ನವಜೀವನ ಸಮಿತಿ ಸದಸ್ಯರ ಸಭೆ

Janajagurthi Vedike Uncategorized

ಬ್ಯಾಡಗಿ ಯೋಜನಾ ಕಚೇರಿ ವ್ಯಾಪ್ತಿಯ ಮಲ್ಲೂರು ಕಾರ್ಯ ಕ್ಷೇತ್ರದಲ್ಲಿ ನವಜೀವನ ಸಮಿತಿ ಸದಸ್ಯರ ಸಭೆಯನ್ನು ಆಯೋಜನೆ ಮಾಡಲಾಗಿದ್ದು ಸಭೆಯಲ್ಲಿ ಜನಜಾಗೃತಿ ವೇದಿಕೆಯ ಅಧ್ಯಕ್ಷರು ಶ್ರೀ ಪ್ರಭುಗೌಡ ಹೊಂಬರಡಿ
ಹಾಗೂ ಶ್ರೀ ಭಾಸ್ಕರ್ ಸರ್ ಜನಜಾಗ್ರತಿ ಯೋಜನಾಧಿಕಾರಿಗಳು ಧಾರವಾಡ ಪ್ರಾದೇಶಿಕಚೇರಿ ಹಾಗೂ ಶ್ರೀ ರಘುಪತಿ ಗೌಡ ಸರ್ ಯೋಜನಾಧಿಕಾರಿಗಳು ಬ್ಯಾಡಗಿ ಹಾಗೂ ತಾಲೂಕು ನೋಡಲ್ ಅಧಿಕಾರಿ ಹಾಗೂ ಮಲ್ಲೂರು ವಲಯದ ಸೇವಾ ಪ್ರತಿನಿಧಿಗಳು ಹಾಗೂ ಸಿಎಸ್ಸಿ ಸೇವಾದಾರರು ನವ ಜೀವನ ಸಮಿತಿಯ ಸದಸ್ಯರು ಹಾಗೂ ನವ ಜೀವನ ಸಮಿತಿ ಸದಸ್ಯರ ಕುಟುಂಬದವರು ಉಪಸ್ಥಿತರಿದ್ದು ಸಭೆಯನ್ನು ದೀಪ ಬೆಳಗಿಸುವ ಮೂಲಕ ಪ್ರಾರಂಭಿಸಲಾಯಿತು.ಪ್ರಥಮದಲ್ಲಿ ನವ ಜೀವನ ಸಮಿತಿಯ ಸದಸ್ಯರ ಅನಿಸಿಕೆಯೊಂದಿಗೆ ಆರಂಭಿಸಲಾಯಿತು.ಎಲ್ಲಾ ನವ ಜೀವನ ಸಮಿತಿಯ ಸದಸ್ಯರು ತಮ್ಮ ಅನಿಸಿಕೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಮಧ್ಯವರ್ಜನ ಶಿಬಿರವನ್ನು ಆಯೋಜನೆ ಮಾಡಿದ್ದು ನಮಗೂ ಹಾಗೂ ನಮ್ಮ ಕುಟುಂಬದವರಿಗೆ ತುಂಬಾ ಉಪಕಾರವಾಗಿದೆ ಎಂದು ಈ ಮಧ್ಯವರ್ಜನ ಶಿಬಿರದಲ್ಲಿ ತುಂಬಾ ಖುಷಿಯಾಗಿದ್ದು ಈ ಒಂದು ಶಿಬಿರದಿಂದ ನಾವು ನಮ್ಮ ಹಿಂದಿನ ದುಶ್ಚಟವನ್ನು ಬಿಟ್ಟು ಮುಂದಿನ ಜೀವನದ ಭವಿಷ್ಯಕ್ಕಾಗಿ ಮತ್ತು ನಮ್ಮ ಕುಟುಂಬದವರ ಸಂತೋಷಕ್ಕಾಗಿ ಉತ್ತಮ ರೀತಿ ಜೀವನವನ್ನು ಮಾಡುತ್ತಿದ್ದೇವೆ ಈ ಎಲ್ಲಾ ಒಂದು ಉತ್ತಮ ಕಾರ್ಯವನ್ನು ಪೂಜ್ಯ ಶ್ರೀ ಹೆಗ್ಗಡೆಯವರು ನಮಗೋಸ್ಕರ ಮಾಡಿರುವ ಕಾರ್ಯಕ್ರಮದಿಂದ ನಮ್ಮ ಕುಟುಂಬದವರಿಗೆ ನಮಗೆ ಮತ್ತು ತುಂಬಾ ಅನುಕೂಲವಾಗಿದೆ ಆದ್ದರಿಂದ ಅವರಿಗೆ ಗೌರವಪೂರ್ಣವಾದ ಕೃತಜ್ಞತೆಗಳನ್ನು ತಿಳಿಸುತ್ತೇವೆ ಎಂದು ಅನಿಸಿಕೆಯಲ್ಲಿ ವ್ಯಕ್ತಪಡಿಸಿದರು.