ಧಾರವಾಡ ಪ್ರಾದೇಶಿಕ ವಿಭಾಗದ ರಾಮದುರ್ಗ ತಾಲೂಕಿನ ಕಲ್ಲೂರಿನ ಶ್ರೀ ಸಿದ್ದೇಶ್ವರ ದೇವಸ್ಥಾನದಲ್ಲಿ ನವ ಜೀವನ ಸದಸ್ಯರ ವಾರ್ಷಿಕೋತ್ಸವ ಕಾರ್ಯಕ್ರಮ ಆಚರಣೆ ಮಾಡಲಾಯಿತು. ವಾರ್ಷಿಕೋತ್ಸವ ಕಾರ್ಯಕ್ರಮದ ಉದ್ಘಾಟನಾ ಕಾರ್ಯಕ್ರಮ, ನವಜೀವನ ಸದಸ್ಯರ ಶ್ರೇಯೋಭಿವೃದ್ಧಿಗಾಗಿ ವಿಶೇಷ ಪೂಜಾ ಕಾರ್ಯಕ್ರಮ ನಮ್ಮ ಜೀವನ ಸದಸ್ಯರಿಗೆ ಆಟೋಟ ಕಾರ್ಯಕ್ರಮ ಆ ಯೋಜನೆ ಮಾಡಿದ್ದು ಉದ್ಘಾಟನೆ ಕಾರ್ಯಕ್ರಮದಲ್ಲಿ ಜಿಲ್ಲಾ ಜನಜಾಗೃತಿ ವೇದಿಕೆ ನಿಕಟ ಪೂರ್ವ ಅಧ್ಯಕ್ಷರಾದ ಶ್ರೀ ಅಶೋಕ್ ಕುಲಗೋಡು, ರಮೇಶ್ ಜಲಗೇರಿ, ನಾಗೇಶ್ ವೈ ಎ, ಗ್ರಾ .ಪಂ. ಅಧ್ಯಕ್ಷರಾದ ವಿಠ್ಠಲ್ ಪಕೀರಪ್ಪ ಸೋಮಗೊಂಡ, ಗ್ರಾ. ಪಂ. ಸದಸ್ಯರು ಹಾಗೂ ನವಜೀವನ ಸಮಿತಿಯ ಸದಸ್ಯರು ಕುಟುಂಬದವರು ಉಪಸ್ಥಿತರಿದ್ದರು
