ನಿಪ್ಪಾಣಿ -2 ತಾಲೂಕಿನ ಮಾಂಗುರ್ ಭೈರವನಾಥ್ ಪ್ರೌಢ ಶಾಲೆಯಲ್ಲಿ ವಿಶ್ವ ಮಾದಕ ವಸ್ತು ವಿರೋಧಿ ದಿನಾಚರಣೆ ಕಾರ್ಯಕ್ರಮ

Janajagurthi Vedike News

ಚಿಕ್ಕೋಡಿ ಜಿಲ್ಲಾ ವ್ಯಾಪ್ತಿಯ ನಿಪ್ಪಾಣಿ -2 ತಾಲೂಕಿನ ಮಾಂಗುರ್ ಭೈರವನಾಥ್ ಪ್ರೌಢ ಶಾಲೆಯಲ್ಲಿ ವಿಶ್ವ ಮಾದಕ ವಸ್ತು ವಿರೋಧಿ ದಿನಾಚರಣೆ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯರಾದ ಶ್ರೀ ಸತ್ಯಪ್ಪ ದಾವಣೆ ರವರು ದೀಪ ಬೆಳಗಿಸುವುದರ ಮೂಲಕ ನೆರವೇರಿಸಿದರು. ತಾಲೂಕಿನ ಯೋಜನಾಧಿಕಾರಿ ಮಂಜು ನಾಯ್ಕ ಸಿ. ರವರು ಪ್ರಸ್ತಾವಿಕ ನುಡಿಗಳನ್ನಾಡಿದರು. ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ಸ್ಥಳೀಯ ವೈದ್ಯರು ಶ್ರೀ ಡಾ.ನಾಗೇಶ್ ತರಾಲ್ ರವರು ಮಾಹಿತಿ ನೀಡಿದರು. ಶಾಲೆಯ ಪ್ರಭಾರಿ ಮುಖ್ಯೋಪಾಧ್ಯಾಯರಾದ ಪಿ. ಜಿ. ಪಾಟೀಲ್ ರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು. ಒಕ್ಕೂಟದ ಅಧ್ಯಕ್ಷರು ಶ್ರೀ ಯಾಸ್ಮಿನ್ ಚೋರ್ ಗಸ್ತಿ, ವಲಯದ ಮೇಲ್ವಿಚಾರಕರು ಶ್ರೀ ಪ್ರವೀಣ್, ಸೇವಾಪ್ರತಿನಿಧಿ ಜ್ಯೋತಿ, ವಿದ್ಯಾಶ್ರೀ, ಶಾಲೆಯ ಸಹ ಶಿಕ್ಷಕರು, ಸಂಘಗಳ ಸದಸ್ಯರು ಉಪಸ್ಥಿತರಿದ್ದರು.