ದುಶ್ಚಟ ಮುಕ್ತ ಸಮಾಜ ನಿರ್ಮಾಣಕ್ಕಾಗಿ ಗಾಂಧಿ ಸ್ಮರಣೆ ಮತ್ತು ದುಶ್ಚಟಗಳ ವಿರುದ್ಧ ಜಾಗೃತಿ ಕಾರ್ಯಕ್ರಮ

Janajagurthi Vedike News

ಶಹಾಪುರ ತಾಲೂಕಿನ ಶ್ರೀ ಫಕ್ಕೀರೇಶ್ವರ ಮಠ ದ ಅವರಣದಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ 153 ನೇ ಜಯಂತೋತ್ಸವದ ಸಂಭ್ರಮಾಚರಣೆಯ ಪ್ರಯುಕ್ತ ದುಶ್ಚಟ ಮುಕ್ತ ಸಮಾಜ ನಿರ್ಮಾಣಕ್ಕಾಗಿ ಗಾಂಧಿ ಸ್ಮರಣೆ ಮತ್ತು ದುಶ್ಚಟಗಳ ವಿರುದ್ಧ ಜಾಗೃತಿ ಕಾರ್ಯಕ್ರಮ ಹಮ್ಮಿಕೊಂಡಿದ್ದು ದಿವ್ಯ ಸಾನಿಧ್ಯವನ್ನು ಪರಮಪೂಜ್ಯ ಶ್ರೀ ಗುರುಪಾದ ಮಹಾಸ್ವಾಮಿಗಳು ಫಕೀರೇಶ್ವರ ಮಠ ಶಹಾಪುರ ವಹಿಸಿದ್ದು ಗಾಂಧೀಜಿಯವರು ರಾಮರಾಜ್ಯದ ಕನಸಿನೊಂದಿಗೆ ಗ್ರಾಮ ಸ್ವರಾಜ್ಯದ ಕನಸನ್ನು ಕಂಡ ಪ್ರಕಾರ ಪೂಜ್ಯ ಶ್ರೀ ವೀರೇಂದ್ರ ಹೆಗ್ಗಡೆಯವರು ಆ ಕನಸನ್ನು ನನಸು ಮಾಡುತ್ತಿದ್ದಾರೆ ಎಂದು ನುಡಿಯುವುದರೊಂದಿಗೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೆಲಸ-ಕಾರ್ಯ ಯಾವ ಸರ್ಕಾರದ ಕೆಲಸ ಕಾರ್ಯಗಳಿಗೂ ಕಮ್ಮಿ ಇಲ್ಲ ಎಂದು ಆಶೀರ್ವಚನದಲ್ಲಿ ತಿಳಿಸಿದರು. ಸಭೆಯ ಅಧ್ಯಕ್ಷತೆಯನ್ನು ಶ್ರೀಮತಿ. ನಿರ್ಮಲಾ ಉಪ್ಪಿನ ಅಧ್ಯಕ್ಷರು ಪ್ರಗತಿಬಂಧು ಸ್ವಸಹಾಯ ಸಂಘಗಳ ಒಕ್ಕೂಟ ದಿಗ್ಗಿ ಅಗಸಿ ಇವರು ವಹಿಸಿದ್ದರು. ಜಾಗೃತಿ ಕಾರ್ಯಕ್ರಮದ ಉದ್ಘಾಟಕರಾಗಿ ಗೌರವಾನ್ವಿತ ಶ್ರೀ.ಶಿವರಾಯ ಪ್ರಭು ಪ್ರಾದೇಶಿಕ ನಿರ್ದೇಶಕರು ಕಲಬುರಗಿ ಇವರು ಕಾರ್ಯಕ್ರಮವನ್ನು ಉದ್ಘಾಟಿಸಿ ಭಾಗವಹಿಸಿದ ಸಮಸ್ತರಿಗೆ ಜಾಗೃತಿ ಮೂಡಿಸುವ ಮಾತುಗಳನ್ನಾಡಿದರು. ಇದೇ ಸಂದರ್ಭ ಮುಖ್ಯಅತಿಥಿಗಳಾಗಿ ಡಾಕ್ಟರ್ ಶ್ರೀ.ಶರಣು ಬಿ ಗದ್ದುಗೆ ಅಧ್ಯಕ್ಷರು ಉತ್ತರ ಕರ್ನಾಟಕ ರಕ್ಷಣಾ ವೇದಿಕೆ ಇವರು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೆಲಸ-ಕಾರ್ಯಗಳ ಬಗ್ಗೆ ಶ್ಲಾಘನೀಯವಾದ ಮಾತನಾಡಿದರು. ಇದರೊಂದಿಗೆ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ಡಾಕ್ಟರ್ ಶ್ರೀ. ಬಸವರಾಜ್ ಇಜೇರಿ ವೈದ್ಯರು ಸ್ಪಂದನ ಆಸ್ಪತ್ರೆ ಶಹಾಪುರ ಇವರು ಪ್ರಸ್ತುತ ಪರಿಸ್ಥಿತಿಯಲ್ಲಿ ನಡೆಯುವ ದುಶ್ಚಟಗಳ ಬಗ್ಗೆ ಮತ್ತು ದುರಭ್ಯಾಸಗಳಿಗೆ ಕಡಿವಾಣ ಹಾಕುವ ಬಗ್ಗೆ ಮಾರ್ಗದರ್ಶಿಸಿದರು. ಇದರೊಂದಿಗೆ ಅತಿಥಿಗಳಾಗಿ ಶ್ರೀ. ನಾರಾಯಣ ಆಚಾರ್ಯ ಅಧ್ಯಕ್ಷರು ತಾಲೂಕು ಪತ್ರಕರ್ತರ ಸಂಘ ಮತ್ತು ಶ್ರೀ.ವೆಂಕಟೇಶ ದಳಪತಿ ಉಪಾಧ್ಯಕ್ಷರು VSS ಬ್ಯಾಂಕ್ ಎಂ ಕೋಳೂರು ಹಾಗೂ ಜ್ಞಾನಗಂಗಾ ವಿದ್ಯಾಸಂಸ್ಥೆಯ ಮುಖ್ಯ ಶಿಕ್ಷಕರಾದ ಶ್ರೀ.ಸುಧಾಕರ್ ಇದರೊಂದಿಗೆ ಶ್ರೀ.ಪ್ರದೀಪ್.ಆರ್ ಯೋಜನಾಧಿಕಾರಿಗಳು ಶಹಪುರ ತಾಲೂಕು ಅವರು ಉಪಸ್ಥಿತರಿದ್ದರು.