ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ. ಸಿ ಟ್ರಸ್ಟ್ (ರಿ.) ಮೂಡಿಗೆರೆ ತಾಲೂಕು ಖಾಂಡ್ಯ ವಲಯದಲ್ಲಿ ಈ ದಿನ ” ನವಜೀವನ ಜಾಥಾ ಹಾಗೂ ಸಮಾವೇಶ” ಕಾರ್ಯಕ್ರಮ ಹಮ್ಮಿಕೊಂಡಿದ್ದು ಕಾರ್ಯಕ್ರಮದ ಉದ್ಘಾಟನೆಯನ್ನು ಶೃಂಗೇರಿ ವಿಧಾನಸಭಾ ಕ್ಷೇತ್ರದ ಶಾಸಕರಾದ TD ರಾಜೇಗೌಡ ರವರು ಉದ್ಘಾಟಿಸಿದರು . ಕಾರ್ಯಕ್ರಮದ ವಿವರ ಈ ಕೆಳಗಿನಂತಿದೆ.ಸಭಾ ಅಧ್ಯಕ್ಷರು : KS ಗಣೇಶ್ ಕುಂಬಾರಗೋಡು, ಜನಜಾಗೃತಿ ಜಾಥಾ ಮತ್ತು ಸಮಾವೇಶ ಸಮಿತಿ ಅಧ್ಯಕ್ಷರು. ನವಜೀವನ ಸಮಿತಿ ಸದಸ್ಯರಿಗೆ ಅಭಿನಂದನೆ: UC ಗೋಪಾಲಗೌಡರು, ಧರ್ಮದರ್ಶಿಗಳು ಶ್ರೀ ಕ್ಷೇತ್ರ ಉಜ್ಜಯಿನಿ ಆಶಯ ಭಾಷಣ : ಸುಧೀರ್ ಜೈನ್ ಮಾನ್ಯ ಯೋಜನಾಧಿಕಾರಿಗಳು ಮೂಡಿಗೆರೆ ತಾಲೂಕು. ಗಾಂಧಿ ಭಾವಚಿತ್ರಕ್ಕೆ ಪುಷ್ಪಾರ್ಚನೆ :BC ರತ್ನಾಕರ ಜನಜಾಗೃತಿ ವೇದಿಕೆಯ ಸದಸ್ಯರು ಸಂಪನ್ಮೂಲ ವ್ಯಕ್ತಿ : ಪ್ರಶಾಂತ್ ಚಿಪ್ರಾಗುತ್ತಿ, ಸ್ಥಾಪಕಾಧ್ಯಕ್ಷರು ಜಿಲ್ಲಾ ಜನಜಾಗೃತಿ ವೇದಿಕೆ ಚಿಕ್ಕಮಂಗಳೂರು ಮುಖ್ಯ ಅಥಿತಿಗಳು : ಹುಯಿಗೆರೆ ಗಿರೀಶ್, ಸಂಪತ್ ಕುಮಾರ್, ಕವಿತಾ ಲಿಂಗರಾಜು, KL ಚಂದ್ರೆಗೌಡರು, ಸಮಿತಿಯ ಪದಾಧಿಕಾರಿಗಳಾದ ಶ್ರೀ ಮತಿ ಬಿಂಧು, ಶ್ರೀ ಮತಿ ಹೇಮಾವತಿ, ಪೂರ್ಣೇಶ್ ಚಾಕಲುಮನೆ, ಅಲ್ಪೊನ್ಸ್, ಒಕ್ಕೂಟದ ಅಧ್ಯಕ್ಷರು ಮತ್ತಿತರರು ಹಾಜರಿದ್ದರು.ಕಾರ್ಯಕ್ರಮದ ನಿರೂಪಕಿಯಾಗಿ ಹಳೆ ಕಡಬಗೆರೆ ಸರಕಾರಿ ಶಾಲೆಯ ಶಿಕ್ಷಕಿಯಾದ ಶ್ರೀ ಮತಿ ವೀಣಾ ಮೇಡಂ ರವರ ನಿರೂಪಣೆ ಜನಮನ್ನಣೆಗೆ ಪಾತ್ರವಾಗಿದೆ 👏
ಜಾಥಾ ಕಾರ್ಯಕ್ರಮ ನವಜೀವನ ಸಮಿತಿ ಸದಸ್ಯರು, ಜ್ಞಾನ ವಿಕಾಸ ಕೇಂದ್ರದ ಸದಸ್ಯರು, ಒಕ್ಕೂಟದ ಸದಸ್ಯರು,ಭಜನಾ ಮಂಡಳಿ ಸದಸ್ಯರು, ಶೌರ್ಯ ಘಟಕದ ಸ್ವಯಂ ಸೇವಕರು, ಸ್ವಾತಂತ್ರ್ಯ ಹೋರಾಟಗಾರರ ಛದ್ಮಾವೇಶ ವೇಷದಾರಿಗಳು, ಜನಜಾಗೃತಿ ಜಾಥಾಹಾಗೂ ಸಮಾವೇಶ ಸಮಿತಿ ಸದಸ್ಯರು, ಮೇಲ್ವಿಚಾರಕರು, ಸೇವಾಪ್ರತಿನಿಧಿ, CSC ಸೇವಾದಾರರು ಮತ್ತಿತರರು ಸೇರಿ ಸುಮಾರು 1,000 ಸದಸ್ಯರನ್ನೊಳಗೊಂಡ ಜಾಥಾ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು
