ತುಮಕೂರು-2 ಜಿಲ್ಲೆಯ ಚಿಕ್ಕನಾಯಕನಹಳ್ಳಿ ಯೋಜನಾ ಕಚೇರಿ ವ್ಯಾಪ್ತಿಯ ಜೆಸಿ ಪುರ ವಲಯದ ಶ್ರೀ ಶ್ರೀ ಬಸವಲಿಂಗ ಪ್ರಭು ಸಭಾಭವನ ಗೋಡೆಕೆರೆ ಮಹಾಸಂಸ್ಥಾನದಲ್ಲಿ 1673ನೇ ಮದ್ಯವರ್ಜನ ಶಿಬಿರದ ಸಮಾರೋಪ ಸಮಾರಂಭ

Janajagurthi Vedike News

ತುಮಕೂರು-2 ಜಿಲ್ಲೆಯ ಚಿಕ್ಕನಾಯಕನಹಳ್ಳಿ ಯೋಜನಾ ಕಚೇರಿ ವ್ಯಾಪ್ತಿಯ ಜೆಸಿ ಪುರ ವಲಯದ ಶ್ರೀ ಶ್ರೀ ಬಸವಲಿಂಗ ಪ್ರಭು ಸಭಾಭವನ ಗೋಡೆಕೆರೆ ಮಹಾಸಂಸ್ಥಾನ ದಲ್ಲಿ ನಡೆಯುತ್ತಿರುವ 1673ನೇ ಮದ್ಯವರ್ಜನ ಶಿಬಿರದ ಸಮಾರೋಪ ಸಮಾರಂಭವು ಶ್ರೀಶ್ರೀ ಶ್ರೀ ಮೃತ್ಯುಂಜಯ ದೇಶಿ ಕೇಂದ್ರ ಮಹಾಸ್ವಾಮಿಜಿಯವರು ಚರಪಟ್ಟಾಧ್ಯಕ್ಷರು ಭೂ-ಸುಕ್ಷೇತ್ರ ಗೋಡೆಕೆರೆ ಮಹಾ ಸಂಸ್ಥಾನ ರವರ ದಿವ್ಯ ಸಾನಿಧ್ಯದಲ್ಲಿ ಉದ್ಘಾಟನೆಗೊಂಡಿತು. ಸಮಾರೋಪ ಸಮಾರಂಭದಲ್ಲಿ ತುಮಕೂರು-2 ಜಿಲ್ಲೆಯ ಮಾನ್ಯ ಜಿಲ್ಲಾ ನಿರ್ದೇಶಕರಾದ ದಿನೇಶ್.ಡಿ ಸರ್ ರವರು ಹಾಗೂ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಎಸ್.ವಿಶ್ವೇಶ್ವರಯ್ಯ ರವರು ವ್ಯವಸ್ಥಾಪನ ಸಮಿತಿಯ ಉಪಾಧ್ಯಕ್ಷರು ಪದಾಧಿಕಾರಿಗಳು ಜನಜಾಗೃತಿ ವೇದಿಕೆ ಬೆಂಗಳೂರು ಪ್ರಾದೇಶಿಕ ವಿಭಾಗದ ಮಾನ್ಯ ಯೋಜನಾಧಿಕಾರಿಗಳಾದ ಶ್ರೀ ತಿಮ್ಮಯ್ಯನಾಯ್ಕ ಸರ್ ರವರು ಹಾಗೂ ಚಿಕ್ಕನಾಯಕನಹಳ್ಳಿ ಯೋಜನಾ ಕಚೇರಿಯ ಮಾನ್ಯ ಯೋಜನಾಧಿಕಾರಿಗಳಾದ ಶ್ರೀ ಪ್ರೇಮಾನಂದ ಸರ್ ರವರು ಶಿಬಿರಾಧಿಕಾರಿಗಳಾದ ನಾಗೇಂದ್ರ ಅವರು ಆರೋಗ್ಯ ಸಹಾಯಕರಾದ ವೆಂಕಟೇಶ್ ರವರು ಹಾಗೂ ಬೆಂಗಳೂರು ಪ್ರಾದೇಶಿಕ ವಿಭಾಗದ ಜನಜಾಗೃತಿ ವೇದಿಕೆ ಮೇಲ್ವಿಚಾರಕರು ಹಾಗೂ ಚಿಕ್ಕನಾಯಕನಹಳ್ಳಿ ಯೋಜನಾ ಕಚೇರಿಯ ಮೇಲ್ವಿಚಾರಕ ಸಿಬ್ಬಂದಿ ವರ್ಗದವರು ಹಾಗೂ ಒಕ್ಕೂಟದ ಸದಸ್ಯರು, 81 ಮಂದಿ ಶಿಬಿರಾರ್ಥಿಗಳು ಮತ್ತು ಕುಟುಂಬದವರು ಕುಟುಂಬದವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.