ದು ಶುಭವನ್ನು ಹಾರೈಸಿದರು. ಕಾರ್ಯಕ್ರಮದಲ್ಲಿ ಶ್ರೀ ನಂದಕುಮಾರ್ ಪಿ. ಪಿ. ಶಿಬಿರಾಧಿಕಾರಿ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ (ರಿ.) ಬೆಳ್ತಂಗಡಿ, ಕುಮಾರಿ ರಂಜಿತಾ ಆರೋಗ್ಯ ಸಹಾಯಕಿ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ (ರಿ.) ಬೆಳ್ತಂಗಡಿ, ಶ್ರೀಮತಿ ಅಂಬಿಕಾ ಪಾಟೀಲ ಜೊತೆ ಕಾರ್ಯದರ್ಶಿ/ಮೇಲ್ವಿಚಾರಕರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ (ರಿ.) ಮನಗೂಳಿ ವಲಯ, ತಾಲೂಕಿನ ಎಲ್ಲಾ ಮೇಲ್ವಿಚಾರಕರುಗಳು, ಮೇಲ್ವಿಚಾರಕ ಶ್ರೇಣಿಯ ಸಿಬ್ಬಂದಿಗಳು, ಸ್ಥಳೀಯ ಸೇವಾಪ್ರತಿನಿಧಿಗಳು, ವಿ.ಎಲ್.ಈ ಸಿಬ್ಬಂದಿಗಳು, ಒಕ್ಕೂಟದ ಪದಾಧಿಕಾರಿಗಳು, ಪ್ರಗತಿಬಂಧು ಸ್ವ-ಸಹಾಯ ಸಂಘದ ಸದಸ್ಯರುಗಳು, ನವಜೀವನ ಸಮಿತಿ ಸದಸ್ಯರುಗಳು ಹಾಗೂ ಸಾರ್ವಜನಿಕರು ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಿದರು.