ಧಾರವಾಡ ಜಿಲ್ಲಾ ಜನಜಾಗೃತಿ ವೇದಿಕೆಯ ಸಭೆ

Janajagurthi Vedike News

ಧಾರವಾಡ ಪ್ರಾದೇಶಿಕ ವ್ಯಾಪ್ತಿಯ ಧಾರವಾಡ ಜಿಲ್ಲಾ ಜನಜಾಗೃತಿಕ ಸಭೆಯು ಯೋಜನೆಯ ಜಿಲ್ಲಾ ಕಚೇರಿ ಸಭಾಂಗಣದಲ್ಲಿ ಅಧ್ಯಕ್ಷರಾದ ಸಂತೋಷ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. 2023-24 ಸಾಲಿನ ಕ್ರಿಯಾಯೋಜನೆಗಳ ಬಗ್ಗೆ ಸಮಗ್ರ ಚರ್ಚೆ ನಡೆದು ಅನುಷ್ಠಾನಗಳ ಬಗ್ಗೆ ಚರ್ಚಿಸಲಾಯಿತು. ಈ ಸಂದರ್ಭದಲ್ಲಿ ಕಾರ್ಯಕ್ರಮಗಳ ಅನುಷ್ಠಾನಕ್ಕೆ ಇರುವ ಅನುದಾನಗಳ ಬಗ್ಗೆk ಜನಜಾಗೃತಿ ಸದಸ್ಯರಿಗೆ ತಿಳಿಸಿ ಈ ಕೆಳಗಿನ ವಿಚಾರಗಳ ಬಗ್ಗೆ ಚರ್ಚಿಸಲಾಯಿತು.* ಮಧ್ಯವರ್ಜನ ಶಿಬಿರಗಳನ್ನು ನಡೆಸುವ ಸಂದರ್ಭದಲ್ಲಿ ಎರಡು ತಿಂಗಳ ಮುಂಚಿತವಾಗಿ ಸಮುದಾಯ ಭವನ ಗೊತ್ತುಪಡಿಸಿ ಜಾಗೃತಿ ವೇದಿಕೆ ಸದಸ್ಯರನ್ನು ಸಕ್ರಿಯಗೊಳಿಸಿ ಯಶಸ್ವಿ ಶಿಬಿರ ನಡೆಸುವ ಬಗ್ಗೆ.* ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮಗಳನ್ನು ತಾಲೂಕು ಮಟ್ಟದಲ್ಲಿ ಯಶಸ್ವಿಯಾಗಿ ಅನುಷ್ಠಾನಿಸುವ ಬಗ್ಗೆ.* ಸ್ವಾಸ್ಥ್ಯ ಸಂಕಲ್ಪ ಸಂಪನ್ಮೂಲ ವ್ಯಕ್ತಿಗಳ ತರಬೇತಿ ಹಮ್ಮಿಕೊಳ್ಳುವ ಬಗ್ಗೆ.* ನವ ಜೀವನ ಸಮಿತಿಗಳನ್ನ ನೋಡಿಕೊಳ್ಳಲು ಪೋಷಕರ ತರಬೇತಿಯನ್ನು ಮಾಡುವ ಕುರಿತು.* ಮಾದಕ ವಸ್ತು ವಿರೋಧಿ ದಿನಾಚರಣೆಯನ್ನು ಜೈಲುಗಳಲ್ಲಿ ಮಾಡುವ ಬಗ್ಗೆ.* ಸಾಮಾಜಿಕ ಅರಣ್ಯೀಕರಣದ ಗಿಡ ನಾಟಿಯನ್ನು ಹುಬ್ಬಳ್ಳಿ ಧಾರವಾಡ ಮಹಾನಗರಪಾಲಿಕೆಯ ಸಹಕಾರದೊಂದಿಗೆ ಮಾಡುವ ಬಗ್ಗೆ. * ವಿಪತ್ತು ನಿರ್ವಹಣಾ ಕಾರ್ಯಕ್ರಮಗಳ ಪರಿಣಾಮಕಾರಿ ಯಶಸ್ವಿ ಕುರಿತು ಜನಜಾಗೃತಿ ವೇದಿಕೆಗೆ ಸದಸ್ಯರುಗಳ ಸೇರ್ಪಡೆಯ ಬಗ್ಗೆ * ಸತತ ಮೂರು ಸಭೆಗಳಿಗೆ ಗೈರು ಹಾಜರಾದ ಸದಸ್ಯರನ್ನು ಕೈ ಬಿಡುವ ಬಗ್ಗೆ. ಜನಜಾಗೃತಿ ವೇದಿಕೆ ಸದಸ್ಯರಿಗೆ ಬ್ಯಾಡ್ಜ ವಿತರಣೆ ಕಳೆದ ಬಾರಿಯ ನಿರ್ಣಯದಂತೆ ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯರಿಗೆ ಬ್ಯಾಡ್ಜ ವಿತರಣೆ ಮಾಡಲಾಯಿತು. ರಾಜ್ಯಾಧ್ಯಕ್ಷರ ಹಿತನುಡಿ ಸಭೆಗೆ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ರಾಜ್ಯಾಧ್ಯಕ್ಷರಾದ ರಾಜಣ್ಣ ಕೊರವಿ ಅವರು ಆಗಮಿಸಿ ಪೂಜ್ಯರ ಕನಸನ್ನು ನನಸಾಗಿಸಲು ನನಗೆ ರಾಜ್ಯಾಧ್ಯಕ್ಷ ಹುದ್ದೆ ನಿಮ್ಮಿಂದಾಗಿ ಸಿಕ್ಕಿದೆ, ರಾಜ್ಯದ್ಯಂತ ಕಾರ್ಯಕ್ರಮದಲ್ಲಿ ಭಾಗವಹಿಸಿದಾಗ ಹೆಮ್ಮೆಯಾಗುತ್ತಿದೆ, ನಿಮ್ಮೆಲ್ಲರ ಸಹಕಾರ ದಿಂದ ನಮ್ಮ ಜಿಲ್ಲಾ ವೇದಿಕೆಯ ಕಾರ್ಯಕ್ರಮಗಳನ್ನು ಯಶಸ್ವಿಗೊಳಿಸೋಣ ಎಂದರು. ರಾಜ್ಯದ್ಯಕ್ಷರಿಂದ ಎಲ್ಲಾ ಜಿಲ್ಲಾ ಸದಸ್ಯರಿಗೆ ಗೌರವಾರ್ಪಣೆ ಸತ್ಕಾರ.ಸಭೆಗೆ ಆಗಮಿಸಿದ ಎಲ್ಲಾ ಜಿಲ್ಲಾ ಸಮಿತಿಯ ಸದಸ್ಯರನ್ನು ರಾಜ್ಯಾಧ್ಯಕ್ಷರು ಶಾಲು ಹಾರ ಧರ್ಮಸ್ಥಳದ ಚರಿತ್ರೆಯ ಪುಸ್ತಕವನ್ನು ನೀಡಿ ಅಭಿನಂದಿಸಿ ಮಧ್ಯಾಹ್ನದ ಊಟದ ವ್ಯವಸ್ಥೆಯನ್ನು ಮಾಡಿದ್ದರು. ಅಧ್ಯಕ್ಷರ ನುಡಿ ಸಂತೋಷ್ ಶೆಟ್ಟಿ ಅವರು ಪ್ರಾದೇಶಿಕ ಮಟ್ಟದಲ್ಲಿ ನಮ್ಮ ಜಿಲ್ಲಾ ವೇದಿಕೆಯ ಸಾಧನೆ ಉತ್ತಮವಾಗಿ ನಡೆಯಬೇಕು ಆ ಹಿನ್ನಲೆಯಲ್ಲಿ ನಾವೆಲ್ಲರೂ ಜವಾಬ್ದಾರಿಯನ್ನು ಅರಿತು ಸೇವೆ ಸಲ್ಲಿಸೋಣ ಎಂದರು. ಸಭೆಯಲ್ಲಿ ಧಾರವಾಡ ಜಿಲ್ಲಾ ನಿಕಟ ಪೂರ್ವ ಅಧ್ಯಕ್ಷರಾದ ಫಿರೋಜ್ ಖಂದೇಕರ್, ಆಹ್ವಾನಿತ ಜಿಲ್ಲಾ ವೇದಿಕೆಯ ಸದಸ್ಯರು ಉಪಸ್ಥಿತರಿದ್ದರು. ಸಭೆಯ ಸಂಘಟನೆ ಉತ್ತಮ ರೀತಿಯಲ್ಲಿ ಸಭೆಯನ್ನು ಸಂಘಟಿಸಿ ಆಗಮಿಸಿದ ಸದಸ್ಯರ ಪರಿಚಯದೊಂದಿಗೆ ಎಲ್ಲರನ್ನು ಸ್ವಾಗತಿಸಿದರು ಜಿಲ್ಲಾ ನಿರ್ದೇಶಕರಾದ ಪ್ರದೀಪ್ ಶೆಟ್ಟಿ ಸರ್. ಈ ಸಂದರ್ಭ ಜಿಲ್ಲಾ ವ್ಯಾಪ್ತಿಯ ಯೋಜನಾಧಿಕಾರಿಗಳಾದ ಅಶೋಕ್, ಶ್ರೀಕಾಂತ್, ಲೀಲಾ ಮೂರ್ತಿ, ಸುಧಾ, ಮಯೂರ್, ಪ್ರಶಾಂತ ನಾಯ್ಕ, ಜಿಲ್ಲಾ ಪ್ರಬಂಧಕರಾದ ಗಣೇಶ್ ನಾಯ್ಕ ಉಪಸ್ಥಿತರಿದ್ದರು. ಜನಜಾಗೃತಿ ಕಾರ್ಯಕ್ರಮದ ಯೋಜನಾಧಿಕಾರಿ ಭಾಸ್ಕರ್ ಕಾರ್ಯಕ್ರಮವನ್ನು ನಿರ್ವಹಿಸಿದರು