ನಗರದ ಸಾಯಿಕೃಷ್ಣ ಕನ್ವೆನ್ಷನ್ ಹಾಲ್ ನಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃಧ್ದಿ ಯೋಜನೆ ಟ್ರಸ್ಟ್ ವತಿಯಿಂದ ಹಮ್ಮಿಕೊಳ್ಳಲಾದ 1679ನೇ ಮಧ್ಯವರ್ಜನ ಶಿಬಿರ ಕಾರ್ಯಕ್ರಮದಲ್ಲಿ ಜನಪ್ರಿಯ ಶಾಸಕರಾದ ಕೆ.ಹೆಚ್.ಪುಟ್ಟಸ್ವಾಮಿಗೌಡರು ಭಾಗವಹಿಸಿ ಶಿಬಿರಾರ್ಥಿಗಳಿಗೆ ಕುಡಿತದಿಂದಾಗುವ ದುಷ್ಪರಿಣಾಮಗಳ ಬಗ್ಗೆ ಮಾಹಿತಿ ನೀಡಿ ಕುಡಿತವು ಬರೀ ಮನುಷ್ಯನ ದೇಹವನ್ನಷ್ಟೇ ಅಲ್ಲದೇ ಸಂಸಾರದ ಸುಖ,ಸಂತೋಷವನ್ನು ನಾಶ ಮಾಡುತ್ತದೆ ಆದ್ದರಿಂದ ಮುಂದಾದರೂ ನೀವು ಕುಡಿತಕ್ಕೆ ಬಲಿಯಾಗದೇ ಈ ಶಿಬಿರದಿಂದ ಉತ್ತಮ ಅರಿವು,ಮೂಡಿಸಿಕೊಂಡು ನಿಮ್ಮ ಜೀವನವನ್ನು ಸುಂದರವಾಗಿ ರೂಪಿಸಿಕೊಳ್ಳಿರಿ ಎಂದು ಹಿತನುಡಿಗಳನ್ನು ತಿಳಿಸಲಾಯಿತು ಈ ಸಂದರ್ಭದಲ್ಲಿ ಕ್ಷೇತ್ರದ ಧರ್ಮಸ್ಥಳ ಗ್ರಾಮಾಭಿವೃಧ್ದಿ ಟ್ರಸ್ಟ್ ನ ಯೋಜನಾಧಿಕಾರಿಗಳು ಪದಾಧಿಕಾರಿಗಳು, ಮಧ್ಯವರ್ಜನ ಶಿಬಿರದ ಅಧ್ಯಕ್ಷರು,ಸಮಿತಿಯ ಸದಸ್ಯರುಗಳು, ನಗರಸಭೆಯ ಸದಸ್ಯರುಗಳು,ಕೆ.ಹೆಚ್.ಪಿ.ಬಣದ ಮುಖಂಡರುಗಳು,ಕಾರ್ಯಕರ್ತರು ಉಪಸ್ಥಿತರಿದ್ದರು.
