ನೆಲಮಂಗಲ ತಾಲೂಕಿನ ತಡಸಿ ಘಟ್ಟದಲ್ಲಿ ಮಾದಕ ವಸ್ತು ವಿರೋಧಿ ದಿನಾಚರಣೆಯಂಗವಾಗಿ ಕರಪತ್ರ ವಿತರಣೆ

Janajagurthi Vedike News

ನೆಲಮಂಗಲ: ಜೂನ್ 26, ಬೆಂಗಳೂರು ಪ್ರಾದೇಶಿಕ ವಿಭಾಗದ ನೆಲಮಂಗಲ ತಾಲ್ಲೂಕಿನ ತಡಸಿ ಘಟ್ಟದಲ್ಲಿ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ಜನಜಾಗೃತಿ ವೇದಿಕೆ ಮತ್ತು ಸೂರ್ಯಕಾಂತಿ ಜ್ಞಾನವಿಕಾಸ ಕೇಂದ್ರದ ಸಹಯೋಗದಲ್ಲಿ ಅಂತರರಾಷ್ಟ್ರೀಯ ಮಾದಕ ವಸ್ತು ವಿರೋಧಿ ದಿನಾಚರಣೆ ಅಂಗವಾಗಿ ಜಾಗೃತಿ ಮೂಡಿಸುವ ಪ್ರಯುಕ್ತ ಕರಪತ್ರ ಬಿಡುಗಡೆಯನ್ನು ಜಿಲ್ಲಾ ಜನಜಾಗೃತಿ ವೇದಿಕೆಯ ಉಪಾಧ್ಯಕ್ಷರಾದ ವೀಣಾ ರಮೇಶ್ ರವರು ಕರಪತ್ರ ಬಿಡುಗಡೆ ಮಾಡಿದರು. “ಮಾದಕ ವಸ್ತುಗಳ ದುಷ್ಪರಿಣಾಮಗಳ ಬಗ್ಗೆ ಜನಜಾಗೃತಿ ವೇದಿಕೆಯ ಯೋಜನಾಧಿಕಾರಿ ಗಣೇಶ್ ಆಚಾರ್ಯ ರವರು ಮಾಹಿತಿ ನೀಡಿದರು. ಸಂಪನ್ಮೂಲ ವ್ಯಕ್ತಿಯಾಗಿ ರಮೇಶ್ ಅಧ್ಯಾಪಕರು ಹಾಗೂ ಪ್ರಾದೇಶಿಕ ಯೋಜನಾಧಿಕಾರಿ ಅಮರ್ ಪ್ರಸಾದ್, ವಿಜಲೆನ್ಸಿಯ ಪ್ರಬಂಧಕರಾದ ವಸಂತ, ಜ್ಞಾನವಿಕಾಸ ಸಮನ್ವಯಾಧಿಕಾರಿ ಅಮೃತ, ತ್ಯಾಮಗೊಂಡ್ಲು ವಲಯದ ಮೇಲ್ವಿಚಾರಕರಾದ ವೇದಾವತಿ, ಸೇವಾ ಪ್ರತಿನಿಧಿ ವಿಜಯಲಕ್ಷ್ಮಿ, ಹಾಗೂ ಪಂಚಾಯಿತಿ ಸದಸ್ಯರಾದ ಮಂಗಳರವರು ಉಪಸ್ಥಿತರಿದ್ದರು.