ವ್ಯಸನ ಮುಕ್ತ ಸಮಾಜ ನಿರ್ಮಾಣಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯ ಶ್ಲಾಘನೀಯ, ಕುಡಿತವು ಮನುಷ್ಯನನ್ನು ದೈಹಿಕವಾಗಿ ಕುಗ್ಗಿಸುತ್ತದೆ, ಮದ್ಯ ವ್ಯಸನದಿಂದ ಕುಟುಂಬದ ನೆಮ್ಮದಿ ಹಾಳಾಗುತ್ತದೆ ಜೊತೆಯಲ್ಲಿ ಮನುಷ್ಯನ ಜೀವನ ನರಕಕ್ಕಿಂತ ಕಠಿಣವಾದದ್ದು, ಇಂತಹ ಮದ್ಯ ವ್ಯಸನಮುಕ್ತ ಸಮಾಜ ನಿರ್ಮಾಣ ಮಾಡುವಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಾರ್ಯ ನಿರ್ವಹಿಸುತ್ತಿರುವುದು ಶ್ಲಾಘನೀಯ ಎಂದು ಕಾರ್ಯಕ್ರಮದ ಉದ್ಘಾಟಕರಾಗಿ ಆಗಮಿಸಿದ್ದ ಜಿಲ್ಲಾ ಪಂಚಾಯಿತಿ ಸದಸ್ಯರಾದ ಶ್ರೀ ಜಿ. ಸಿ. ನಿಂಗಪ್ಪ ರವರು ದಾವಣಗೆರೆ ತಾಲೂಕಿನ ಹಳೇ ಬಿಸ್ಲೇರಿಯಲ್ಲಿ ಸಂಸ್ಥೆಯ ವತಿಯಿಂದ ಹಮ್ಮಿಕೊಂಡಿರುವ 1885 ನೇ ಮದ್ಯವರ್ಜನ ಶಿಬಿರದ ಉದ್ಘಾಟನಾ ಕಾರ್ಯಕ್ರಮದಲ್ಲಿ ಹೇಳಿದರು. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಮದ್ಯವರ್ಜನ ಶಿಬಿರ ಕಾರ್ಯಕ್ರಮವನ್ನು ನಡೆಸುತ್ತಿರುವುದು ಪೂಜ್ಯ ವೀರೇಂದ್ರ ಹೆಗ್ಗಡೆಯವರ ಕಾಳಜಿಯ ಕಾರ್ಯ. ಇದನ್ನು ಸರಿಯಾದ ರೀತಿಯಲ್ಲಿ ಸದ್ಭಳಕೆ ಮಾಡಿಕೊಳ್ಳಬೇಕು ಇಂತಹ ಹತ್ತು ಹಲವಾರು ಕಾರ್ಯಕ್ರಮಗಳನ್ನು ಸಮುದಾಯ ಅಭಿವೃದ್ಧಿ ಕಾರ್ಯಕ್ರಮಗಳ ಮುಖಾಂತರ ಸಾರ್ವಜನಿಕ ಸ್ಥಳಗಳ ಅಭಿವೃದ್ಧಿಯಲ್ಲಿ ಕೂಡ ಪೂಜ್ಯರು ಕೈ ಜೋಡಿಸುತ್ತಿದ್ದಾರೆ ಎಂದು ಹೇಳಿದರು. ಮಧ್ಯ ವ್ಯಸನಿಗಳನ್ನು ಒಂದೆಡೆ ಸೇರಿಸಿ ಅವರಿಗೆ ಯಾವುದೇ ಮದ್ದು ಮಾತ್ರೆ ಇಲ್ಲದೆ ಕೇವಲ ಮನ ಪರಿವರ್ತನೆ ಮುಖಾಂತರ ವ್ಯಸನ ಮುಕ್ತರನ್ನಾಗಿಸುವ ಧ್ಯೇಯವೇ ಮದ್ಯವರ್ಜನ ಶಿಬಿರ ದಾವಣಗೆರೆ ತಾಲೂಕಿನ ಹಳೇ ಬಿಸ್ಲೇರಿಯಲ್ಲಿ ನಡೆಯುತ್ತಿರುವ ಮದ್ಯವರ್ಜನ ಶಿಬಿರದ ಸದುಪಯೋಗ ಪಡೆದುಕೊಳ್ಳುವಂತೆ ಜನಜಾಗೃತಿ ಯೋಜನಾಧಿಕಾರಿ ಶ್ರೀ ನಾಗರಾಜ್ ಕುಲಾಲ್ ಕರೆಕೊಟ್ಟರು. ಸಾಮಾಜಿಕವಾಗಿ, ಬೌತಿಕವಾಗಿ ಹಾಗೂ ದೈಹಿಕವಾಗಿ ಆರೋಗ್ಯಕರವಾಗಿರಬೇಕು, ಕುಡಿಯಬೇಕೆನ್ನುವುದು ಅದೊಂದು ರೀತಿಯ ರೋಗ ಅಂತವರನ್ನು ನಾವು ಸಮಾಜದಲ್ಲಿ ಕೆಟ್ಟವರು ಎಂದು ಭಾವಿಸುವುದು ತಪ್ಪು. ಇಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಕುಡಿತದ ಚಟದಿಂದ ಹೊರಬಂದು ಸಂಸಾರವನ್ನು ನಿರ್ವಹಣೆ ಮಾಡುವಲ್ಲಿ ಸಹಕರಿಯಾಗುತ್ತದೆ ಎಂದು 1885 ಮದ್ಯವರ್ಜನ ಶಿಬಿರ ಸಮಿತಿ ಅಧ್ಯಕ್ಷರಾದ ಡಾ|| ಪ್ರಭು ಎಂ. ಬಿಸ್ಲೇರಿ ಯವರು ಹೇಳಿದರು. ಕಾರ್ಯಕ್ರಮದಲ್ಲಿ ಯೋಜನಾಧಿಕಾರಿ ಶ್ರೀನಿವಾಸ್ ಬಿ., ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷ ಶ್ರೀ ಮಂಜುನಾಥ್, ಹದಡಿ ಗ್ರಾಮಾ ಪಂಚಾಯತ್ ಅಧ್ಯಕ್ಷೆ ಪ್ರೇಮಾ, ಬೆಳವನೂರು ಪಂಚಾಯಿತಿ ಉಪಾಧ್ಯಕ್ಷ ಶ್ರೀ ನವೀನ್, ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯ ಶ್ರೀ ಜಿ. ಹೆಚ್. ಮಹಾಂತೇಶ್, ಶ್ರೀ ರಮೇಶ್ ಕತ್ತಿಗೆ, ಶ್ರೀ ತಿಪ್ಪಣ್ಣ, ಶ್ರೀ ನಾಗರಾಜಪ್ಪ ಹಳೇ ಬಿಸ್ಲೇರಿ, ಶ್ರೀ ಮಂಜಪ್ಪ ಹಳೇ ಬಿಸ್ಲೇರಿ, ಮೇಲ್ವಿಚಾರಕ ಶ್ರೀ ಶಿವಪ್ರಸಾದ್, ಹಾಗೂ ಊರಿನ ಗಣ್ಯರು ಉಪಸ್ಥಿತರಿದ್ದರು.