ಧಾರವಾಡ ಪ್ರಾದೇಶಿಕ ವಿಭಾಗದ ಚಿಕ್ಕೋಡಿ ಜಿಲ್ಲೆಯ ಜಿಲ್ಲಾ ಜನಜಾಗೃತಿ ವೇದಿಕೆಯ ಪದಾಧಿಕಾರಿಗಳ ಸಭೆಯನ್ನು ಅಧ್ಯಕ್ಷರಾದ ಶ್ರೀ ಶ್ರೀಪಾಲ್ ಮುನ್ನೋಳಿ ಸರ್,ಪ್ರಾದೇಶಿಕ ನಿರ್ದೇಶಕರಾದ ಶ್ರೀ ದುಗ್ಗೆ ಗೌಡ, ಚಿಕ್ಕೋಡಿ ಜಿಲ್ಲಾ ನಿರ್ದೇಶಕರಾದ ಕೃಷ್ಣ ಟಿ ಸರ್ ಹಾಗೂ ಉಪಾಧ್ಯಕ್ಷರಾದ ಶ್ರೀ ಸಂಜಯ ನಾಡಗೌಡ ಮತ್ತು ಇತರ ಎಲ್ಲಾ ಪದಾಧಿಕಾರಿಗಳ ಸಮ್ಮುಖದಲ್ಲಿ ದೀಪ ಪ್ರಜ್ವಲನೆ ಮೂಲಕ ಚಾಲನೆ ನೀಡಿದರು. ಸಭೆಯಲ್ಲಿ ಶಿಬಿರದ ಅನುಷ್ಠಾನ, ಸ್ವಸ್ತ್ಯ ಸಂಕಲ್ಪ ಕಾರ್ಯಕ್ರಮ, ಅಕ್ಟೋಬರ್.2 ಗಾಂಧಿ ಜಯಂತಿ ಕಾರ್ಯಕ್ರಮ, ಸ್ವ ಉದ್ಯೋಗ ತರಬೇತಿ, ಪಾನಮುಕ್ತ ಗ್ರಾಮ ರಚನೆ ಸಾಮಾಜಿಕ ಅರಣ್ಯೀಕರಣ, ಫ್ರೀ ಕಾನ್ಫರೆನ್ಸ್ ಮೀಟಿಂಗ್, ಇತ್ಯಾದಿ ವಿಷಯಗಳ ಬಗ್ಗೆ ಚರ್ಚಿಸಲಾಯಿತು, ಸಭೆಯಲ್ಲಿ ಚಿಕ್ಕೋಡಿ ಜಿಲ್ಲೆಯ ಯೋಜನಾಧಿಕಾರಿಗಳು, ಜನಜಾಗೃತಿ ವಿಭಾಗದ ಯೋಜನಾಧಿಕಾರಿ, ಹಾಗೂ ಜನಜಾಗೃತಿ ವೇದಿಕೆಯ ಸರ್ವ ಸದಸ್ಯರು ಉಪಸ್ಥಿತರಿದ್ದರು.
