ಧಾರವಾಡ ಜಿಲ್ಲೆಯ ಹುಬ್ಬಳ್ಳಿ ಗ್ರಾಮೀಣ ಯೋಜನೆ ವ್ಯಾಪ್ತಿಯ ಉಣಕಲ್ ವಿಠಲ ಮಂದಿರದಲ್ಲಿ ನಡೆದ ಮಧ್ಯವರ್ಜನ ಶಿಬಿರದ ಸಮಾರೋಪ ಕಾರ್ಯಕ್ರಮ ನಡೆಯಿತು. ಬದುಕು ರೂಪಿಸುವ ಸುಂದರ ಕಾರ್ಯಕ್ರಮ. ಕಾರ್ಯಕ್ರಮದಲ್ಲಿ ಆಶೀರ್ವಚನವನ್ನು ಹುಬ್ಬಳ್ಳಿಯ ರುದ್ರಾಕ್ಷಿ ಮಠದ ಪೂಜ್ಯಶ್ರೀ ಬಸವಲಿಂಗ ಮಹಾಸ್ವಾಮಿಗಳು ನೀಡಿ ಧರ್ಮಸ್ಥಳದ ಪೂಜ್ಯ ಹೆಗ್ಗಡೆ ಯವರು ಹಮ್ಮಿಕೊಂಡ ಜನ ಕಲ್ಯಾಣ ಕಾರ್ಯಕ್ರಮಗಳಲ್ಲಿ ಜನಜಾಗೃತಿ ಕಾರ್ಯಕ್ರಮ ಒಂದು ಇದು ಅತಂತ್ರ ಬದುಕನ್ನ ಸರಿದೂಗಿಸುವ ಸುಂದರ ಕಾರ್ಯಕ್ರಮ ಎಂದು ಬಣ್ಣಿಸಿ ಶುಭ ಹಾರೈಸಿದರು. ಸಮಾರಂಭದಲ್ಲಿ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ರಾಜ್ಯಾಧ್ಯಕ್ಷರಾದ ರಾಜಣ್ಣ ಕೊರವಿಯವರು ಯೋಜನೆಯ ಜನಜಾಗೃತಿ ಕಾರ್ಯಕ್ರಮವು ಯಶಸ್ವಿಯಾಗುತ್ತಿರುವ ರೀತಿ ಹಾಗೂ ಪೂಜ್ಯರು ಅದಕ್ಕೆ ಕೊಡುತ್ತಿರುವ ಮಹತ್ವದ ಬಗ್ಗೆ ವಿವರಿಸಿ ರಾಜ್ಯ ವ್ಯಾಪಿ ನಡೆಯುತ್ತಿರುವ ಶಿಬಿರಗಳ ಯಶಸ್ಸಿನ ಬಗ್ಗೆ ಕೊಂಡಾಡಿ ಸಂಘಟಕನ್ನು ಅಭಿನಂದಿಸಿದರು.ಮುಖ್ಯ ಅತಿಥಿಗಳಲ್ಲಿ ಓರ್ವರಾದ ಪೂಜ್ಯರ ಕಾರ್ಯಾಧ್ಯಕ್ಷತೆಯ ಜೆ ಎಸ್ ಎಸ್ ಶಿಕ್ಷಣ ಸಂಸ್ಥೆಗಳ ಪ್ರಾಚಾರ್ಯರಾದ ಡಾಕ್ಟರ್ ಅಜಿತ್ ಪ್ರಸಾದ್ ರವರು ಪೂಜ್ಯರ ದೂರದೃಷ್ಟಿ ಅವರು ಹಮ್ಮಿಕೊಂಡ ಕಾರ್ಯಕ್ರಮಗಳನ್ನ ವಿಡಂಬಣೆ ಮೂಲಕ ವಿವರಿಸಿ ಯೋಜನೆ ಹಾಗೂ ಜನಜಾಗೃತಿ ಕಾರ್ಯಕ್ರಮಗಳು, ಧಾರ್ಮಿಕ ಹಾಗೂ ಶಿಕ್ಷಣ ಸಂಸ್ಥೆಗಳಲ್ಲಿ ಪೂಜ್ಯರು ಮಾಡಿದ ಕ್ರಾಂತಿಯ ಬಗ್ಗೆ ತಿಳಿಯಪಡಿಸಿ ಪಾನಮುಕ್ತರಾದ ಶಿಬಿರಾರ್ಥಿಗಳನ್ನು ಅಭಿನಂದಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವ್ಯವಸ್ಥಾಪಕ ಸಮಿತಿಯ ಅಧ್ಯಕ್ಷರು ಖ್ಯಾತ ನ್ಯಾಯವಾದಿಗಳಾದ ಎಸ್ ಎಸ್ ಪಾಟೀಲ್ ರವರು ವಹಿಸಿ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿ ಧನ್ಯನಾದೆ ಎಂದು ತಿಳಿಸಿದರು. ಧಾರವಾಡ ಜಿಲ್ಲಾ ನಿರ್ದೇಶಕರಾದ ಪ್ರದೀಪ್ ಶೆಟ್ಟಿಯವರು ಕಾರ್ಯಕ್ರಮದ ಯಶಸ್ವಿಗೆ ಕೈಜೋಡಿಸಿದವರನ್ನ ಸ್ಮರಿಸಿ ಶಿರಾರ್ಥಿ ಬಂಧುಗಳಿಗೆ ಉತ್ತಮ ಬದುಕು ನಡೆಸಲು ಪೂರಕವಾದ ಮಾರ್ಗದರ್ಶನ ನೀಡಿದರು. ವೇದಿಕೆಯಲ್ಲಿ ನಿಕಟಪೂರ್ವ ಜನಜಾಗೃತಿ ವೇದಿಕೆಯ ಅಧ್ಯಕ್ಷರಾದ ಫಿರೋಜ್ ಕಂಡೇಕರ್, ಯೋಗ ಶಿಕ್ಷಕರಾದ ಮುತ್ತುರಾಜ್, ಜನಜಾಗೃತಿ ವೇದಿಕೆಯ ಸದಸ್ಯರುಗಳಾದ ಮಹಾವೀರ್, ಯೋಜನಾಧಿಕಾರಿಗಳಾದ ಕುಮಾರಿ ಸುಧಾ, ವ್ಯವಸ್ಥಾಪನ ಸಮಿತಿಯ ಪದಾಧಿಕಾರಿಗಳು, ಜನಜಾಗೃತಿ ವೇದಿಕೆಯ ಪ್ರಾದೇಶಿಕ ಯೋಜನಾಧಿಕಾರಿ ಭಾಸ್ಕರ್ ಉಪಸ್ಥಿತರಿದ್ದರು. ಕಾರ್ಯಕ್ರಮದ ಯಶಸ್ಸಿನಲ್ಲಿ ಮೇಲ್ವಿಚಾರಕರಾದ ಉಮೇಶ್, ದೇವಿದಾಸ್, ಇತರರು ಸಹಕರಿಸಿದರು.
