1631 ನೆ ಮಧ್ಯ ವರ್ಜನ ಶಿಬಿರವು ಪಿರಿಯಾಪಟ್ಟಣ ತಾಲೂಕಿನ ಚಿಟ್ಟೆನ ಹಳ್ಳಿ ವಲಯದ ಕೊಡಗು ಗೌಡ ಸಮಾಜ ಸಭಾಭವನದಲ್ಲಿ ಮೈಮುಲ್ ಅಧ್ಯಕ್ಷರಾದ ಶ್ರೀ ಪಿಎಂ ಪ್ರಸನ್ನ ಅವರ ಅಮೃತಹಸ್ತದಿಂದ ಉದ್ಘಾಟನೆಗೊಂಡಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಮಿತಿಯ ಅಧ್ಯಕ್ಷರು ಪುರಸಭಾ ಸದಸ್ಯರು ಆಗಿರುವ ಪಿ.ವಿ ರವಿ ವಹಿಸಿದ್ದು ಮುಖ್ಯ ಅತಿಥಿಗಳಾಗಿ ಕೊಡಗು ಜಿಲ್ಲಾ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾ ನಿರ್ದೇಶಕರಾದ ಶ್ರೀಮತಿ ಲೀಲಾವತಿ ಮೇಡಂ, ಪಿರಿಯಾಪಟ್ಟಣ ತಾಲೂಕು ಆರೋಗ್ಯ ಅಧಿಕಾರಿ ಡಾಕ್ಟರ್ ಶರತ್ ಬಾಬು, ಜನಜಾಗೃತಿ ವೇದಿಕೆ ಸದಸ್ಯರಾದ ಷಣ್ಮುಖಯ್ಯ ಭಾಗವಹಿಸಿ ಶುಭ ಹಾರೈಸಿ ರುತ್ತಾರೆ. ಚಿಟ್ಟೆನಹಳ್ಳಿ ವಲಯದ ಮೇಲ್ವಿಚಾರಕಿ ಶ್ರೀಮತಿ ಭಾಗಿರತಿ ಸ್ವಾಗತ ಗೈದು ತಾಲೂಕು ಯೋಜನಾಧಿಕಾರಿಗಳಾದ ಸುರೇಶ್ ಶೆಟ್ಟಿ ವಂದನಾರ್ಪಣೆ ಮಾಡಿದರು.
