ಧಾರವಾಡ ಪ್ರಾದೇಶಿಕ ವ್ಯಾಪ್ತಿಯ ಹಾವೇರಿ ಜಿಲ್ಲಾ ಜನಜಾಗೃತಿ ವೇದಿಕೆಯ ಸಭೆ & ನೂತನ ಪದಾಧಿಕಾರಿ ಆಯ್ಕೆ

Janajagurthi Vedike News

ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ (ರಿ) ಧರ್ಮಸ್ಥಳ ಹಾವೇರಿ ಜಿಲ್ಲಾ ಘಟಕದ ಪದಾಧಿಕಾರಿಗಳ ಸಭೆಯನ್ನು ದಿನಾಂಕ 10.09.23ರಂದು ಹಾವೇರಿ ಜಿಲ್ಲಾ ಜನಜಾಗೃತಿ ವೇದಿಕೆ ಅಧ್ಯಕ್ಷರಾದ ಡಾ! ಮುತ್ತಣ್ಣ ಯಲಿಗಾರ ಇವರ ಅಧ್ಯಕ್ಷತೆಯಲ್ಲಿ ನಡೆಯಿತು. ಜಿಲ್ಲಾ ವೇದಿಕೆಯ ಮಾಜಿ ಅಧ್ಯಕ್ಷರಾದ ಶ್ರೀ ಮೋಹನ ಮೆಣಸಿನಕಾಯಿಯವರು ಮತ್ತು ಗುತ್ತಲ ಶ್ರೀಮತಿ ಸುನೀತಾ ಶಿತಾಳದ ಇವರು ಲಿಂಗಕ್ಯರಾಗಿರುವ ಬಗ್ಗೆ ಸಭಾ ನಿರ್ಣಯಗೊಳಿಸಿ ಅಗಲಿದ ದಿವ್ಯಾತ್ಮಗಳಿಗೆ ಚಿರಶಾಂತಿ ಕೋರಿ ಸಂತಾಪ ಸೂಚಿಸಲಾಯಿತು. ಜನಜಾಗೃತಿ ವೇದಿಕೆಯ ಯೋಜನಾಧಿಕಾರಿ ಭಾಸ್ಕರ್ ಮಾತನಾಡಿ ವೇದಿಕೆಯ ಮೂಲಕ ಹಾವೇರಿ ಜಿಲ್ಲೆಯಲ್ಲಿ ಪ್ರಸ್ತುತ ವರ್ಷ ನಡೆಸಿದ 03 ಮದ್ಯವರ್ಜನ ಶಿಬಿರಗಳು ಮತ್ತು ವಾರ್ಷಿಕ ಯೋಜನೆಗಳ ಬಗ್ಗೆ ಮಾಹಿತಿಯನ್ನು ಸಭೆಗೆ ತಿಳಿಸಲಾಯಿತು. ನೂತನ2023-25 ಸಾಲಿನ ಪದಾಧಿಕಾರಿಗಳ ಆಯ್ಕೆ ಜಿಲ್ಲಾ ವೇದಿಕೆಯ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದ್ದು ಹಾವೇರಿ ಜಿಲ್ಲಾ ಜನಜಾಗೃತಿ ವೇದಿಕೆಯ ನೂತನ ಅಧ್ಯಕ್ಷರಾಗಿ ಹಾನಗಲ ತಾಲೂಕಿನ ಶ್ರೀ ಕಲ್ಯಾಣಕುಮಾರ್ ಶೆಟ್ಟರ ಉಪಾಧ್ಯಕ್ಷರಾಗಿ ಬ್ಯಾಡಗಿ ತಾಲೂಕಿನ ಶ್ರೀ ನಾಗರಾಜ್ ಆನ್ವೇರಿ ಕೋಶಾಧಿಕಾರಿಗಳಾಗಿ ರಟ್ಟೀಹಳ್ಳಿ ತಾಲೂಕಿನ ಶ್ರೀ ಮಂಜುನಾಥ್ ಯಲಿವಾಳ ಇವರುಗಳನ್ನು ಸರ್ವಸದಸ್ಯರ ಅನುಮೋದನೆಯೊಂದಿಗೆ ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಜಿಲ್ಲಾ ಜನಜಾಗೃತಿ ವೇದಿಕೆಗೆ ಹೊಸ ಸದಸ್ಯರ ಸೇರ್ಪಡೆ ಜಿಲ್ಲಾ ಜನಜಾಗೃತಿ ವೇದಿಕೆಗೆ ಬ್ಯಾಡಗಿ ತಾಲೂಕಿನ ಶ್ರೀ ಬಸವರಾಜ ಅರಬಗೊಂಡ, ಶ್ರೀಮತಿ ಭಾರತಿ ಕುಲಕರ್ಣಿ, ಶ್ರೀ ವೀರಭದ್ರಪ್ಪ ಗೊಡಚಿ, ರಾಣೇಬೆಣ್ಣೂರ ತಾಲೂಕಿನ ಶ್ರೀ ಚಂದ್ರಶೇಖರ ಬಣಕಾರ, ಶ್ರೀ ದೊಡ್ಡವೀರಭದ್ರಪ್ಪ ಮೋಟಗಿ, ರಟ್ಟೀಹಳ್ಳಿ ತಾಲೂಕಿನ ಡಾ! ನಿಂಗಪ್ಪ ಚಳಗೇರಿ, ಶ್ರೀ ಎಸ್.ಬಿ ಗುಳಪ್ಪನವರ, ಶಿಗ್ಗಾವಿ ತಾಲೂಕಿನ ಶ್ರೀ ಶಿವಾನಂದ ಮ್ಯಾಗೇರಿ, ಹಾನಗಲ್ ತಾಲೂಕಿನ ಶ್ರೀ ನಾರಾಯಣ ಸ್ವಾಮಿ, ಶ್ರೀ ವಾಸುದೇವ ಮೂರ್ತಿ ಇವರುಗಳ ಸಾಮಾಜಿಕ ಸೇವೆಗಳನ್ನು ಪರಿಚಯಿಸಿ ವೇದಿಕೆಯ ಸದಸ್ಯರಾಗಿ ಸೇರ್ಪಡೆಗೊಳಿಸಿ ಅನುಮೋದಿಸಲಾಯಿತು. ಗಾಂಧಿ ಜಯಂತಿ ಕಾರ್ಯಕ್ರಮದ ಬಗ್ಗೆ ಅಕ್ಟೋಬರ್ 2 ಗಾಂಧೀಜಿ ಜಯಂತಿ ಕಾರ್ಯಕ್ರಮವನ್ನು ಹಾವೇರಿ ನಗರದಲ್ಲಿ ನಡೆಸಲು ತೀರ್ಮಾನಿಸಲಾಯಿತು ಪೂಜ್ಯ ಹುಕ್ಕೇರಿ ಮಠದ ಪೂಜ್ಯ ಸ್ವಾಮೀಜಿರವರ ಸಾನಿಧ್ಯ ಮತ್ತು ಕರ್ನಾಟಕ ಸರಕಾರದ ಗೌರವಾನ್ವಿತ ಉಪಸಭಾಪತಿಗಳು ಶ್ರೀ ರುದ್ರಪ್ಪ ಲಮಾಣಿ ಮತ್ತು ಬ್ಯಾಡಗಿ ಕ್ಷೇತ್ರದ ಗೌರವಾನ್ವಿತ ಶಾಸಕರು ಶ್ರೀ ಬಸವರಾಜ ಶಿವಣ್ಣನವರ ಉಪಸ್ಥಿತಿಯಲ್ಲಿ ನಡೆಸುವುದಾಗಿ ಸಭಾ ನಿರ್ಣಯ ಕೈಗೊಳ್ಳಲಾಯಿತು. ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮಗಳ ಕುರಿತು ಜಿಲ್ಲೆಯ ಕಾಲೇಜು ಮತ್ತು ಪ್ರೌಢ ಶಾಲೆಗಳ ವಿದ್ಯಾರ್ಥಿಗಳಿಗೆ 60 ಸ್ವಾಸ್ತ್ಯ ಸಂಕಲ್ಪ ಕಾರ್ಯಕ್ರಮಗಳನ್ನು ಅಕ್ಟೋಬರ್ ಮತ್ತು ನವೆಂಬರ್ ತಿoಗಳಲ್ಲಿ ನಡೆಸುವ ಬಗ್ಗೆ ನಿರ್ಣಯ ಕೈಗೊಳ್ಳಲಾಗಿದ್ದು ತಲಾ ಒಂದು ಕಾರ್ಯಕ್ರಮವನ್ನು ತಾಲೂಕ ಮಟ್ಟದಲ್ಲಿ ನಡೆಸಲು ಸರ್ವಾನುಮತದಿಂದ ಅಂಗಿಕರಿಸಲಾಯಿತು. ಶ್ರೀ ಕ್ಷೇತ್ರ ಧರ್ಮಸ್ಥಳದ ಜನಪ್ರಿಯ ಕಾರ್ಯಕ್ರಮಗಳಾದ ವಾತ್ಸಲ್ಯ ಯೋಜನೆ, ಕೆರೆ ಅಭಿವೃದ್ಧಿ, ದೇವಸ್ಥಾನಗಳ ಅಭಿವೃದ್ಧಿ, ರುದ್ರಭೂಮಿ ಯೋಜನೆ, ಜನಮಂಗಳ ಕಾರ್ಯಕ್ರಮಗಳ ಬಗ್ಗೆ ತಿಳಿಸಿ ಗೌರವಾನ್ವಿತ ಸದಸ್ಯರುಗಳಿಗೆ ಮಾಹಿತಿ ನೀಡಲಾಯಿತು. ವೇದಿಕೆಯ ಖಾತೆಯಲ್ಲಿನ ಹಣಕಾಸಿನ ವಿವರಗಳನ್ನು ಸಭೆಗೆ ತಿಳಿಸಲಾಯಿತು. ಧಾರವಾಡ ಪ್ರಾದೇಶಿಕ ನಿರ್ದೇಶಕರಿಂದ ಮಾರ್ಗದರ್ಶನ. ಧಾರವಾಡ ಪ್ರಾದೇಶಿಕ ನಿರ್ದೇಶಕರಾದ ವಸಂತ ಸಾಲ್ಯಾನ್ ರವರು ಮಾತನಾಡಿ ಸಂಸ್ಥೆಯ ದ್ಯೇಯೋದ್ದೇಶಗಳ ಬಗ್ಗೆ ಮಾಹಿತಿ ನೀಡಿದರು. ನಿಕಟ ಪೂರ್ವ ಅಧ್ಯಕ್ಷರಾದ ಡಾ! ಮುತ್ತಣ್ಣ ಯಲಿಗಾರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ನೂತನ ಸದಸ್ಯರು ತಮ್ಮ ಅಭಿಪ್ರಾಯ ಮತ್ತು ಸಲಹೆಗಳನ್ನು ಸೂಚಿಸಿದರು. ನೂತನವಾಗಿ ಆಯ್ಕೆಯಾಗಿರುವ ಕೋಶಾಧಿಕಾರಿ ಶ್ರೀ ಮಂಜುನಾಥ ಯಲಿವಾಳ ಮತ್ತು ನೂತನ ಉಪಾಧ್ಯಕ್ಷರಾದ ಶ್ರೀನಾಗರಾಜ್ ಆನ್ವೇರಿ ಮಾತನಾಡಿದರು. ವೇದಿಕೆಯ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಶ್ರೀ ಕಲ್ಯಾಣಕುಮಾರ ಶೆಟ್ಟರ ಸರ್ವಸದಸ್ಯರ ಸಹಕಾರ ಯಾಚಿಸಿ ಜನಜಾಗೃತಿ ವೇದಿಕೆಯ ಕಾರ್ಯಕ್ರಮಗಳ ಯಶಸ್ವಿಗೆ ಒಂದಾಗಿ ಕೆಲಸ ಮಾಡೋಣ ಎಂದು ಶುಭ ಹಾರೈಸಿದರು. ಜಿಲ್ಲಾ ಕಾರ್ಯಡರ್ಶಿ *ನಾಗರಾಜ್ ಶೆಟ್ಟಿ ಸಭೆಗೆ ಪೂರಕ ತಯಾರಿಯನ್ನ ಉತ್ತಮ ರೀತಿಯಲ್ಲಿ ನಡೆಸಿ ಸ್ವಾಗತಿಸಿದರು. ಹಾನಗಲ್ ಯೋಜನಾಧಿಕಾರಿ ರಾಘವೇಂದ್ರ ವಂದನಾರ್ಪಣೆ ನೀಡಿದರು. ಜಿಲ್ಲಾ ವ್ಯಾಪ್ತಿಯ ಎಲ್ಲಾ ಜನಜಾಗೃತಿ ಸದಸ್ಯರು, ಕ್ಷೇತ್ರ ಯೋಜನಾಧಿಕಾರಿಗಳು ಉಪಸ್ಥಿತರಿದ್ದರು.