ನವಜೀವನ ವಾರ್ಷಿಕೋತ್ಸವ ಮೂಡಲಗಿ ತಾಲೂಕು

Janajagurthi Vedike News

ಧಾರವಾಡ ಪ್ರಾದೇಶಿಕ ವಿಭಾಗದ ಅಥಣಿ ಜಿಲ್ಲಾ ಯೋಜನಾ ವ್ಯಾಪ್ತಿಯ ಮೂಡಲಗಿ ತಾಲೂಕಿನ ನಾಗನೂರಿನ ಶ್ರೀ ಅಮೋಘಸಿದ್ದೇಶ್ವರ ದೇವಸ್ಥಾನದ ಆವರಣದಲ್ಲಿ ತಾಲೂಕಿನ ನವ ಜೀವನ ಸದಸ್ಯರ ವಾರ್ಷಿಕೋತ್ಸವ ಕಾರ್ಯಕ್ರಮ ಆಚರಣೆ ಮಾಡಲಾಯಿತು. ವಾರ್ಷಿಕೋತ್ಸವ ಕಾರ್ಯಕ್ರಮದ ಉದ್ಘಾಟನಾ ಕಾರ್ಯಕ್ರಮ ನವಜೀವನ ಸದಸ್ಯರಿಗೆ ಆಟೋಟ ಕಾರ್ಯಕ್ರಮ ಆ ಯೋಜನೆ ಮಾಡಿದ್ದು ಉದ್ಘಾಟನೆ ಕಾರ್ಯಕ್ರಮದಲ್ಲಿ ಜಿಲ್ಲಾ ಜನಜಾಗೃತಿ ವೇದಿಕೆಯ ಸದಸ್ಯರಾದ ಶ್ರೀ ಬರಮಣ್ಣ ಉಪ್ಪಾರ್, ಶ್ರೀ ಶಿವು ಗೋಟುರ್,ತಾಲೂಕಿನ ಕ್ಷೇತ್ರ ಯೋಜನಾಧಿಕಾರಿಯದ ಶ್ರೀ ರಾಜು , ಧಾರವಾಡ ಪ್ರಾದೇಶಿಕ ವಿಭಾಗದ ಜನಜಾಗ್ರತಿ ಯೋಜನಾಧಿಕಾರಿ ನಾಗೇಶ್ ವೈ ಎ, ಮೇಲ್ವಿಚಾರಕರಾದ ಉಮೇಶ್ ಹಡಪದ್, ಶ್ರೀಮತಿ ಲಕ್ಷ್ಮಿ , ಮತ್ತು ಊರಿನ ಗಣ್ಯರಾದ ಬಸವನಗೌಡ ಪಾಟೀಲ್ ಹಾಗೂ ಊರಿನ ಪ್ರಮುಖರು, ನವಜೀವನ ಸಮಿತಿಯ ಸದಸ್ಯರು ಕುಟುಂಬದವರು ಉಪಸ್ಥಿತರಿದ್ದರು