ಬೆಳಿಗ್ಗೆ ಮತ್ತು ಸಂಜೆ, ಲಕ್ಷ್ಮಿಯನ್ನು ಹೊತ್ತುತರುವ ಉದ್ದಿಮೆ-ಹೈನುಗಾರಿಕೆಶ್ರೀ. ಧಾರವಾಡ ಪ್ರಾದೇಶಿಕ ವಿಭಾಗದ,ಧಾರವಾಡದ ಗಾಂಧಿನಗರದ ರುಡ್ಸೆಟ್ ಸಂಸ್ಥೆಯಲ್ಲಿ ನವಜೀವನ ಸಮಿತಿ ಸದಸ್ಯರಿಗೆ 10 ದಿನದ ಹೈನುಗಾರಿಕೆ ತರಬೇತಿ ಕಾರ್ಯಕ್ರಮ ಆಯೋಜಿಸಲಾಗಿದ್ದು ಕಾರ್ಯಕ್ರಮದ ಉದ್ಘಾಟನೆಯನ್ನು ಧಾರವಾಡ ಪ್ರಾದೇಶಿಕ ವಿಭಾಗದ ಗೌರವಾನ್ವಿತ ನಿರ್ದೇಶಕರಾದ ಶ್ರೀ ದುಗ್ಗೇಗೌಡ ಸರ್ ರವರು ದೀಪ ಪ್ರಜ್ವಲನೆ ಮೂಲಕ ಚಾಲನೆ ನೀಡಿದರು ಈ ಸಂದರ್ಭದಲ್ಲಿ ಸಂಸ್ಥೆಯ ನಿರ್ದೇಶಕರಾದ ಶ್ರೀ ಗವಿಸಿದ್ದಪ್ಪ ಸರ್ ಹಾಗೂ K. L. E ವಿಶ್ವವಿದ್ಯಾಲಯದ ಪ್ರೊಫೆಸರ್ ಸುನಿತಾ ಹಿರೇಮಠ, ಉಪನ್ಯಾಸಕರಾದ ಜಗದೀಶ್ ಪೂಜಾರ್ ಶ್ರೀ ಚನ್ನಪ್ಪ, ಜನಜಾಗೃತಿ ವಿಭಾಗದ ಯೋಜನಾಧಿಕಾರಿ ನಾಗೇಶ್ ವೈ.ಎ ಮತ್ತು ರಾಮದುರ್ಗ ಸೌದತ್ತಿ, ಬೈಲಹೊಂಗಲ, ರಾಯಬಾಗ್, ಮೂಡಲಗಿ ತಾಲೂಕಿನ 34 ಪಾನಮುಕ್ತ ಸದಸ್ಯರು ಉಪಸ್ಥಿತರಿದ್ದರು.
