ನಂಜನಗೂಡು ತಾಲ್ಲೂಕಿನಲ್ಲಿ 152 ನೇ ಗಾಂಧಿಜಯಂತಿ ಪ್ರಯುಕ್ತ ದುಶ್ಚಟಮುಕ್ತ ಸಮಾಜ ನಿರ್ಮಾಣಕ್ಕಾಗಿ ಗಾಂಧಿಸ್ಮ್ರತಿ ಮತ್ತು ದುಶ್ಚಟಗಳ ವಿರುದ್ಧ ಜನಜಾಗೃತಿ ಕಾರ್ಯಕ್ರಮ

Janajagurthi Vedike News

ನಂಜನಗೂಡು ತಾಲ್ಲೂಕಿನಲ್ಲಿ 152 ನೇ ಗಾಂಧಿಜಯಂತಿ ಪ್ರಯುಕ್ತ ದುಶ್ಚಟಮುಕ್ತ ಸಮಾಜ ನಿರ್ಮಾಣಕ್ಕಾಗಿ ಗಾಂಧಿಸ್ಮ್ರತಿ ಮತ್ತು ದುಶ್ಚಟಗಳ ವಿರುದ್ಧ ಜನಜಾಗೃತಿ ಕಾರ್ಯಕ್ರಮವನ್ನು ಶ್ರೀ ಡಿ.ಜಿ. ಸೋಮಶೇಖರಮೂರ್ತಿ ಅಧ್ಯಕ್ಷರು ಅನುರಾಗ ಸೇವಾ ಟ್ರಸ್ಟ್ ಮಕ್ಕಳ ಮನೆ ಇವರು ಉದ್ಘಾಟನೆ ಮಾಡಿ ಮಾತನಾಡಿ ಪೂಜ್ಯ ಧರ್ಮಾಧಿಕಾರಿಗಳ ರೀತಿಯಲ್ಲಿ ಉಳಿದ ಮಠಾಧಿಪತಿಗಳು ಮುಕ್ತ ಸಮಾಜ ನಿರ್ಮಾಣಕ್ಕೆ ಪ್ರಯತ್ನ ಪಟ್ಟಾಗ ರಾಮ ರಾಜ್ಯದ ಕನಸು ಈಡೇರಬಹುದು ಎಂದು ಅಭಿಪ್ರಾಯಪಟ್ಟರು. ಕಾರ್ಯಕ್ರಮದ ಅಧ್ಯಕ್ಷರಾಗಿ ಜಿಲ್ಲಾ ಜನಜಾಗೃತಿ ವೇದಿಕೆಯ ಅಧ್ಯಕ್ಷರಾದ ಶ್ರೀಯುತ ಹಂಧನಹಳ್ಳಿ ಸೋಮಶೇಖರ್ ವಹಿಸಿದ್ದರುಮುಖ್ಯ ಅಥಿತಿಯಾಗಿ ಶ್ರೀಯುತ ಭಾಸ್ಕರ್ .ಎನ್ ಯೋಜನಾಧಿಕಾರಿಗಳು ಜನಜಾಗೃತಿ ಕಾರ್ಯಕ್ರಮ ಇವರು ಜನಜಾಗೃತಿ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿದರು. ಗಾಂದಿಸ್ಮರಣೆಯ ಬಗ್ಗೆ ಉಪನ್ಯಾಸವನ್ನು ಶ್ರೀಯುತ ಮಹೇಶ್ ಅತ್ತಿಖಾನೆ ಸಹಾಯಕ ಪ್ರಾಧ್ಯಾಪಕರು ಕಾನೂನು ಕಾಲೇಜು ಮೈಸೂರು ಇವರು ನೀಡಿದರು.ಶ್ರೀಯುತ ಮಹಾದೇವಪ್ರಸಾದ್ ಅಧ್ಯಕ್ಷರು ಕಾರ್ಯನಿರತ ಪತ್ರಕರ್ತ ಸಂಘ ,ಶ್ರೀಯುತ ವರದರಾಜ್ ಹಾಗೂ ಎಸ್.ಎ. ಎಲ್ ಮೂರ್ತಿ ಜಿಲ್ಲಾಜನಜಾಗೃತಿ ವೇದಿಕೆಯ ಸದಸ್ಯರು ಮೈಸೂರು, ಯೋಜನಾಧಿಕಾರಿ ಆನಂದ ಹಾಗೂ ತಾಲ್ಲೂಕಿನ ಒಕ್ಕೂಟಗಳ ಅಧ್ಯಕ್ಷರುಗಳು,ಪದಾಧಿಕಾರಿಗಳು ಹಾಗೂ ನವಜೀವನ ಸಮಿತಿಯ ಸದಸ್ಯರುಗಳು ,ಸ್ವಸಹಾಯ ಸಂಘದ ಸದಸ್ಯರುಗಳು ಹಾಗೂ ತಾಲ್ಲೂಕಿನ ಯೋಜನೆಯ ಕಾರ್ಯಕರ್ತರು ಭಾಗವಹಿಸಿದ್ದರು.