ಧಾರವಾಡ ಪ್ರಾದೇಶಿಕ ವಿಭಾಗದ ಧಾರವಾಡದ ರಾಯಪುರದ ಜ್ಞಾನವಿಕಾಸ ತರಬೇತಿ ಕೇಂದ್ರದಲ್ಲಿ ಪಾನಮುಕ್ತರ ರಾಜ್ಯವ್ಯಾಪಿ ಸ್ವ-ಉದ್ಯೋಗ ಕಾರ್ಯಗಾರಕ್ಕೆ ಚಾಲನೆ ಹಾಗೂ ಸ್ವ ಉದ್ಯೋಗ ನಿರತರ ಸಮಾವೇಶ ಕಾರ್ಯಕ್ರಮ

Janajagurthi Vedike News

ಧಾರವಾಡ ಪ್ರಾದೇಶಿಕ ವಿಭಾಗದ ಧಾರವಾಡದ ರಾಯಪುರದ ಜ್ಞಾನವಿಕಾಸ ತರಬೇತಿ ಕೇಂದ್ರದಲ್ಲಿ ಪಾನಮುಕ್ತರ ರಾಜ್ಯವ್ಯಾಪಿ ಸ್ವ-ಉದ್ಯೋಗ ಕಾರ್ಯಗಾರಕ್ಕೆ ಚಾಲನೆ ಹಾಗೂ ಸ್ವ ಉದ್ಯೋಗ ನಿರತರ ಸಮಾವೇಶ ಕಾರ್ಯಕ್ರಮದ ಉದ್ಘಾಟನೆಯನ್ನು ಪರಮಪೂಜ್ಯ ಡಾ.ಡಿ. ವೀರೇಂದ್ರ ಹೆಗ್ಗಡೆಯವರು ದೀಪ ಪ್ರಜ್ವಲನೆ ಮಾಡುವ ಮೂಲಕ ಮಾಡಿದರು. 1982 ರಲ್ಲಿ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ರುಡ್ಸೆಟ್ ಸಂಸ್ಥೆಗಳನ್ನು ಪ್ರಾರಂಭಿಸಲಾಗಿದ್ದು ಈ ಎರಡು ಯೋಜನೆಗಳು ಎರಡು ಮಾರ್ಗದಲ್ಲಿ ದೇಶದಾದ್ಯಂತ ಹೆಸರು ಮಾಡಿದ್ದು ಈ ದಿನ ಎರಡು ಸಂಸ್ಥೆ ಯನ್ನು ಒಟ್ಟು ಸೇರಿಸಿ ಕಾರ್ಯಕ್ರಮ ಮಾಡುವುದರ ಮೂಲಕ ಹೊಸ ದಾಖಲೆಯ ಇತಿಹಾಸ ನಿರ್ಮಾಣವಾಗಿದೆ ಎಂದು ತಿಳಿಸಿದರು. ದುಶ್ಚಟಗಳಿಗೆ ಯಾರೂ ದಾಸರಾಗಬಾರದು. ಒಮ್ಮೆ ದಾಸರಾದರೆ ಅದು ನಮ್ಮನ್ನು ದಾಸರನ್ನಾಗಿಸಿಕೊಳ್ಳುತ್ತದೆ. ನಿಮಗೆ ಮದ್ಯವರ್ಜನ ಶಿಬಿರದ ಮೂಲಕ ಹೊಸ ಬದುಕು ಸಿಕ್ಕಿದೆ, ರುಡ್ಸೆಟ್ ಸಂಸ್ಥೆಯ ಮೂಲಕ ಅವಕಾಶ ನಿರ್ಮಾಣ ವಾಗಿದೆ ಈ ಅವಕಾಶ ಶಾಶ್ವತ ದಾರಿದೀಪ ಈ ಅವಕಾಶವನ್ನು ಬಳಸಿಕೊಳ್ಳಿರಿ ಎಂದು ತಿಳಿಸಿದರು. ಜೀವನ ದೇವರು ಕೊಟ್ಟ ಅದ್ಭುತ ಪಾತ್ರೆ, ಮಧ್ಯಪಾನ ಪಿಶಾಚಿ ಮಾಡಿದ ರಂದ್ರ ಈ ಚಟವಿದ್ದರೆ ಎಷ್ಟೇ ದುಡಿಮೆ ಮಾಡಿದರು ಅಭಿವೃದ್ಧಿಯಾಗಲು ಸಾಧ್ಯವಾಗುವುದಿಲ್ಲ, ಇಂದು ತಿಳಿಸುತ್ತಾ ಸಂಸಾರವೆಂದರೆ ಜೋಡೆತ್ತಿನ ಗಾಡಿ ಕುಡಿತವಿದ್ದರೆ ಒಂದೆತ್ತಿನ ಎತ್ತಿನಗಾಡಿ ಇದ್ದ ಹಾಗೆ ಬದುಕು ದುಸ್ತರವಾಗುತ್ತದೆ. ಸ್ವ ಉದ್ಯೋಗದ ಮೂಲಕ ನೂರಾರು ಜನ ಮಹಿಳೆಯರು ಸಾಧನೆ ಮಾಡಿರುವುದು ಬಹಳ ಸಂತೋಷದ ಸಂಗತಿ. ನಿಮ್ಮ ಅನಿಸಿಕೆ ಕೇಳಲು ಬಹಳ ಸಂತೋಷವಾಗುತ್ತದೆ ಎಂದು ನುಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ರಾಜಣ್ಣ ಕೊರವಿ ಜಿಲ್ಲಾ ಜನಜಾಗೃತಿ ವೇದಿಕೆ ಅಧ್ಯಕ್ಷರು ಧಾರವಾಡ ಇವರು ವಹಿಸಿದ್ದರು. ಕಾರ್ಯಕ್ರಮದಲ್ಲಿ ಪ್ರಾದೇಶಿಕ ನಿರ್ದೇಶಕರಾದ ಶ್ರೀ ದುಗ್ಗೇಗೌಡ, ರುಡ್ಸೆಟ್ ಸಂಸ್ಥೆಯ ನಿರ್ದೇಶಕರಾದ ಶ್ರೀ ಗವಿಸಿದ್ದಪ್ಪ, ರೇಷ್ಮೆ ನಿಗಮ ಮಂಡಳಿ ಅಧ್ಯಕ್ಷರಾದ ಸವಿತಾ. ವಿ.ಅಮರಶೆಟ್ಟಿ ಇವರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಹೈನುಗಾರಿಕೆ ತರಬೇತಿ ಪಡೆದ 102 ಸದಸ್ಯರು ಹಾಗೂ ಸ್ವ-ಉದ್ಯೋಗ ನಿರತ ಸ್ವ – ಸಹಾಯ ಸಂಘದ ಸದಸ್ಯರು, ವಿವಿಧ ತಾಲೂಕಿನಿಂದ ಆಗಮಿಸಿದ ಪಾನಮುಕ್ತ ಸದಸ್ಯರು, ಜಿಲ್ಲಾ ಜನಜಾಗೃತಿ ವೇದಿಕೆ ಪದಾಧಿಕಾರಿಗಳು, ನಿರ್ದೇಶಕರಾದ ದಿನೇಶ್ ಎಂ, ಸುರೇಶ್ ಮೊಯ್ಲಿ, ತರಬೇತಿ ಸಂಸ್ಥೆಯ ಪ್ರಾಂಶುಪಾಲರು ಮತ್ತು ಸಿಬ್ಬಂದಿಗಳು, ಪ್ರಾದೇಶಿಕ ಕಚೇರಿಯ ಯೋಜನಾಧಿಕಾರಿಗಳು, ಧಾರವಾಡ ಜಿಲ್ಲೆಯ ಕ್ಷೇತ್ರ ಹಾಗೂ ಎಂ.ಐ.ಎಸ್ ಯೋಜನಾಧಿಕಾರಿಗಳು ಉಪಸ್ಥರಿದ್ದರು.