ತುಮಕೂರು -1 ಜಿಲ್ಲೆಯ ನವಜೀವನ ಸಮಿತಿ ಪೋಷಕರ ತರಬೇತಿ ಕಾರ್ಯಾಗಾರ

Janajagurthi Vedike Uncategorized

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ (ರಿ.) ತುಮಕೂರು-1 ಜಿಲ್ಲೆ, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ (ರಿ.) ತುಮಕೂರು -1 ಜಿಲ್ಲೆ ಸಂಯುಕ್ತ ಆಶ್ರಯದಲ್ಲಿ ನಡೆದ ತುಮಕೂರು -1 ಜಿಲ್ಲೆಯ ನವಜೀವನ ಸಮಿತಿ ಪೋಷಕರ ತರಬೇತಿ ಕಾರ್ಯಾಗಾರವನ್ನು ತುಮಕೂರು -1 ಯೋಜನಾ ಕಛೇರಿ ಸಭಾಂಗಣದಲ್ಲಿ ಆಯೋಜನೆ ಮಾಡಲಾಗಿತ್ತು. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಎಲ್ಲಾ ಗಣ್ಯಮಾನ್ಯರನ್ನು ತುಮಕೂರು -1 ಜಿಲ್ಲೆಯ ಮಾನ್ಯ ಜಿಲ್ಲಾ ನಿರ್ದೇಶಕರಾದ ಶ್ರೀಮತಿ ದಯಾಶೀಲ ರವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಗಣ್ಯಮಾನ್ಯರನ್ನು ಸ್ವಾಗತ ಮಾಡಿದರು. ನವಜೀವನ ಸಮಿತಿ ಪೋಷಕರ ತರಬೇತಿ ಕಾರ್ಯಾಗಾರದ ಧ್ಯೇಯೋದ್ದೇಶದ ಬಗ್ಗೆ ಹಾಗೂ ಪ್ರಾಮುಖ್ಯತೆಯ ಬಗ್ಗೆ ಬೆಂಗಳೂರು ಪ್ರಾದೇಶಿಕ ವಿಭಾಗದ ಜನಜಾಗೃತಿ ವೇದಿಕೆಯ ಮಾನ್ಯ ಯೋಜನಾಧಿಕಾರಿಗಳಾದ ಶ್ರೀಯುತ ತಿಮ್ಮಯ್ಯನಾಯ್ಕ ರವರು ಎಲ್ಲಾ ನವಜೀವನ ಸಮಿತಿ ಪೋಷಕರಿಗೆ ಮಾಹಿತಿಯನ್ನು ನೀಡಿದರು. ವೇದಿಕೆಯ ಮೇಲೆ ಆಸೀನರಾಗಿದ್ದ ಎಲ್ಲಾ ಗಣ್ಯಮಾನ್ಯರುಗಳಿಂದ ದೀಪವನ್ನು ಪ್ರಜ್ವಲಿಸುವ ಮೂಲಕ ಕಾರ್ಯಕ್ರಮಕ್ಕೆ ಅಧಿಕೃತವಾಗಿ ಚಾಲನೆಯನ್ನು ನೀಡಿದರು. ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ (ರಿ) ತುಮಕೂರು -1 ಜಿಲ್ಲೆಯ ಜಿಲ್ಲಾ ಅಧ್ಯಕ್ಷರಾದ ಶ್ರೀಯುತ ಡಾ.ಅಮರನಾಥ್ ಶೆಟ್ಟಿ ರವರು ಸಂಸ್ಥಾಪಕ ಜಿಲ್ಲಾ ಅಧ್ಯಕ್ಷರಾದ ಡಾ.