ದಾವಣಗೆರೆ ಜಿಲ್ಲೆಯ ಜಿಲ್ಲಾ ವೇದಿಕೆ ಸಭೆಯು ಜಿಲ್ಲಾಧ್ಯಕ್ಷರಾದ ಶ್ರೀ ನಾಗರಾಜ್ ರವರ ಅಧ್ಯಕ್ಷತೆಯಲ್ಲಿ ಜಿಲ್ಲಾ ಕಛೇರಿಯಲ್ಲಿ ನಡೆಯಿತು. 2023 24ರ ಸಾಲಿನ ಕ್ರಿಯಾಯೋಜನೆ, ಮದ್ಯವರ್ಜನ ಶಿಬಿರ, ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ, ಸ್ವಾಸ್ತ್ಯ ಸಂಕಲ್ಪ ತರಬೇತುದಾರರ ಯೋಜನೆಯ ಕಾರ್ಯಕ್ರಮದಲ್ಲಿ ಭಾಗವಹಿಸುವ ಬಗ್ಗೆ, ಮಾದಕ ವಸ್ತು, ತಂಬಾಕು ವಿರೋಧಿ ಕಾರ್ಯಕ್ರಮ ಅನುಷ್ಟಾನ, ಆಯ್ದ ಶಾಲಾ ಕಾಲೇಜುಗಳಲ್ಲಿ ಸ್ವಾಸ್ಥ್ಯ ಸಂಕಲ್ಪ ಪರಿಣಾಮಕಾರಿ ಅನುಷ್ಠಾನ, ಗಾಂಧಿ ಜಯಂತಿ ಕಾರ್ಯಕ್ರಮ, ತಾಲೂಕ್ ಮಟ್ಟದ ನವಜೀವನ ಉತ್ಸವ ಕಾರ್ಯಕ್ರಮ, ಪತ್ರಿಕಾಗೋಷ್ಠಿ, ಹಕ್ಕೊತ್ತಾಯ, ಪಾನ ಮುಕ್ತ ಗ್ರಾಮ, ನವಜೀವನ ಸದಸ್ಯರ ಬಲವರ್ಧನೆ ಬಗ್ಗೆ ಸುದೀರ್ಘವಾದ ಚರ್ಚೆ ಮಾಡಿ ತಾಲೂಕ್ ಮಟ್ಟದಲ್ಲಿ ಜನಜಾಗೃತಿ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸುವ ಬಗ್ಗೆ ನಿರ್ಣಯ ಕೈಗೊಳ್ಳಲಾಯಿತು. ಕಾರ್ಯಕ್ರಮದಲ್ಲಿ ಸರಳತೆಯನ್ನು ಕಾಪಾಡಿ, ಖರ್ಚು ವೆಚ್ಚಗಳು, ಸಭೆ ಸಮಾರಂಭಗಳಲ್ಲಿ ಸಮಯ ಪಾಲನೆ, ನಿರ್ದಿಷ್ಟ ಸಮಯದಲ್ಲಿ ಕಾರ್ಯಕ್ರಮ ಯಶಸ್ವಿ ಅನುಷ್ಠಾನ, ಜಿಲ್ಲಾ ವೇದಿಕೆಯ ಪದಾಧಿಕಾರಿಗಳು ಯೋಜನೆಯ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಬಗ್ಗೆ ಮತ್ತು ಪದಾಧಿಕಾರಿಗಳನ್ನು ಕಾರ್ಯಕ್ರಮಕ್ಕೆ ಅಮಂತ್ರಿಸುವ ಬಗ್ಗೆ ಮತ್ತು ಪ್ರತಿ 3 ತಿಂಗಳಿಗೊಮ್ಮೆ ಜಿಲ್ಲಾ ವೇದಿಕೆಯ ಸಭೆಯನ್ನು ನಿರ್ವಹಣೆ ಮಾಡುವಂತೆ ಮಾನ್ಯ ಪ್ರಾದೇಶಿಕ ನಿರ್ದೇಶಕರು ಗೀತಾ ಮೇಡಂ ತಿಳಿಸಿದರು. ಜಿಲ್ಲಾ ವೇದಿಕೆಯ ನೂತನ ಅಧ್ಯಕ್ಷರ ಮತ್ತು ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆಯಿತು. ಅದ್ಯಕ್ಷರಾಗಿ ಶ್ರೀ HR ಬಸವರಾಜ್(ಬಾಬಣ್ಣ) ಮತ್ತು ಉಪಾಧ್ಯಕ್ಷರಾಗಿ ಶ್ರೀ ನಾಗನ ಗೌಡರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಜಿಲ್ಲಾ ವೇದಿಕೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು. ನೂತನ ಅದ್ಯಕ್ಷರು ಸಹಕಾರ ಯಾಚಿಸಿದರು. ನಿರ್ಗಮಿತ ಅದ್ಯಕ್ಷರು ಮತ್ತು ಉಪಾಧ್ಯಕ್ಷರು ಅವಕಾಶ ನೀಡಿದ್ದಕ್ಕೆ ಕೃತಜ್ಞತೆ ಸಲ್ಲಿಸಿದರು. ಜಿಲ್ಲಾ ಕಾರ್ಯದರ್ಶಿಗಳು ವರದಿ ಮಂಡಿಸಿದರು. ತಾಲೂಕ್ ಯೋಜನಾಧಿಕಾರಿಗಳು ತಾಲೂಕುವಾರು ವರದಿ ಮಂಡನೆ ಮಾಡಿದರು. ಪ್ರಾದೇಶಿಕ ಜನಜಾಗೃತಿ ಯೋಜನಾಧಿಕಾರಿಗಳು ಸಭೆ ನಿರ್ವಹಣೆ ಮಾಡಿದರು.
