ಧಾರವಾಡ ಜಿಲ್ಲಾ ವ್ಯಾಪ್ತಿಯ ಧಾರವಾಡ ನಗರ ಮತ್ತು ಧಾರವಾಡ ಗ್ರಾಮೀಣ ತಾಲೂಕುಗಳ ನವಜೀವನ ಸದಸ್ಯರ ನವಜೀವನೋತ್ಸವ ಕಾರ್ಯಕ್ರಮ

Janajagurthi Vedike News

ಧಾರವಾಡ ಪ್ರಾದೇಶಿಕ ವಿಭಾಗದ ಧಾರವಾಡ ಜಿಲ್ಲಾ ವ್ಯಾಪ್ತಿಯ ಧಾರವಾಡ ನಗರ ಮತ್ತು ಧಾರವಾಡ ಗ್ರಾಮೀಣ ತಾಲೂಕುಗಳ ನವಜೀವನ ಸದಸ್ಯರ ನವಜೀವನೋತ್ಸವ ಕಾರ್ಯಕ್ರಮ ನಡೆಯಿತು. ಗೌರವಾನ್ವಿತ ಪ್ರಾದೇಶಿಕ ನಿರ್ದೇಶಕರಾದ ಶ್ರೀಮತಿ ದಯಾಶೀಲ ರವರು ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ಜನಜಾಗೃತಿ ಯೋಜನಾಧಿಕಾರಿಗಳಾದ ಭಾಸ್ಕರ್ ಎನ್. ರವರು ಪ್ರಾಸ್ತವಿಕ ನುಡಿಗಳನ್ನಾಡಿದರು. ಜಿಲ್ಲಾ ಜನಜಾಗೃತಿಯ ಅಧ್ಯಕ್ಷರಾದ ಶ್ರೀಯುತ ಸಂತೋಷ ಕುಮಾರ ಶೆಟ್ಟಿ ಯವರು ಅಧ್ಯಕ್ಷೀಯ ನುಡಿಗಳನ್ನಾಡಿದರು. ಅತಿಥಿಗಳಾಗಿ ಆಗಮಿಸಿದ ಜಿಲ್ಲಾ ವೇದಿಯ ಸದಸ್ಯರಾದ ವಸಂತ, ಪತ್ರಕರ್ತರಾದ ಗುರುರಾಜ, ಧಾರವಾಡ ನಗರ ಮತ್ತು ಧಾರವಾಡ ಗ್ರಾಮೀಣ ತಾಲೂಕುಗಳ ಯೋಜನಾಧಿಕಾರಿಗಳಾದ ಅಶೋಕ, ಮಯೂರ, ಧಾರವಾಡ ಮತ್ತು ಧಾರವಾಡ ಗ್ರಾಮೀಣ ತಾಲೂಕುಗಳ ಮೇಲ್ವಿಚಾರಕರು, ಜನಜಾಗೃತಿ ಮೇಲ್ವಿಚಾರಕರು, ನವಜೀವನ ಪೋಷಕರು ಮತ್ತು ನವಜೀವನ ಸದಸ್ಯರು ಉಪಸ್ಥಿತರಿದ್ದರು.