“ನವಜೀವನ ಸಮಿತಿ ಸದಸ್ಯರ ಪೋಷಕರ ತರಬೇತಿ ಕಾರ್ಯಕ್ರಮ”

SDM Jana JagruthiVedike News 3 Comments

ಮೈಸೂರು ಜಿಲ್ಲೆಯ ಕೆಆರ್ ಪೇಟೆ ತಾಲೂಕಿನಲ್ಲಿ ನಡೆದ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ನವಜೀವನ ಸಮಿತಿ ಸದಸ್ಯರ ಪೋಷಕರ ತರಬೇತಿ ಕಾರ್ಯಕ್ರಮವು  23.2.2019 ರಂದು ಕೆಆರ್ ಪೇಟೆ ಯೋಜನಾ ಕಚೇರಿಯಲ್ಲಿ ನಡೆಯಿತು.
ನವಜೀವನ ಸಮಿತಿಯ ಬಲಪಡಿಸುವ ನಿಟ್ಟಿನಲ್ಲಿ ಮೈಸೂರು ಜಿಲ್ಲೆಯ ಕೆಆರ್ ಪೇಟೆ ತಾಲೂಕಿನಲ್ಲಿ ವಿಶೇಷವಾಗಿ ಪೋಷಕರನ್ನು ಆಯ್ಕೆ ಮಾಡಿ ಪೋಷಕರಿಗೆ ತರಬೇತಿ ಕಾರ್ಯಕ್ರಮವನ್ನು ನಡೆಸಲಾಯಿತು. ಪೋಷಕರಿಗೆ ಮತ್ತು ನವಜೀವನ ಸಮಿತಿ ಸದಸ್ಯರಿಗೆ ತರಬೇತಿ ಕಾರ್ಯಕ್ರಮವನ್ನು ಯೋಜನಾಧಿಕಾರಿಗಳಾದ ತಿಮ್ಮಯ್ಯ ನಾಯ್ಕ ರವರು ನೀಡಿದರು.
ಈ ಸಂದರ್ಭದಲ್ಲಿ ಜನಜಾಗೃತಿ ವೇದಿಕೆಯ ಸದಸ್ಯರು ಮತ್ತು ತಾಲೂಕಿನ ಯೋಜನಾಧಿಕಾರಿಗಳು ಉಪಸ್ಥಿತರಿದ್ದರು. 
 
 

ಆಯ್ಕೆಗೊಂಡ 10 ನವಜೀವನ ಪೋಷಕರು ಮತ್ತು 45 ನವಜೀವನ ಸಮಿತಿ ಸದಸ್ಯರಿಗೆ ವಿಶೇಷ ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಇದರ ಜೊತೆಗೆ ನವಜೀವನ ಸಮಿತಿ ರಚನೆಯ ಮಾದರಿಯನ್ನು ಕೂಡ ಪೋಷಕರಿಗೆ ತಿಳಿಸಲಾಯಿತು. 

 
Attachments area