ನವಜೀವನ ಸದಸ್ಯರ ಸಭೆಯ ಅನುಪಾಲನೆ ಮತ್ತು ಅಭಿವೃದ್ಧಿಯಲ್ಲಿ ಪೋಷಕರ ಜವಾಬ್ದಾರಿ ಬಹಳ ಮುಖ್ಯವಾದದ್ದು: ಪ್ರದೀಪ್ ಶೆಟ್ಟಿ

Janajagurthi Vedike News

ಧಾರವಾಡ ಜಿಲ್ಲಾ ವ್ಯಾಪ್ತಿಯ ನವ ಜೀವನ ಪೋಷಕರ ತರಬೇತಿಯನ್ನು ಉದ್ಘಾಟಿಸಿ ಆಗಮಿಸಿದ ಜಿಲ್ಲಾ ವ್ಯಾಪ್ತಿಯ 48 ಜನ ಪೋಷಕರಿಗೆ ಮಾರ್ಗದರ್ಶನವನ್ನು ನೀಡಿ ಶುಭ ಹಾರೈಸಿದರು. ತರಬೇತಿಯನ್ನು ಪ್ರಾದೇಶಿಕ ಯೋಜನಾಧಿಕಾರಿ ಭಾಸ್ಕರ್ ನೆರವೇರಿಸಿ. ಯೋಜನೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ನವ ಜೀವನ ಸಮಿತಿಯ ಬಲವರ್ಧನೆಗೆ ಪೋಷಕರ ಪರಿಕಲ್ಪನೆಯ ಉದ್ದೇಶವನ್ನ ಮಾಡಿದ ರೀತಿಯನ್ನು ವಿವರಿಸಿದರು. ಪೋಷಕರ ಜವಾಬ್ದಾರಿಗಳ ಬಗ್ಗೆ ಹಾಗೂ ಜಿಲ್ಲಾ ವ್ಯಾಪ್ತಿಯಲ್ಲಿ ಹಾಗೂ ತಾಲೂಕುಗಳಲ್ಲಿ ನಡೆದ ಶಿಬಿರಗಳ ಅಂಕಿ ಅಂಶಗಳ ಸಹಿತ ಮಾಹಿತಿ ನೀಡಿದರು. ಪೋಷಕರು ಮನೆ ಭೇಟಿ ಮಾಡಬೇಕಾದ ರೀತಿ ಮತ್ತು ನವಜೀವನ ಸಮಿತಿಯನ್ನ ರಚಿಸುವ ಬಗ್ಗೆ ವಿವರಿಸಿದರು. ನವ ಜೀವನ ಪೋಷಕರಿಗೆ ಸಿಗುವ ಗೌರವದನ ಹಾಗೂ ಅದನ್ನು ಪಡೆದುಕೊಳ್ಳುವ ರೀತಿಯ ಬಗ್ಗೆ ತಿಳಿಸಲಾಯಿತು. ಕಾನ್ಫರೆನ್ಸ್ ಸಭೆ, ಸ್ವ ದ್ಯೋಗ ತರಬೇತಿ, ನವ ಜೀವನ ಸದಸ್ಯರಿಗೆ ಸ್ವ ಸಹಾಯ ಸಂಘ ರಚನೆ,ವಾಟ್ಸಪ್ ಗ್ರೂಪ್ ನಿರ್ವಹನೆ,ನವಜೀವನ ಸದಸ್ಯರಿಗೆ ಸಿಗುವ ಸೌಲಭ್ಯಗಳ ಕುರಿತು ತಿಳಿಸಲಾಯಿತು. ತರಬೇತಿಯಲ್ಲಿ ಜಿಲ್ಲಾ ಪ್ರಬಂಧಕರಾದ ಗಣೇಶ್ ರವರು ಉಪಸ್ಥಿತರಿದ್ದು ಸಹಕರಿಸಿದರು.