ಧಾರವಾಡ ಪ್ರಾದೇಶಿಕ ವಿಭಾಗದ ಬೆಳಗಾವಿ ಜಿಲ್ಲೆಯ ಜಿಲ್ಲಾ ಜನಜಾಗೃತಿ ವೇದಿಕೆಯ ಪದಾಧಿಕಾರಿಗಳ ಸಭೆಯನ್ನು ಅಧ್ಯಕ್ಷರಾದ ಶ್ರೀ ಜಗದೀಶ್ ಹಾರೋಗೋಪ್ಪ,ಪ್ರಾದೇಶಿಕ ನಿರ್ದೇಶಕರಾದ ಶ್ರೀ ದುಗ್ಗೆ ಗೌಡ ನಿಕಟಪೂರ್ವ ಅಧ್ಯಕ್ಷರಾದ ಶ್ರೀ ರಾಜು ದೊಡ್ಡಣ್ಣನವರ್, ಶ್ರೀ ವಿಠ್ಠಲ್ ಪಿಸೆ,ಶ್ರೀ ಚಾರುಕೀರ್ತಿ ಸೈಬಣ್ಣನವರ್ ದೀಪ ಪ್ರಜ್ವಲನೆ ಮೂಲಕ ಚಾಲನೆ ನೀಡಿದರು. ಸಭೆಯಲ್ಲಿ ಶಿಬಿರದ ಅನುಷ್ಠಾನ, ಸ್ವಸ್ತ್ಯ ಸಂಕಲ್ಪ ಕಾರ್ಯಕ್ರಮ, ಅಕ್ಟೋಬರ್.2 ಗಾಂಧಿ ಜಯಂತಿ ಕಾರ್ಯಕ್ರಮ, ಸ್ವ ಉದ್ಯೋಗ ತರಬೇತಿ, ಪಾನಮುಕ್ತ ಗ್ರಾಮ ರಚನೆ ಸಾಮಾಜಿಕ ಅರಣ್ಯೀಕರಣ, ಫ್ರೀ ಕಾನ್ಫರೆನ್ಸ್ ಮೀಟಿಂಗ್, ಇತ್ಯಾದಿಗಳ ವಿಷಯ ಚರ್ಚಿಸಲಾಯಿತು, ಸಭೆಯಲ್ಲಿ ಬೆಳಗಾವಿ ಜಿಲ್ಲೆಯ ಯೋಜನಾಧಿಕಾರಿಗಳು, ಜನಜಾಗೃತಿ ವಿಭಾಗದ ಯೋಜನಾಧಿಕಾರಿ, ಹಾಗೂ ಜನಜಾಗೃತಿ ವೇದಿಕೆಯ ಸದಸ್ಯರು ಉಪಸ್ಥಿತರಿದ್ದರು.
