ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾ ಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ (ರಿ) ಧಾರವಾಡ ಜಿಲ್ಲೆ ಅಖಿಲ ಕರ್ನಾಟಕ ಜಿಲ್ಲಾ ಜನಜಾಗೃತಿ ವೇದಿಕೆ ಧಾರವಾಡ ಇವರ ಸಹಯೋಗದೊಂದಿಗೆ ಪರಮಪೂಜ್ಯ ಪದ್ಮಭೂಷಣ ರಾಜ್ಯರ್ಷಿ ಡಾ.ಡಿ. ವೀರೇಂದ್ರ ಹೆಗ್ಗಡೆಯವರ ಮತ್ತು ಮಾತ್ರಶ್ರೀ ಡಾ. ಹೇಮಾವತಿ.ವಿ. ಹೆಗ್ಗಡೆಯವರ ಶುಭಾ ಶೀರ್ವಾದಗಳೊಂದಿಗೆ ಗಾಂಧಿ ಸ್ಮೃತಿ ಮತ್ತು ನವಜೀವನ ಸಮಿತಿ ಸದಸ್ಯರಿಗೆ ಅಭಿನಂದನಾ ಕಾರ್ಯಕ್ರಮವು ಜೆಎಸ್ಎಸ್ ಶಿಕ್ಷಣ ಸಂಸ್ಥೆಗಳ ಆವರಣದ ಸನ್ನಿಧಿ ಕಲಾ ಭವನದಲ್ಲಿ ವಿಜೃಂಭಣೆಯಿಂದ ನಡೆಯಿತು. ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯ -ಶ್ರೀ. ಮ. ನಿ .ಪ್ರ. ಡಾ. ಮಲ್ಲಿಕಾರ್ಜುನ ಮಹಾಸ್ವಾಮಿಗಳು ಮುರುಘಾ ಮಠ ಧಾರವಾಡ ಸಾನಿಧ್ಯ ವಹಿಸಿ ಪಾಣಮುಕ್ತ ನವಜೀವನದವರನ್ನು ಅಭಿನಂದಿಸುವುದರ ಜೊತೆಗೆ ಧರ್ಮಸ್ಥಳದ ಕಾರ್ಯಕ್ರಮವನ್ನು ಕೊಂಡಾಡಿದರು. ಕಾರ್ಯಕ್ರಮದ ಉದ್ಘಾಟನೆಯನ್ನು ಜೆಎಸ್ಎಸ್ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿಗಳಾದ ಶ್ರೀ ಡಾಕ್ಟರ್ ಅಜಿತ್ ಪ್ರಸಾದ್ ನೆರವೇರಿಸಿ ಯೋಜನೆಯೊಂದಿಗೆ ಸಂಬಂಧ ಹಾಗೂ ವ್ಯಸನಕ್ಕೆ ಬಿದ್ದ ವ್ಯಕ್ತಿಯ ಪರಿಸ್ಥಿತಿ ಬದಲಾಗಲು ಯೋಜನೆ ರೂಪಿಸಿಕೊಂಡ ಕಾರ್ಯಕ್ರಮದ ಬಗ್ಗೆ ವಿವರಿಸಿ ನವ ಜೀವನ ಸದಸ್ಯರನ್ನು ಅಭಿನಂದಿಸಿದರು.ಅಧ್ಯಕ್ಷತೆ ಧಾರವಾಡ ಜಿಲ್ಲಾ ಜನಜಾಗೃತಿ ವೇದಿಕೆಯ ಅಧ್ಯಕ್ಷರಾದ ಶ್ರೀ ಸಂತೋಷ್ ಆರ್ ಶೆಟ್ಟಿ ವಹಿಸಿ ಯಶಸ್ವಿ ಕಾರ್ಯಕ್ರಮಕ್ಕೆ ಸಹಕರಿಸಿದ ಎಲ್ಲರನ್ನು ಸ್ಮರಿಸಿ ಸಮಾಜಕ್ಕೆ ಪೂರಕವಾದ ಕಾರ್ಯಕ್ರಮ ಇದಾಗಿದ್ದು ಅಭಿನಂದನೆಗಳು ಎಂದರು.ಜಾಥಾ ಉದ್ಘಾಟನೆ ಬಲೂನ್ ಹಾರಿಸುವ ಮೂಲಕ ಆಕರ್ಷಕ ಜಾತ ಕಾರ್ಯಕ್ರಮವನ್ನು ಶ್ರೀಮತಿ ಶಿವಲೀಲಾ ವಿನಯ್ ಕುಲಕರ್ಣಿ ಅಧ್ಯಕ್ಷರು ವೈಶುದೀಪ ಫೌಂಡೇಶನ್ ಧಾರವಾಡ ನೆರವೇರಿಸಿ ಶುಭ ಹಾರೈಸಿದರು.ದಿಕ್ಸೂಚಿ ನುಡಿ ಶ್ರೀ. ಡಾ. ಮಲ್ಲಿಕಾರ್ಜುನ್ ಬಾಳಿಕಾಯಿ ಅಧ್ಯಕ್ಷರು ನಿರಾಮಯ ಫೌಂಡೇಶನ್ ಹುಬ್ಬಳ್ಳಿ ಯವರು ಗಾಂಧೀಜಿ ಮತ್ತು ಧರ್ಮಸ್ಥಳ ಸಂಸ್ಥೆ ಜನಜಾಗೃತಿಯನ್ನು ವಿಡಂಬಣೆ ಮಾಡಿ ಅದ್ಭುತವಾಗಿ ವಿಚಾರವನ್ನು ಮಂಡಿಸಿದರು.