ಧಾರವಾಡ ಪ್ರಾದೇಶಿಕ ವಿಭಾಗದ ಹಾವೇರಿ ತಾಲೂಕಿನ ಅಗಡಿ ಗ್ರಾಮದಲ್ಲಿ ಗಾಂಧಿ ಸ್ಮೃತಿ ಮತ್ತು ಪಾನಮುಕ್ತರ ಅಭಿನಂದನಾ ಕಾರ್ಯಕ್ರಮ

Janajagurthi Vedike News

ಧಾರವಾಡ ಪ್ರಾದೇಶಿಕ ವಿಭಾಗದ ಹಾವೇರಿ ತಾಲೂಕಿನ ಅಗಡಿ ಗ್ರಾಮದಲ್ಲಿ ಗಾಂಧಿ ಸ್ಮೃತಿ ಮತ್ತು ಪಾನಮುಕ್ತರ ಅಭಿನಂದನಾ ಕಾರ್ಯಕ್ರಮ ಮಾಡಲಾಯಿತು. ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಪೂಜ್ಯ ಶ್ರೀ ಗುರುಲಿಂಗ ಮಹಾಸ್ವಾಮೀಜಿ ಅಕ್ಕಿಮಠ ಅಗಡಿ ವಹಿಸಿದ್ದರು. ಮಹಾತ್ಮ ಗಾಂಧೀಜಿಯವರ ರಾಮರಾಜ್ಯದ ಕನಸನ್ನ ಈ ದೇಶದಲ್ಲಿ ಅನುಷ್ಠಾನ ಮಾಡುವ ನಿಟ್ಟಿನಲ್ಲಿ ಮೊದಲ ಹೆಜ್ಜೆಯಿಟ್ಟವರು ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರು. ಜನಜಾಗೃತಿ ವೇದಿಕೆಯ ಮೂಲಕ ದುಶ್ಚಟ ಮುಕ್ತ ಸಮಾಜ ನಿರ್ಮಾಣ ಮಾಡುತ್ತಿರುವುದು ಶ್ಲಾಘನೀಯ ಸಂಗತಿ, ವಿಶ್ವದಲ್ಲಿ ವ್ಯಸನಿಗಳನ್ನು ಪಾನಮುಕ್ತರನ್ನಾಗಿ ಮಾಡಿ ಅವರನ್ನ ಸಾಧಕರೆಂದು ಗೌರವಿಸುವ ಒಂದು ವೇದಿಕೆ ಇದೆ ಎಂದರೆ ಅದು ಶ್ರೀ ಕ್ಷೇತ್ರ ಧರ್ಮಸ್ಥಳ. ಪ್ರತಿಯೊಂದರಲ್ಲೂ ಒಳ್ಳೇದು ಕೆಟ್ಟದ್ದು ಅಂತ ಇದೆ( ಹಾಲು & ವಿಷದ ಉದಾಹರಣೆ ಕೊಡುತ್ತಾ) ಒಳ್ಳೆಯ ಆಯ್ಕೆ ನಮ್ಮದಾಗಬೇಕು ಎಂದು ತಿಳಿಸಿದರು ಈ ಸಂದರ್ಭದಲ್ಲಿ ಜಿಲ್ಲಾ ನಿರ್ದೇಶಕರಾದ ನಾಗರಾಜ್ ಶೆಟ್ಟಿ, ಗಣ್ಯರಾದ ಶ್ರೀ ನಿಜಲಿಂಗಪ್ಪ ಬಸಗಣ್ಣಿ, ಶ್ರೀ ಹನುಮಂತ ಗೊಲ್ಲರ್, ಶ್ರೀ ಪ್ರಭಾಕರ್ ಮಂಗಳೂರು, ಶ್ರೀ ಪ್ರಬನ್ನ ಪಟ್ಟಣಶೆಟ್ಟಿ, ಶ್ರೀಮತಿ ಸಂಗೀತ ಎಸ್ ತೆರೆದಹಳ್ಳಿ, ಶ್ರೀ ನಾರಾಯಣ ಗೊಂಡ, ಶ್ರೀ ನಾಗೇಶ್ ವೈ. ಎ ಉಪಸ್ಥತಿತರಿದ್ದರು. ಕಾರ್ಯಕ್ರಮದಲ್ಲಿ ಪಾನಮುಕ್ತ ಸದಸ್ಯರಿಗೆ ಅಭಿನಂದಿಸಲಾಯಿತು.