ಪಿರಿಯಾಪಟ್ಟಣ ಯೋಜನಾ ಕಛೇರಿ ವ್ಯಾಪ್ತಿಯ ಕಂಪಲಾಪುರ ವಲಯದಲ್ಲಿ 1852 ನೇ ಮದ್ಯವರ್ಜನ ಶಿಬಿರದ ಉದ್ಘಾಟನಾ ಕಾರ್ಯಕ್ರಮ

Janajagurthi Vedike News

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ. ಸಿ ಟ್ರಸ್ಟ್ (ರಿ.) ಪಿರಿಯಾಪಟ್ಟಣ ತಾಲ್ಲೂಕು ಕೊಡಗು ಜಿಲ್ಲೆ, ಪಿರಿಯಾಪಟ್ಟಣ ಯೋಜನಾ ಕಛೇರಿ ವ್ಯಾಪ್ತಿಯ ಕಂಪಲಾಪುರ ವಲಯದಲ್ಲಿ 1852 ನೇ ಮದ್ಯವರ್ಜನ ಶಿಬಿರದ ಉದ್ಘಾಟನಾ ಕಾರ್ಯಕ್ರಮವನ್ನು ನಡೆಯಿತು. ಪಿರಿಯಾಪಟ್ಟಣ ತಾಲೂಕಿನ ಮಾಜಿ ಶಾಸಕರಾದ ಶ್ರೀ ಕೆ. ಮಹದೇವ್ ರವರು ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಕೊಡಗು ಜಿಲ್ಲೆಯ ಜಿಲ್ಲಾಧ್ಯಕ್ಷರಾದ ಶ್ರೀ ಅಭಿಮನ್ಯು ಕುಮಾರ್, ಕೊಡಗು ಜಿಲ್ಲಾ ನಿರ್ದೇಶಕರಾದ ಶ್ರೀಮತಿ ಲೀಲಾವತಿ, ಕಂಪಲಾಪುರ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಜಾನಕಿ, ರೋಟರಿ ಐಕ್ಯನ್ ಅಧ್ಯಕ್ಷರಾದ ಶ್ರೀ ನಾಗರಾಜು, ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀ ಕುಮಾರ್, ಎಪಿಎಂಸಿ ಮಾಜಿ ಉಪಾಧ್ಯಕ್ಷರಾದ ಶ್ರೀ ರಮೇಶ್, ಕೃಷಿ ಪತ್ತಿನ ಸಹಕಾರ ಸಂಘದ ಮಾಜಿ ಅಧ್ಯಕ್ಷರಾದ ಶ್ರೀ ಜಯಣ್ಣ, 1852 ನೇ ಮದ್ಯವರ್ಜನ ಶಿಬಿರದ ಗೌರವಧ್ಯಕ್ಷರಾದ ಶ್ರೀ ಗಿರೀಶ್, ಉಪಾಧ್ಯಕ್ಷರಾದ ಶ್ರೀ ಸಂತೋಷ್, ಬೆಕ್ಯ ಗ್ರಾಮ ಪಂಚಾಯತ್ ಸದಸ್ಯರಾದ ಶ್ರೀ ನಾಗರಾಜ್, ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷರಾದ ಶ್ರೀ ಸ್ವಾಮಿ ಗೌಡ,ಕಂಪಲಾಪುರ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಶ್ರೀ ಆಸಿಫ್ ಖಾನ್ ಉಪಸ್ಥಿತರಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀಮತಿ ಕೆ. ಬಿ. ಮಂಜುಳಾರಾಜ್ ಅಧ್ಯಕ್ಷರು 1852 ನೇ ಮದ್ಯವರ್ಜನ ಶಿಬಿರ ವ್ಯವಸ್ಥಾಪನ ಸಮಿತಿ, ಕಂಪಲಾಪುರ ರವರು ವಹಿಸಿದ್ದರು. ಕಾರ್ಯಕ್ರಮದಲ್ಲಿ ಉಡುಪಿ ಪ್ರಾದೇಶಿಕ ವಿಭಾಗದ ಜನಜಾಗೃತಿ ಮೇಲ್ವಿಚಾರಕರಾದ ಶ್ರೀ ನಿತೇಶ್ ಕೆ., ಶಿಬಿರಾಧಿಕಾರಿ ಶ್ರೀ ನಾಗೇಂದ್ರ, ಆರೋಗ್ಯ ಸಹಾಯಕ ಶ್ರೀ ವೆಂಕಟೇಶ್, ನವಜೀವನ ಸಮಿತಿ ಸದಸ್ಯರು, ಪದಾಧಿಕಾರಿಗಳು, ಒಕ್ಕೂಟದ ಅಧ್ಯಕ್ಷರು/ಪದಾಧಿಕಾರಿಗಳು, ಪ್ರಗತಿಬಂಧು/ಸ್ವಸಹಾಯ ಸಂಘದ ಸದಸ್ಯರು, ವಲಯ ಮೇಲ್ವಿಚಾರಕರು, ಕೃಷಿ ಮೇಲ್ವಿಚಾರಕರು, ಯಲ್ಲಾಪುರ ತಾಲ್ಲೂಕಿನ ಎಲ್ಲಾ ಮೇಲ್ವಿಚಾರಕರು, ತಾಲೂಕಿನ ಸೇವಾ ಪ್ರತಿನಿಧಿಯವರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.