ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿ. ಸಿ ಟ್ರಸ್ಟ್ (ರಿ) ಮಧುಗಿರಿ-1 ತಾಲ್ಲೋಕು ಅಖಿಲ ಕರ್ನಾಟಕ ಜಿಲ್ಲಾ ಜನಜಾಗೃತಿ ವೇದಿಕೆ ಟ್ರಸ್ಟ್ (ರಿ) ತುಮಕೂರು-2 ಜಿಲ್ಲೆ ರವರ ಸಹಯೋಗದೊಂದಿಗೆ
ದಿನಾಂಕ 06/12/2025ರಂದು ನೌಕರರ ಭವನ ಮಧುಗಿರಿಯಲ್ಲಿ ಪಾನಮುಕ್ತ ನವಜೀವನ ಸಮಿತಿ ಸದಸ್ಯರ ನವಜೀವನೋತ್ಸವ ಕಾರ್ಯಕ್ರಮವನ್ನು ನಡೆಸಲಾಯಿತು.ಕಾರ್ಯಕ್ರಮದಲ್ಲಿ ಭಾಗವಹಿಸಿದ ಸರ್ವರನ್ನು ಮಧುಗಿರಿ ವಲಯದ ಮೇಲ್ವಿಚಾರಕರಾದ ಶ್ರೀ ಶಿವರಾಜು ಸ್ವಾಗತಿಸಿದರು.ಕಾರ್ಯಕ್ರಮದ ವೇದಿಕೆಯಲ್ಲಿ ಉಪಸ್ಥಿತರಿದ್ದ ಅಥಿತಿಗಳು ದೀಪ ಪ್ರಜ್ವಲನೆಯನ್ನು ಮಾಡುವ ಮೂಲಕ ಉದ್ಗಾಟನೆ ಮಾಡಿದರು.ಮದ್ಯವರ್ಜನ ಶಿಬಿರಕ್ಕೆ ಸೇರಿ ಪಾನಮುಕ್ತರಾದ ನವಜೀವನ ಸಮಿತಿಯ ಸದಸ್ಯರು ಮತ್ತು ಕುಟುಂಬದ ಸದಸ್ಯರುಗಳು ತಮ್ಮ ಅನುಭವದ ಹಂಚಿಕೆಯನ್ನು ಮಾಡಿದರು.ಕಾರ್ಯಕ್ರಮದ ಪ್ರಾಸ್ತಾವಿಕ ನುಡಿಗಳನ್ನು ಬೆಂಗಳೂರು ಪ್ರಾದೇಶಿಕ ವಿಭಾಗದ ಜನಜಾಗೃತಿ ವೇದಿಕೆ ಯೋಜನಾಧಿಕಾರಿಗಳಾದ ಶ್ರೀ ತಿಮ್ಮಯ್ಯನಾಯ್ಕ ಸರ್ ರವರು ಮಾತನಾಡಿ ಕಡಿಮೆ ದಿನದಲ್ಲಿ ಕಡಿಮೆ ಕರ್ಚಿನಲ್ಲಿ ಒಬ್ಬ ವ್ಯಕ್ತಿಯ ಅಂತರಂಗವನ್ನು ಭೇದಿಸಿ ಆ ವ್ಯಕ್ತಿಗೆ ಸೂಕ್ತ ಮಾಹಿತಿಯನ್ನು ನೀಡುವ ಮೂಲಕ ಒಬ್ಬ ಉತ್ತಮವಾದ ವ್ಯಕ್ತಿಗಳನ್ನಾಗಿ ರೂಪಿಸುವಂತಹ ಕಾರ್ಯಕ್ರಮವಿದ್ದರೆ ಅದು ಪೂಜ್ಯ ಡಾ. ವೀರೇಂದ್ರಹೆಗ್ಗಡೆಯವರ ಮದ್ಯವರ್ಜನ ಶಿಬಿರವೆಂದು ತಿಳಿಸಿದರು. ನವಜೀವನ ಸಮಿತಿ ಸದಸ್ಯರು ಸಂಸಾರಿಕ ಜೀವನದಲ್ಲಿ ಪರಸ್ಪರ ಹೊಂದಾಣಿಕೆಯ ಮಹತ್ವವನ್ನು ತಿಳಿದುಕೊಂಡು ಸಂಸಾರವನ್ನು ಉತ್ತಮವಾಗಿ ನಿರ್ವಹಿಸಬೇಕೆಂದು ತಿಳಿಸಿದರು. ಪ್ರತಿ ತಿಂಗಳು ಮಾಸಿಕ ಸಭೆ, ವಾರದ ಸಭೆಗಳಿಗೆ ಕಡ್ಡಾಯವಾಗಿ ಹಾಜರಾಗಬೇಕೆಂದು ತಿಳಿಸುವ ಮೂಲಕ ಸದಸ್ಯರ ಪಾನಮುಕ್ತ ಜೀವನಕ್ಕೆ ಶುಭಾಷಯಗಳನ್ನು ತಿಳಿಸಿ ಮಾಹಿತಿ ಮತ್ತು ಮಾರ್ಗದರ್ಶನವನ್ನು ನೀಡಿದರು.ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ತುಮಕೂರು- 2 ಜಿಲ್ಲೆಯ ಜಿಲ್ಲಾ ಜನಜಾಗೃತಿ ವೇದಿಕೆ ಜಿಲ್ಲಾ ಅಧ್ಯಕ್ಷರಾದ ಶ್ರೀ ಮಂಜುನಾಥ್ ಲಾಲಪೇಟೆ ರವರು ಮಾತನಾಡಿ ಪೂಜ್ಯರ ಆಶಯದಂತೆ ನವಜೀವನವನ್ನು ನಡೆಸುತ್ತಾ ತಮ್ಮ ಕಟುಂಬದ ಸದಸ್ಯರೊಂದಿಗೆ ಅನ್ಯೋನ್ಯತೆಯಿಂದ ಬದುಕುವಮೂಲಕ ತಮ್ಮ ದುಡಿಮೆಯಿಂದ ಬಂದಂತಹ ಹಣವನ್ನು ಉಳಿತಾಯಮಾಡುವ ಮೂಲಕ ಉತ್ತಮ ಜೀವನವನ್ನು ರೂಪಿಸಿಕೊಳ್ಳುವ ಮೂಲಕ ಪೂಜ್ಯರ ಪ್ರೀತಿಯ ಕಾರ್ಯಕ್ರಮವಾದ ಮದ್ಯವರ್ಜನ ಶಿಬಿರದ ಹೆಮ್ಮೆಯ ನವಜೀವನ ಸದಸ್ಯರಾಗಬೇಕೆಂದು ತಿಳಿಸುವ ಮೂಲಕ ಶುಭಹಾರೖಸಿದರು.ಮಧುಗಿರಿ-1 ಯೋಜನಾಕಛೇರಿಯ ಯೋಜನಾಧಿಕಾರಿ ಶ್ರೀ ದಿನೇಶ್ ಮಾತನಾಡಿ ನವಜೀವನ ಸಮಿತಿ ಸದಸ್ಯರು ಕಡ್ಡಾಯವಾಗಿ ನವಜೀವನ ಸಮಿತಿಗಳ ವಾರದ ಸಭೆಗೆ ಹಾಗೂ ಮಾಸಿಕಸಭೆಗಳಿಗೆ ಕಡ್ಡಾಯವಾಗಿ ಹಾಜರಾಗುವ ಮೂಲಕ ಪಾನಮುಕ್ತರಾಗಿ ಪೂಜ್ಯ ಖಾವಂದರ ಪ್ರೀತಿಯ ಕಾರ್ಯಕ್ರಮದ ಯಶಸ್ಸಿನ ಪಾಲುದಾರರಾಗಬೇಕೆಂದು ತಿಳಿಸಿದರು. ಪಾನಮುಕ್ತರಾದ ಸದಸ್ಯರು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಕಾರ್ಯಕ್ರಮಗಳು ಹಾಗೂ ಜನಜಾಗೃತಿ ವೇದಿಕೆಯ ಕಾರ್ಯಕ್ರಮಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ನವಜೀವನ ಸಮಿತಿಯ ಸದಸ್ಯರು ಭಾಗವಹಿಸಬೇಕೆಂದು ತಿಳಿಸುವ ಮೂಲಕ ಮಾಹಿತಿ ಮತ್ತು ಮಾರ್ಗದರ್ಶನವನ್ನು ನೀಡಿದರು.
ಕಾರ್ಯಕ್ರಮದಲ್ಲಿ ಬೆಂಗಳೂರು ಪ್ರಾದೇಶಿಕ ವಿಭಾಗದ ಜನಜಾಗೃತಿ ವೇದಿಕೆ ಮೇಲ್ವಿಚಾರಕರಾದ ಶ್ರೀ ಎಂ. ಎಸ್ ದರ್ಶನ್, ಮಧುಗಿರಿ ವಲಯದ ಸೇವಾಪ್ರತಿನಿಧಿಗಳು ತಾಲ್ಲೋಕಿನ ನವಜೀವನ ಸಮಿತಿ ಸದಸ್ಯರು ಮತ್ತು ಕುಟುಂಬ ಸದಸ್ಯರು ಭಾಗಹಿಸಿದ್ದರು.
