ಧಾರವಾಡ ಪ್ರಾದೇಶಿಕ ವಿಭಾಗದ ಜಗಳೂರು ಜಿಲ್ಲೆಯ ಗುರುಭವನದಲ್ಲಿ ಅಕ್ಟೋಬರ್.2 ಗಾಂಧಿ ಜಯಂತಿ ಪ್ರಯುಕ್ತ ಗಾಂಧಿ ಸ್ಮೃತಿ ಹಾಗೂ ಜನಜಾಗೃತಿ ಸಮಾವೇಶ, ಪದಾಧಿಕಾರಿಗಳ ಸಹ ಮಿಲನ ಕಾರ್ಯಕ್ರಮ

Janajagurthi Vedike News

ಧಾರವಾಡ ಪ್ರಾದೇಶಿಕ ವಿಭಾಗದ ಜಗಳೂರು ಜಿಲ್ಲೆಯ ಗುರುಭವನದಲ್ಲಿ ಅಕ್ಟೋಬರ್.2 ಗಾಂಧಿ ಜಯಂತಿ ಪ್ರಯುಕ್ತ ಗಾಂಧಿ ಸ್ಮೃತಿ ಹಾಗೂ ಜನಜಾಗೃತಿ ಸಮಾವೇಶ, ಪದಾಧಿಕಾರಿಗಳ ಸಹ ಮಿಲನ ಕಾರ್ಯಕ್ರಮ ನಡೆಸಲಾಗಿದ್ದು, ಉದ್ಘಾಟನೆಯನ್ನು ಗೌರವಾನ್ವಿತ ಶಾಸಕರಾದ ಎಸ್. ವಿ ರಾಮಚಂದ್ರಪ್ಪ, ಚಿತ್ರದುರ್ಗ ಜಿಲ್ಲೆಯ ನಿಕಟಪೂರ್ವ ಅಧ್ಯಕ್ಷರಾದ ಬಿ.ಸಿ ಸಂಜೀವ್ ಮೂರ್ತಿ, ಜಿಲ್ಲಾ ಜನಜಾಗೃತಿ ವೇದಿಕೆಯ ಅಧ್ಯಕ್ಷರಾದ ಶ್ರೀ ಷಡಕ್ಷರಪ್ಪ, ಜಿಲ್ಲಾ ನಿರ್ದೇಶಕರಾದ ಶ್ರೀ ಜನಾರ್ಧನ್, ಚರ್ಚಿನ ಧರ್ಮಗುರುಗಳಾದ ಫಾ” ವಿಲಿಯಂ ಮಿರಾಂಡೋ,ಉಪಾಧ್ಯಕ್ಷರಾದ ಶ್ರೀ ಅರವಿಂದ್ ರವರು ದೀಪ ಪ್ರಜ್ವಲನೆ ಮೂಲಕ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ತಾಲೂಕಿನ ಯೋಜನಾಧಿಕಾರಿಗಳು ಜನಜಾಗೃತಿ ಭಾಗದ ಯೋಜನಾಧಿಕಾರಿಗಳು ಹಾಗೂ ಜಿಲ್ಲಾ ಜನಜಾಗೃತಿ ಪದಾಧಿಕಾರಿಗಳು ಪಾನಮುಕ್ತ ಸದಸ್ಯರು ಫಲಾನುಭವಿಗಳು ಉಪಸ್ಥರಿದ್ದರು. ಗೌರವಾನ್ವಿತ ಶಾಸಕರು ಶ್ರೀಕ್ಷೇತ್ರದ ಕಾರ್ಯಕ್ರಮಗಳ ಬಗ್ಗೆ ಅಪಾರ ಮೆಚ್ಚುಗೆ ವ್ಯಕ್ತಪಡಿಸಿದರು. ಪಾನ ಮುಕ್ತರಿಗೆ ಅಭಿನಂದನೆ ಜಾಥಾ ಕಾರ್ಯಕ್ರಮ ಬಹಳ ಅಚ್ಚುಕಟ್ಟಾಗಿ ನೆರವೇರಿದ್ದು ಸಾರ್ವಜನಿಕರ ಪ್ರಶಂಸೆಗೆ ಪಾತ್ರವಾಯಿತು.