ದಾವಣಗೆರೆ ಗ್ರಾಮಾಂತರ ಯೋಜನೆ ವ್ಯಾಪ್ತಿಯ ಎಲೆ ಬೇತೂರು ಗ್ರಾಮ ಪಂಚಾಯಿತಿ ಸಮುದಾಯ ಭವನದಲ್ಲಿ ಮದ್ಯವರ್ಜನ ಶಿಬಿರಕ್ಕೆ ಸೇರಿ ಮದ್ಯವನ್ನು ತ್ಯಜಿಸಿ ಹೊಸ ಬದುಕು ಕಟ್ಟಿಕೊಂಡಿರುವ ನವ ಜೀವನ ಸಮಿತಿ ಸದಸ್ಯರ ನವಜೀವನೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಈ ಕಾರ್ಯಕ್ರಮದಲ್ಲಿ 1927 ನೇ ಮದ್ಯವರ್ಜನ ವ್ಯವಸ್ಥಾಪನ ಸಮಿತಿ ಅಧ್ಯಕ್ಷರಾದ ಎಂ ಷಡಕ್ಷರಪ್ಪ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ನವಜೀವನ ಸದಸ್ಯರಿಗೆ ಶುಭವನ್ನು ಹಾರೈಸಿದರು . ವ್ಯವಸ್ಥಾಪನ ಸಮಿತಿಯ ಗೌರವಾಧ್ಯಕ್ಷರಾದ H.ಬಸವರಾಜಪ್ಪ ರವರು ನವ ಜೀವನ ಸದಸ್ಯರಿಗೆ ತಮ್ಮ ಮುಂದಿನ ಜೀವನವನ್ನು ಹೇಗೆ ಕಟ್ಟಿಕೊಳ್ಳಬೇಕು ಹಾಗೂ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಗೆ ತಾವು ಹೇಗೆ ಚಿರಋಣಿಯಾಗಿರಬೇಕು, ಸಂಸ್ಥೆಯಿಂದ ನಿಮ್ಮ ಬದುಕು ಹಸನ್ ಆಗಿದೆ ನಿಮ್ಮ ಮುಂದಿನ ಜೀವನ ಉಜ್ವಲವಾಗಲಿ ಎಂದು ಹೇಳಿದರು . ತಾಲೂಕಿನ ಯೋಜನಾಧಿಕಾರಿಗಳಾದ ಶ್ರೀಮತಿ ಯಶೋಧ ಮೇಡಂ ರವರು ನವ ಜೀವನ ಸದಸ್ಯರಿಗೆ ತಮ್ಮ ಕುಟುಂಬ ಸದಸ್ಯರೊಂದಿಗೆ ಹೇಗಿರಬೇಕು ಮತ್ತು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯೊಂದಿಗೆ ನಿಮ್ಮ ಸಂಪರ್ಕ ಚೆನ್ನಾಗಿ ಇಟ್ಟುಕೊಳ್ಳಿರಿ ಇದರಿಂದ ನಿಮಗೆ ಬೇರೆ ಯಾವುದೇ ಕೆಟ್ಟ ಮನಸ್ಥಿತಿಯನ್ನು ಹೊಂದಲು ಸಾಧ್ಯವಾಗುವುದಿಲ್ಲ ಎಂದು ತಿಳಿಸಿದರು. ಚಿತ್ರದುರ್ಗ ಪ್ರಾದೇಶಿಕ ವ್ಯಾಪ್ತಿಯ ಜನಜಾಗೃತಿ ವೇದಿಕೆಯ ಯೋಜನಾಧಿಕಾರಿಗಳಾದ ಶ್ರೀ ನಾಗರಜ ಸರವರು ನವಜೀವನ ಸದಸ್ಯರಿಗೆ ಕಳೆದ ಎರಡು ತಿಂಗಳ ಹಿಂದೆ ತಾವು ಹೇಗೆ ಶಿಬಿರಕ್ಕೆ ಬಂದು ಸೇರಿದಿರಿ, ಈಗ ನಿಮ್ಮ ಬದುಕು ಹೇಗೆ ಬದಲಾವಣೆಯಾಗಿದೆ ಈ ಬದಲಾವಣೆಗೆ ಕಾಣದ ನೂರಾರು ಕೈಗಳ ಸಹಕಾರವಿದೆ ಅವರೆಲ್ಲರ ಸಹಕಾರಕ್ಕೆ ಪ್ರತಿಫಲವಾಗಿ ನೀವು ನೀಡಬೇಕಾಗಿರುವುದು ನಿಮ್ಮ ಮುಂದಿನ ಜೀವನವನ್ನು ಉತ್ತಮ ರೀತಿಯಲ್ಲಿ ರೂಪಿಸಿಕೊಳ್ಳುವುದು ಹಾಗೂ ಕುಟುಂಬಕ್ಕೆ ಒಳ್ಳೆಯ ಮಗನಾಗಿ ಹೆಂಡತಿಗೆ ಒಳ್ಳೆಯ ಗಂಡನಾಗಿ ಮಕ್ಕಳಿಗೆ ಒಳ್ಳೆಯ ತಂದೆಯಾಗಿ ಜೀವನವನ್ನು ಸಾಗಿಸಬೇಕು ನಿಮ್ಮ ಕುಟುಂಬ ಅಭಿವೃದ್ಧಿಯಾಗಲು ಮಂಜುನಾಥ ಸ್ವಾಮಿಯ ಅನುಗ್ರಹ ಯಾವಾಗಲೂ ನಿಮ್ಮ ಮೇಲೆ ಇರುತ್ತದೆ ನಿಮ್ಮ ಸಮಸ್ಯೆಗಳಿಗೆ ಹೇಳಿ ನನ್ನ ಜೊತೆಗೆ ದೇವರಿದ್ದಾನೆ ಎಂದು ನಂಬಿಕೆಯನ್ನು ಇಟ್ಟುಕೊಂಡು ಜೀವನವನ್ನು ಮುನ್ನಡೆಸಿ ಎನ್ನುವ ಕಿವಿ ಮಾತನ್ನು ಹೇಳಿದರು. ಈ ಕಾರ್ಯಕ್ರಮದಲ್ಲಿ ವ್ಯವಸ್ಥಾಪನ ಸಮಿತಿಯ ಸದಸ್ಯರಾದ ಟಿ ರಾಜಣ್ಣ ಹಾಗೂ ಮೇಲ್ವಿಚಾರಕರು ಆಂತರಿಕ ಲೆಕ್ಕ ಪರಿಶೋಧಕರು ನಮ್ಮಜೀವನ ಸಮಿತಿಯ ಪೋಷಕರು ಸೇವಾ ಪ್ರತಿನಿಧಿಗಳು ಹಾಗೂ ನಮ್ಮ ಜೀವನ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು ಕಾರ್ಯಕ್ರಮವನ್ನು ಅಣಜಿ ವಲಯದ ಮೇಲ್ವಿಚಾರಕರಾದ ಕೊಟ್ರೇಶ್ ರವರು ನಿರೂಪಣೆ ಮಾಡಿದರು ವಲಯದ ಮೇಲ್ವಿಚಾರಕರಾದ ಶ್ರೀಮತಿ ಶಾಮಲಾ ರವರು ಧನ್ಯ ವಾದವನ್ನು ಹೇಳಿದರು.
