ಪಾನಮುಕ್ತ ಸದಸ್ಯರಿಗೆ ಸ್ವ- ಉದ್ಯೋಗ ತರಬೇತಿ || ಧಾರವಾಡ ಪ್ರಾದೇಶಿಕ ವಿಭಾಗ

Janajagurthi Vedike News

9/5/2022ರಿಂದ18/5/2022 ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ (ರಿ) ಹಾಗೂ ರುಡ್ಸೆಟ್ ಸಂಸ್ಥೆ ಗಾಂಧಿನಗರ ಧಾರವಾಡ ಸಂಯುಕ್ತಾಶ್ರಯದಲ್ಲಿ ಪಾನಮುಕ್ತ ಸದಸ್ಯರಿಗೆ 10 ದಿನದ ಕುರಿ ಸಾಕಾಣಿಕೆ ತರಬೇತಿಗೆ ಚಾಲನೆ ನೀಡಲಾಯಿತು. ಈ ತರಬೇತಿ ಕಾರ್ಯಕ್ರಮದ ಉದ್ಘಾಟನೆಯನ್ನು ದೀಪಕ್ ಜಾದವ್, ಶಾಖಾ ಪ್ರಬಂಧಕರು ಕೆನರಾ ಬ್ಯಾಂಕ್ ವಿದ್ಯಾಗಿರಿ ಧಾರವಾಡ ದೀಪ ಪ್ರಜ್ವಲನೆ ಮೂಲಕ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ನಿರ್ದೇಶಕರಾದ ಶ್ರೀ ಗವಿಸಿದ್ದಪ್ಪ, ಜನಜಾಗೃತಿ ವಿಭಾಗದ ಯೋಜನಾಧಿಕಾರಿ ನಾಗೇಶ್ ವೈ. ಎ ಉಪನ್ಯಾಸಕರಾದ ಜಗದೀಶ್ ಪೂಜಾರ್, ಶ್ರೀ ಚನ್ನಪ್ಪ ಉಪಸ್ಥಿತರಿದ್ದರು ಈ ತರಬೇತಿ ಕಾರ್ಯಕ್ರಮದಲ್ಲಿ ಒಟ್ಟು 31 ಪಾನಮುಕ್ತ ಬಂಧುಗಳು ತರಬೇತಿಯಲ್ಲಿ ಪಾಲ್ಗೊಂಡಿರುತ್ತಾರೆ.