ನಂದಗಡ ಮದ್ಯವರ್ಜನ ಶಿಬಿರ ಬದುಕಿಗೆ ವರದಾನ, ನಾನು ಮದ್ಯಮುಕ್ತನಾಗಿದ್ದು ಒಂದು ಪವಾಡ.

Janajagurthi Vedike Uncategorized

ಖಾನಾಪುರ ತಾಲೂಕಿನ ಗಂದಿಗವಾಡ ಗ್ರಾಮದ ಸಂಜು ಸದೆಪ್ಪ ನಾಯ್ಕರ್ ಉತ್ತಮ ಪಾನಮುಕ್ತ ಬದುಕನ್ನ ಸಾಗಿಸುತ್ತಿದ್ದಾರೆ,2023ರ ನವಂಬರ್ ನಲ್ಲಿ ಖಾನಾಪುರ ತಾಲೂಕಿನ ನಂದಗಡ ಪಟ್ಟಣದಲ್ಲಿ ನಡೆದ ಮದ್ಯವರ್ಜನ ಶಿಬಿರದಲ್ಲಿ ಭಾಗವಹಿಸಿ, ಕಳೆದ 19 ತಿಂಗಳಿನಿಂದ ಉತ್ತಮ ಪಾನಮುಕ್ತ ಬದುಕನ್ನ ಸಾಗಿಸುವುದರ ಜೊತೆಗೆ ಕೇವಲ ಕಡಿಮೆ ಸಮಯದಲ್ಲಿ ಅತಿ ದೊಡ್ಡ ಸಾಧನೆಯ ಮುನ್ನುಡಿಗೆ ಕಾರಣರಾಗಿದ್ದಾರೆ.ಸಂಜು ನಾಯ್ಕರ್ ರವರಿಗೆ ಒಟ್ಟು :- 6 ಎಕ್ರೆ ಜಮೀನು ಇದ್ದು, ಇದರಲ್ಲಿ ಕಬ್ಬಿನ ಬೇಸಾಯ ಮಾಡುತ್ತಿದ್ದಾರೆ, ಸಹೋದರನ ಜೊತೆ ಸೇರಿ ಊರಿನ ಬೇರೆ ರೈತರ 8ಎಕ್ರೆ ಜಮೀನನ್ನು ಸಾಗುವಳಿಗಾಗಿ ಪಡೆದು ಅದರಲ್ಲಿ ಕೂಡ ಕಬ್ಬಿನ ಬೇಸಾಯವನ್ನು ಮಾಡುತ್ತಿದ್ದಾರೆ, ಸಂಜು ರವರು ಪಾನಮುಕ್ತ ರಾದ ಮೇಲೆ ಅಣ್ಣನ ಸಹಕಾರದೊಂದಿಗೆ 64 ಲಕ್ಷ ರೂಪಾಯದಲ್ಲಿ ಎರಡು ಎಕರೆ ಜಮೀನನ್ನ ಖರೀದಿ ಮಾಡಿದ್ದಾರೆ, ಜೊತೆಗೆ 8 ಲಕ್ಷದಲ್ಲಿ ಜಮೀನು ಸಾಗುವಳಿಗಾಗಿ ಟ್ರ್ಯಾಕ್ಟರ್ ಖರೀದಿ ಮಾಡಿರುತ್ತಾರೆ.ನನ್ನ ಗಂಡ ಕುಡಿತ ಮಾಡುವಾಗ ನಮ್ಮ ಅಜ್ಜ, ಅಜ್ಜಿ ನಮ್ಮನ್ನು ನಮ್ಮ ಯಜಮಾನರ ಕುಡಿತದ ಕಾರಣಕ್ಕಾಗಿ ಮನೆಯಿಂದ ಬೇರೆ ಇಟ್ಟಿದ್ದರು, ನಮ್ಮ ಮನೆಯವರು ಶಿಬಿರಕ್ಕೆ ಸೇರಿ ಕುಡಿತ ಬಿಟ್ಟ ನಂತರ ನಮ್ಮ ಅಜ್ಜ ಅಜ್ಜಿ ಮರಳಿ ಮನೆಗೆ ಸೇರಿಸಿಕೊಳ್ಳಲು ಪ್ರಯತ್ನ ಮಾಡಿದರು, ಆದರೆ ನಮ್ಮ ಮನೆಯವರು ಮನಸ್ಸು ಮಾಡಲಿಲ್ಲ.ಎನ್ನುತ್ತಾರೆ ಸಂಜು ಅವರ ಧರ್ಮಪತ್ನಿ.ನಮ್ಮ ಯಜಮಾನರು ಕುಡಿತ ಬಿಡುತ್ತಾರೆ ಅನ್ನೋ ನಂಬಿಕೆ ನಮಗೆ ಇರಲಿಲ್ಲ, ಯಾಕೆಂದರೆ ಹಲವಾರು ಸಾರಿ ಅವರಿಗೆ ಕುಡಿತ ಬಿಡಿಸುವ ಸಲುವಾಗಿ ಬೇರೆ ಬೇರೆ ಕಡೆ ಗಳಲ್ಲಿ ಔಷಧಿ ಕೊಡಿಸಿದ್ದರೂ ಕೂಡ ಅವರು ಬದಲಾಗಿರಲಿಲ್ಲ, ಆದರೆ ಧರ್ಮಸ್ಥಳದ ನಂದಗಡ ಶಿಬಿರಕ್ಕೆ ಸೇರಿಸಿ ಅಂದಾಗ ಮನಸ್ಸಿಲ್ಲದೆ ಕಳಿಸಿದ್ದೆವು, ಆದರೆ ಮಂಜುನಾಥ ಸ್ವಾಮಿಯ ಪವಾಡದಿಂದಾಗಿ, ಅಲ್ಲಿಯ ಮನಪರಿವರ್ತನೆ ಮನೆಯವರ ಬದುಕಲ್ಲಿ ಬದಲಾವಣೆ ತರುವಲ್ಲಿ ಪ್ರಮುಖ ಪಾತ್ರ ವಹಿಸಿತು, ಕೇವಲ 8 ದಿನದಲ್ಲಿ ಈ ರೀತಿಯ ಬದಲಾವಣೆ ಆಗುತ್ತದೆ ಎಂದು ನಾವು ತಿಳಿದಿರಲಿಲ್ಲ, ಸ್ವಾಮಿಯ ಪವಾಡ ಇಂದು ನಮ್ಮ ನೆಮ್ಮದಿಯ ಬದುಕಿಗೆ, ಸಂತೋಷದ ಜೀವನಕ್ಕೆ ದಾರಿಯಾಗಿದೆ ಎನ್ನುತ್ತಾರೆ ಸಂಜು ನಾಯ್ಕರ್ ರವರ ಧರ್ಮಪತ್ನಿ.ಶಿಬಿರದ ಮುಂಚೆ ಒಂದು ದಿವಸಕ್ಕೆ ಒಂದು ಸಾವಿರ ರೂಪಾಯಿ ಖರ್ಚು ಮಾಡುತ್ತಿದ್ದೆ, ಶಿಬಿರಕ್ಕೆ ಸೇರಿ ಪಾನಮುಕ್ತನಾದ ಮೇಲೆ ನನ್ನ ಬದುಕೆ ಬದಲಾಗಿದೆ, ಪೂಜ್ಯರ ಈ ಪುಣ್ಯದ ಕಾರ್ಯಕ್ಕೆ ನಾನು ಕೃತಜ್ಞನಾಗಿದ್ದೇನೆ, ಎನ್ನುತ್ತಾರೆ ಸಂಜು ನಾಯ್ಕರ್ ರವರು.