ಮುಖ್ಯ ಅತಿಥಿಗಳು -ರಾಜಣ್ಣ ಕೊರವಿ ರಾಜ್ಯಾಧ್ಯಕ್ಷರು ಅಖಿಲ ಕರ್ನಾಟಕ ರಾಜ್ಯ ಜನಜಾಗೃತಿ ವೇದಿಕೆ ಸದಸ್ಯರು ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆ ಯವರು ರಾಜ್ಯಾದ್ಯಂತ ಜನಜಾಗೃತಿ ಕಾರ್ಯಕ್ರಮದ ಪರಿಣಾಮ ಫಲಿತಾಂಶ ಯಶಸ್ಸಿನ ನೆರೆದ ಸಭಿಕರಿಗೆ ತಿಳಿಯಪಡಿಸಿದರು.ಶ್ರೀ ಶಂಕರ್ ಬೆಳ್ಳುಬ್ಬಿ ಡೆಪ್ಯೂಟಿ ಕಮಿಷನರ್(ಜಿ.ಎಸ್.ಟಿ) ಪ್ರಸ್ತುತ ವಸ್ತು ಸ್ಥಿತಿ ಹಾಗೂ ಯುವ ಜನತೆಯ ದೌರ್ಬಲ್ಯ ಸರಿಪಡಿಸಿಕೊಳ್ಳಬೇಕಾದ ವಿಚಾರಗಳ ಬಗ್ಗೆ ಉತ್ತಮ ಸಲಹೆ ನೀಡಿದರು.ಶ್ರೀ ವಸಂತ ಸಾಲ್ಯಾನ್ ಪ್ರಾದೇಶಿಕ ನಿರ್ದೇಶಕರು ಶ್ರೀ. ಕ್ಷೆ. ಧ.ಗ್ರಾ. ಯೋಜನೆ ಬಿ ಸಿ ಟ್ರಸ್ಟ್ (ರಿ) ಧಾರವಾಡ ಪ್ರಾದೇಶಿಕ ವಿಭಾಗ ನವಜೀವನ ಸದಸ್ಯರಿಗೆ ಸಿಕ್ಕಿದ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳುವ ಬಗೆ ಜನಜಾಗೃತಿ ಕಾರ್ಯಕ್ರಮದ ಉದ್ದೇಶಗಳ ಬಗ್ಗೆ ಮಾಹಿತಿ ನೀಡಿ ಶುಭ ಹಾರೈಸಿದರು. ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರುಗಳಿಗೆ ಗೌರವಾರ್ಪಣೆ ಪ್ರಸ್ತುತ ವರುಷ ನಡೆದ ಮಧ್ಯವರ್ಜನ ಶಿಬಿರಗಳಲ್ಲಿ ಅಧ್ಯಕ್ಷ ಸ್ಥಾನವನ್ನು ಅಲಂಕರಿಸಿ ಶಿಬಿರವನ್ನು ಯಶಸ್ವಿಗೊಳಿಸಿದ ವ್ಯವಸ್ಥಾಪನ ಸಮಿತಿ ಅಧ್ಯಕ್ಷರುಗಳನ್ನ ಈ ಸಂದರ್ಭದಲ್ಲಿ ಗೌರವಿಸಲಾಯಿತು. ಶ್ರೀ ಪ್ರದೀಪ್ ಶೆಟ್ಟಿ ಜಿಲ್ಲಾ ನಿರ್ದೇಶಕರು ಧಾರವಾಡ ಕಾರ್ಯಕ್ರಮದ ಸಂಪೂರ್ಣ ಮಾರ್ಗದರ್ಶನ ನಿರ್ವಹಣೆಯನ್ನು ಮಾಡಿ ಯಶಸ್ವಿ ಕಾರ್ಯಕ್ರಮ ನಡೆಸಲು ಕಾರಣರಾದರು. ಈ ಸಂದರ್ಭ ಕರ್ನಾಟಕ ರಾಜ್ಯದ ಮುಖ್ಯಮಂತ್ರಿಗಳಿಗೆ ಠಾರಾವು ಮಂಡನೆ ಮಾಡಲಾಯಿತು. ಜಿಲ್ಲಾ ಜನಜಾಗ್ರತಿ ವೇದಿಕೆ ಎಲ್ಲಾ ಸದಸ್ಯರು ಹಾಗೂ ಜಿಲ್ಲೆಯ ಎಲ್ಲಾ ಮತ್ತು ಜನಜಾಗೃತಿ ಯೋಜನಾಧಿಕಾರಿಗಳು ಮೇಲ್ವಿಚಾರಕ ಶ್ರೇಣಿಗೆ ಸಿಬ್ಬಂದಿಗಳು ನವ ಜೀವನ ಸಮಿತಿಯ ಸದಸ್ಯರು, ಶೌರ್ಯ ವಿಪತ್ತು ನಿರ್ವಹಣಾ ಸ್ವಯಂಸೇವಕರು, ಒಕ್ಕೂಟದ ಪದಾಧಿಕಾರಿಗಳು ಸದಸ್ಯರು ಉಪಸ್ಥಿತರಿದ್ದರು.
