ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್(ರಿ) ಹಾಗೂ ರುಡ್ಸೆಟ್ ಸಂಸ್ಥೆ ಗಾಂಧಿನಗರ ಧಾರವಾಡ ಸಹಭಾಗಿತ್ವದಲ್ಲಿ ಧಾರವಾಡ ಪ್ರಾದೇಶಿಕ ವಿಭಾಗದ ಪಾನಮುಕ್ತ ಸದಸ್ಯರಿಗೆ 09/05/2022 ರಿಂದ 18/05/2022 ರವರೆಗೆ 10 ದಿನದ ಕುರಿ ಸಾಕಾಣಿಕೆ ತರಬೇತಿ ನಡೆಸಲಾಗುತ್ತಿದೆ. ಸದ್ರಿ ತರಬೇತಿಗೆ ಇಂದು ಧಾರವಾಡ ಪ್ರಾದೇಶಿಕ ವಿಭಾಗದ ಪ್ರಾದೇಶಿಕ ನಿರ್ದೇಶಕರು ಭೇಟಿ ನೀಡಿ ವಿಶೇಷ ಮಾರ್ಗದರ್ಶನ ನೀಡಿದರು.
ಪಾನಮುಕ್ತ ಬಂಧುಗಳೇ ಮದ್ಯವರ್ಜನ ಶಿಬಿರ ಹಾಗೂ ಕುರಿ ಸಾಕಾಣಿಕೆ ತರಬೇತಿಯ ಮೂಲಕ ಶ್ರೀಕ್ಷೇತ್ರ ಸ್ವಾಮಿಯ ಪೂರ್ಣಾನುಗ್ರಹ ತಮಗೆ ಲಭಿಸಿದೆ, ಮಾತೃಶ್ರೀ ಅಮ್ಮನವರ ಮಾತಿನಂತೆ ಹೆಣ್ಣಾಗಲಿ ಗಂಡಾಗಲಿ 18 ರಿಂದ 40ನೇ ವಯಸ್ಸು ದುಡಿಯುವ ಹಾಗೂ ದುಡಿದು ಸಂಪಾದನೆ ಮಾಡಿ ಉಳಿತಾಯ ಮಾಡುವ ವಯಸ್ಸಾಗಿದ್ದು, ಈ ವಯಸ್ಸಿನಲ್ಲಿ ಶ್ರಮವಹಿಸಿ ದುಡಿಯಬೇಕು ಹಾಗೂ ಉಳಿತಾಯದ ಹಣ ಮುಂದಿನ ಭವಿಷ್ಯಕ್ಕೆ ಮತ್ತು ಮುಪ್ಪಿನ ಕಾಲಕ್ಕೆ ರಕ್ಷಾ ಕವಚವಾಗಿ ಕಾಪಾಡುತ್ತದೆ.ನಾವುಗಳು ಯಾರು ಇನ್ನೊಬ್ಬರಲ್ಲಿ ದೇಹಿ ಎಂದು ಬೇಡಬಾರದು, ದೇವರು ಕೊಟ್ಟ ಈ ದೇಹದ ಮೂಲಕ ದುಶ್ಚಟ ಮುಕ್ತರಾಗಿ ಆರೋಗ್ಯ ಕಾಪಾಡಿಕೊಂಡು ದುಡಿಯುವ ವ್ಯಕ್ತಿಗಳಾಗಬೇಕು* ,”ಶಕ್ತಿ,+ ಸಾಮರ್ಥ್ಯ+ ಕೌಶಲ್ಯ + ಅವಕಾಶ” ಇವೆಲ್ಲವೂ ಈಗ ಒದಗಿ ಬಂದ ಕ್ಷಣಗಳಾಗಿವೆ, ಕೀಳರಿಮೆ ಮಾಡಿಕೊಳ್ಳದೆ ಬದ್ಧತೆಯಿಂದ ದುಡಿಯಿರಿ, ಸ್ವಾಮಿ ಕೊಟ್ಟ ಅವಕಾಶ ಬಳಸಿಕೊಳ್ಳಿರಿ. ಸ್ವಉದ್ಯೋಗ ಮಾಡಿದರೆ ಸ್ವಾವಲಂಬನೆ ಸಾಧ್ಯ ಇದರಿಂದ ಸ್ವಾಭಿಮಾನದ ಬದುಕು ನಡೆಸುವಂತಾಗುತ್ತದೆ, ನಿಮಗೆ ನೀವೇ ಅಧಿಕಾರಿ ನಿಮಗೆ ನೀವೇ ಮಾಲಕರು ಆಗುವ ಅವಕಾಶ ನಿರ್ಮಾಣವಾಗುತ್ತದೆ. ನಿಮ್ಮ ಕುಟುಂಬಕ್ಕೆ ನೀವೇ ಆಧಾರಸ್ತಂಭವಾದ ಬೇಕು ನಿರಂತರ ದುಡಿಮೆಯಿಂದ ಸಂತೋಷ ಕಾಣಬೇಕು ಈ ಮೂಲಕ ಸಮಾಜದಲ್ಲಿ ಮಾದರಿ ವ್ಯಕ್ತಿಗಳಾಗಿ ಬದುಕು ನಡೆಸುವಂತಾಗಲಿ. ಕುರಿ ಸಾಕಾಣಿಕೆಯು ಕಡಿಮೆ ಅವಧಿಯಲ್ಲಿ ಹೆಚ್ಚು ಆದಾಯ ಗಳಿಸುವ ಸ್ವ-ಉದ್ಯೋಗವಾಗಿದ್ದು ಇಲ್ಲಿ ಪಡೆದ ಕೌಶಲ್ಯ ನಿಮ್ಮ ಸಾಧನೆಯಲ್ಲಿ ಕಾಣಬೇಕು. ಜೀವನದಲ್ಲಿ ದುಶ್ಚಟ ದುರಭ್ಯಾಸದಿಂದ ಸೋತ ನಿಮಗೆ ಮದ್ಯವರ್ಜನ ಶಿಬಿರ ಹೊಸ ತಿರುವು ನೀಡಿದ್ದು, ಈ ತರಬೇತಿ ನಿಮ್ಮ ಮುಂದಿನ ಆದಾಯಗಳಿಕೆಗೆ ಭವಿಷ್ಯಕ್ಕೆ ಪಂಚಾಂಗ( ಫೌಂಡೇಶನ್ ) ಆಗಿದ್ದು, ಮನಸ್ಸಿದ್ದರೆ ಮಾರ್ಗ, ದುಡಿಮೆಯೇ ದುಡ್ಡಿನ ತಾಯಿ ಎಂಬ ಮಾತಿನಂತೆ ತಾವೆಲ್ಲರೂ ಸಾಧಕರಾಗಬೇಕು. ಎಲ್ಲಾ ಅವಕಾಶಗಳು ಬಯಸದೆ ಬಂದ ಭಾಗ್ಯ ವಾಗಿರುತ್ತದೆ ಕೈ ಚೆಲ್ಲಬೇಡಿ ದೇವರು ಕೊಟ್ಟ ಸದಾವಕಾಶದ ಮೂಲಕ ನಿಮ್ಮ ಭವಿಷ್ಯ ರೂಪಿಸಿಕೊಳ್ಳಿ ಈ ಮೂಲಕ ಸಮಾಜಕ್ಕೆ ಊರಿಗೆ ಮನೆಗೆ ಭಾದಕರಾಗಾದೆ ಸಾಧಕರಾಗಬೇಕು. ಸ್ವಾಮಿ ವಿವೇಕಾನಂದರ ಮಾತಿನಂತೆ ಈ ದೇಶದಲ್ಲಿ ಅತಿ ಅಮೂಲ್ಯ ಸಂಪತ್ತು ಎಂದರೆ ಅದು ಮಾನವ ಸಂಪತ್ತು, ಇದು ಸದ್ಬಳಕೆಯಾದಾಗ ಪ್ರಗತಿ ಸಾಧ್ಯ, ಪರಮಪೂಜ್ಯ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ಗ್ರಾಮಾಭಿವೃದ್ಧಿ ಯೋಜನೆ ಮೂಲಕ ಮಾನವ ಸಂಪತ್ತಿನ ಸದ್ಬಳಕೆ ಯಶಸ್ವಿಯಾಗುವ ಹಾಗೆ ಮಾಡಿದ್ದಾರೆ. ನಮ್ಮ ಜೀವನ ಸಮಿತಿ ಸದಸ್ಯರು ತಮ್ಮ ಜೀವನ ಸುಧಾರಿಸಿಕೊಳ್ಳುವುದರ ಜೊತೆಗೆ ದುಶ್ಚಟ ಮುಕ್ತ ಸಮಾಜ ನಿರ್ಮಾಣಕ್ಕೆ ಸಹಕರಿಸಬೇಕು ಎಂದು ಸಲಹೆ ನೀಡಿದರು. ಈ ಸಂದರ್ಭದಲ್ಲಿ ಧಾರವಾಡ ಜಿಲ್ಲಾ ನಿರ್ದೇಶಕರಾದ ಶ್ರೀ ಸತೀಶ್ ನಾಯ್ಕ, ಜನಜಾಗೃತಿ ವಿಭಾಗದ ಯೋಜನಾಧಿಕಾರಿ ನಾಗೇಶ್ ವೈ.ಎ, ರುಡ್ಸೆಟ್ ಸಂಸ್ಥೆಯ ಉಪನ್ಯಾಸಕರಾದ ಶ್ರೀ ಜಗದೀಶ್ ಪೂಜಾರ್ ಉಪಸ್ಥರಿದ್ದರು. ಈ ತರಬೇತಿಯಲ್ಲಿ ಓಟ್ಟು 33 ಪಾನಮುಕ್ತ ಬಂಧುಗಳು ಪಾಲ್ಗೊಂಡಿರುತ್ತಾರೆ.