ಶ್ರೀ ಭಾಸ್ಕರ್ ಸರ್ ಜನಜಾಗ್ರತಿಕಾರಿಗಳು ಪ್ರಾದೇಶಿಕಚೇರಿ ಧಾರವಾಡ ಎಲ್ಲಾ ನವ ಜೀವನ ಸಮತಿ ಸದಸ್ಯರು ಉದ್ದೇಶಿಸಿ ಅವರಲ್ಲಿ ಆಗಿರುವ ಪರಿವರ್ತನೆಗಳ ಬಗ್ಗೆ ಮಾಹಿತಿ ನೀಡಿ ಸಾಮಾಜಿಕ ಹಾಗೂ ವೃತ್ತಿ ಬದುಕಿನಲ್ಲಿ ಗೌರವ ಪೂರಕವಾಗಿ ಹಾಗೂ ಕುಟುಂಬದ ಪ್ರೀತಿ ವಿಶ್ವಾಸಕ್ಕೆ ಪಾತ್ರರಾಗಿ ಮುಂದಿನ ದಿನಗಳಲ್ಲಿ ನವ ಜೀವನ ಸಮಿತಿಯ ಸಭೆಗಳಿಗೆ ಹಾಜರಾಗಿ ಸಂಘಟನೆಯನ್ನು ಉತ್ತಮ ರೀತಿಯಿಂದ ನಡೆಸಿಕೊಂಡು ಹೋಗಿ, ನಿಮ್ಮ ವೈಯಕ್ತಿಕ ಜೀವನದಲ್ಲಿ ಅಭಿವೃದ್ಧಿ ಹೊಂದಿ ಉತ್ತಮ ಜೀವನ ನಡೆಸಿಕೊಂಡು ಹೋಗಿ ನಿಮಗೆ ಮಂಜುನಾಥ ಸ್ವಾಮಿಯ ಆಶೀರ್ವಾದ ಸದಾ ಇರಲಿ ಎಂದು ಹಾರೈಸಿದರು.ಶ್ರೀ ರಘುಪತಿ ಜಿ ಅಧಿಕಾರಿಗಳು ಬ್ಯಾಡಗಿ
ನವ ಜೀವನ ಸಮಿತಿ ಸದಸ್ಯರನ್ನು ಉದ್ದೇಶಿಸಿ ಮುಂದಿನ ದಿನಗಳಲ್ಲಿ ಉತ್ತಮ ರೀತಿ ಸಂಘಟನೆಯನ್ನು ನಡೆಸಿಕೊಂಡು ಹೋಗಿ ಹಾಗೂ ಡಿಸೆಂಬರ್ 12ನೇ ತಾರೀಕಿಗೆ ಮಾಡುವುದಾಗಿ ತಿಳಿಸಿದರು ಹಾಗೂ ಡಿಸೆಂಬರ್ 31 ನೇ ತಾರೀಕಿಗೆ ಸಭೆಯ ಮತ್ತು ಸಂಘಟನೆ ಕುರಿತು ತಾಲೂಕು ಮಟ್ಟದಲ್ಲಿ ಸಂಪನ್ಮೂಲ ವ್ಯಕ್ತಿಗಳ ಉಪಸ್ಥಿತಿಯಲ್ಲಿ ಸಭೆಯನ್ನು ಮಾಡುವುದಾಗಿ ತಿಳಿಸಿದರು.ಶ್ರೀ ಪ್ರಭುಗೌಡ ಹೊಂಬರಡಿ ಜನಜಾಗೃತಿ ವೇದಿಕೆ ಅಧ್ಯಕ್ಷರು ಸದಸ್ಯರನ್ನು ಉದ್ದೇಶಿಸಿ ಮಧ್ಯವರ್ಜನ ಶಿಬಿರದಿಂದ ನಿಮ್ಮಲ್ಲಿ ಆಗಿರುವಂತ ಬದಲಾವಣೆಯಿಂದ ಊರಿನಲ್ಲಿ ನಿಮಗೆ ಉತ್ತಮ ರೀತಿಯಲ್ಲಿ ಗೌರವ ಮತ್ತು ನಿಮಗೆ ನಿಮ್ಮ ಕುಟುಂಬದಿಂದ ಸಿಗುವಂತಹ ಪ್ರೀತಿ ವಿಶ್ವಾಸ ಸಂತೋಷ ಹೆಚ್ಚಾಗಲಿ ಎಂದು ಶುಭ ಹಾರೈಸಿದರು.