ಸಂಜಯ್ ನಾಯಕ್ ರವರು ಜಿಲ್ಲಾ ಉಪಾಧ್ಯಕ್ಷರಾದ ಗಣೇಶ್ ಪ್ರಸಾದ್ ರವರು ಕಾರ್ಯಕ್ರಮದ ಕುರಿತು ಶುಭ ಹಾರೈಕೆಯ ನುಡಿಗಳನ್ನು ನುಡಿದರು. ಕಾರ್ಯಕ್ರಮದಲ್ಲಿ ಕಾರ್ಯಕ್ರಮದ ಕೇಂದ್ರ ಬಿಂದು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ (ರಿ) ಬೆಳ್ತಂಗಡಿ ರಾಜ್ಯ ಕಾರ್ಯದರ್ಶಿಗಳು ಹಾಗೂ ಮಾನ್ಯ ಗೌರವಾನ್ವಿತ ಪ್ರಾದೇಶಿಕ ನಿರ್ದೇಶಕರಾದ ಸನ್ಮಾನ್ಯ ಶ್ರೀಯುತ ವಿವೇಕ್ ವಿ. ಪೈಸ್ ರವರು, ತುಮಕೂರು -1 ಜಿಲ್ಲೆಯ ನವಜೀವನ ಸಮಿತಿಯ ಪೋಷಕರು ಹಾಗೂ ತುಮಕೂರು -1 ಜಿಲ್ಲಾ ವ್ಯಾಪ್ತಿಯ ಯೋಜನಾಧಿಕಾರಿಗಳಿಗೆ ಜನಜಾಗೃತಿ ವೇದಿಕೆಯ ರೂಪುರೇಷೆಗಳನ್ನು ಹಾಗೂ ನವಜೀವನ ಸಮಿತಿಗಳ ಸಮರ್ಪಕ ಅನುಷ್ಠಾನಕ್ಕೆ ಪೂರಕವಾದ ಮಾಹಿತಿ ಹಾಗೂ ನವಜೀವನ ಸಮಿತಿಯ ಸಮಗ್ರ ನಿರ್ವಹಣೆಯನ್ನು ಮಾಡುವಲು ಪೂರಕವಾದ ಸಮಗ್ರ ಮಾಹಿತಿ ಮತ್ತು ಮಾರ್ಗದರ್ಶನವನ್ನು ನೀಡುವುದರ ಮೂಲಕ ಪೋಷಕರುಗಳಿಗೆ ನವ ಚೈತನ್ಯವನ್ನು ತುಂಬಿದರು. ಕಾರ್ಯಕ್ರಮದಲ್ಲಿ ತುಮಕೂರು -1 ಜಿಲ್ಲಾ ಕಛೇರಿ ಎಂ.ಐ.ಎಸ್ ಯೋಜನಾಧಿಕಾರಿಗಳಾದ ಶ್ರೀಯುತ ಸುರೇಶ್ ಶೆಟ್ಟಿ, ತುಮಕೂರು -1 ಜಿಲ್ಲೆಯ 7 ಯೋಜನಾ ಕಛೇರಿಗಳ ಮಾನ್ಯ ಯೋಜನಾಧಿಕಾರಿಗಳಾದ ಶ್ರೀಮತಿ ಸುನಿತಾ ಪ್ರಭು, ಶ್ರೀಮತಿ ಅನಿತಾ ಶೆಟ್ಟಿ, ಶ್ರೀಯುತ ಯಶೋಧರ್, ಸತೀಶ್ ಸೇಟ್ ಶ್ರೀಯುತ ರಾಜೇಶ್, ಶ್ರೀಯುತ ಉದಯ್, ಶ್ರೀಯುತ ಸುರೇಶ್ ರವರು ಹಾಗೂ ತುಮಕೂರು -1 ಜಿಲ್ಲೆಯ ಆಡಿಟ್ ಜಿಲ್ಲಾ ಪ್ರಬಂಧಕರಾದ ರಾಜೇಶ್, ಬೆಂಗಳೂರು ಪ್ರಾದೇಶಿಕ ವಿಭಾಗದ ಜನಜಾಗೃತಿ ವೇದಿಕೆಯ ಮೇಲ್ವಿಚಾರಕರಾದ ದರ್ಶನ್ ಎಂ.ಸ್, ಶಿಬಿರಾಧಿಕಾರಿಗಳಾದ ನಾಗೇಂದ್ರ, ವಿದ್ಯಾಧರ್ ಹಾಗೂ ತುಮಕೂರು -1 ಜಿಲ್ಲಾ ಕಛೇರಿ ವ್ಯಾಪ್ತಿಯ 08 ಯೋಜನಾಕಛೇರಿ ವ್ಯಾಪ್ತಿಯ ಆಯ್ಕೆಯಾದ ನವಜೀವನ ಸಮಿತಿ ಪೋಷಕರುಗಳು ಹಾಜರಿದ್ದರು.