ಧಾರವಾಡದ ರುಡ್ಸೆಟ್ ಸಂಸ್ಥೆಯಲ್ಲಿ ಹತ್ತು ದಿವಸಗಳಿಂದ ನವಜೀವನ ಸಮಿತಿಯ ಸದಸ್ಯರಿಗಾಗಿ ನಡೆದ ಹೈನುಗಾರಿಕೆ ಮತ್ತು ಎರೆಗೊಬ್ಬರ ತಯಾರಿ ಸ್ವಉದ್ಯೋಗ ತರಬೇತಿಯ ಸಮಾರೋಪದಲ್ಲಿ ನವಜೀವನ ಸದಸ್ಯರಾದ ಶಿಬಿರಾರ್ಥಿಗಳಿಗೆ ಹೈನುಗಾರಿಕೆಯಲ್ಲಿ ಇರುವ ಲಾಭದಾಯಕ ವಿಚಾರಗಳನ್ನು ತಿಳಿಸಿ ಈಗಿನ ಶಿಬಿರಾರ್ಥಿಗಳಾದ ನೀವು ಮುಂದಿನ ಉದ್ಯಮಿಗಳಾಗಬೇಕು ಎಂದು ಕರ್ನಾಟಕ ರಾಜ್ಯದ ನಿವೃತ್ತ ಆರ್ ಸೆಟ್ಟಿ ನಿರ್ದೇಶಕರಾದ ಆರ್ ಬಿ ಮಾನೆ ಮಾರ್ಗದರ್ಶನ ಮಾಡಿದರು. ಪಶುವೈದ್ಯರಾದ ಸಿ ಎಸ್ ಹಾವೇರಿ ಉಪಸ್ಥಿತರಿದ್ದು ಶುಭ ಹಾರೈಸಿದರು. ಈ ಸಂದರ್ಭದಲ್ಲಿ ತರಬೇತಿ ನಿರತ ನವಜೀವನ ಸದಸ್ಯರಿಂದ ಅನುಭವ ಹಂಚಿಕೆ ನಡೆಯಿತು. ಪ್ರಮಾಣ ಪತ್ರವನ್ನು ವಿತರಿಸಿ ತರಬೇತಿಗೆ ವಿರಾಮ ಹಾಡಲಾಯಿತು. ವೇದಿಕೆಯಲ್ಲಿ ರುಡ್ಸೆಟ್ ಸಂಸ್ಥೆಯ ನಿರ್ದೇಶಕರಾದ ಗವಿಸಿದ್ದಪ್ಪ ಕಟ್ಟಿಮನಿ, ಜನಜಾಗೃತಿ ಧಾರವಾಡ ಪ್ರಾದೇಶಿಕ ವಿಭಾಗದ ಯೋಜನಾಧಿಕಾರಿ ಭಾಸ್ಕರ್, ಸಂಸ್ಥೆಯ ಉಪನ್ಯಾಸಕರು ಉಪಸ್ಥಿತರಿದ್ದರು.
