ಮೈಸೂರು ಪ್ರಾದೇಶಿಕ ವಿಭಾಗದ ಕೆ ಆರ್ ನಗರ ಜಿಲ್ಲೆಯ ಪಾಂಡವಪುರ ತಾಲೂಕಿನ ಶ್ರೀ ಲಕ್ಷ್ಮೀನಾರಾಯಣ ಸ್ವಾಮಿ ಒಕ್ಕಲಿಗರ ಕಲ್ಯಾಣ ಮಂಟಪದಲ್ಲಿ 1850 ನೇ ಮದ್ಯವರ್ಜನ ಶಿಬಿರದ ಉದ್ಘಾಟನಾ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಪುರಸಭೆ ಅಧ್ಯಕ್ಷರಾದ ಶ್ರೀಮತಿ ಜ್ಯೋತಿ, ಶ್ರೀಮತಿ ಲಕ್ಷ್ಮಿ ಬಿ. ವೈ. ಮತ್ತು ಶ್ರೀ ಬಾಬು ಇವರು ದೀಪ ಬೆಳಗಿಸುವ ಮೂಲಕ ನೆರವೇರಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವ್ಯವಸ್ತೆ ಅಧ್ಯಕ್ಷರಾದ ಶ್ರೀ ಎಚ್. ಆರ್. ಧನ್ಯ ಕುಮಾರವರು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕೆ ಆರ್ ನಗರ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕರಾದ ಶ್ರೀ ಎಚ್. ಎಲ್. ಮುರಳಿಧರ್, ಆರಕ್ಷಕ ಠಾಣೆಯ ಹೆಡ್ ಕಾನ್ಸ್ಟೇಬಲ್ ಶ್ರೀ ಪ್ರಸನ್ನ, ರೈತ ಸಂಘ ಜಿಲ್ಲಾಧ್ಯಕ್ಷರಾದ ಶ್ರೀ ಕೆಂಪೇಗೌಡ, ಮಂಡ್ಯ ಮನಮುಲ್ ನಿರ್ದೇಶಕರಾದ ಕಾಡನಹಳ್ಳಿ ಶ್ರೀ ರಾಮಚಂದ್ರ, ಪಾಂಡವಪುರ ಉಪವಿಭಾಗ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿಗಳಾದ ಶ್ರೀ ಸಿ. ಎ. ಅರವಿಂದ್, ಜನಜಾಗೃತಿ ಉಪಾಧ್ಯಕ್ಷರಾದ ಶ್ರೀ ಅಶ್ವತ ಕುಮಾರೇಗೌಡ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಶುಭ ಹಾರೈಸಿದರು.
