ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ (ರಿ.) ತುಮಕೂರು-1 ಜಿಲ್ಲೆ, ಅಖಿಲ ಕರ್ನಾಟಕ ಜಿಲ್ಲಾ ಜನಜಾಗೃತಿ ವೇದಿಕೆ ಟ್ರಸ್ಟ್ (ರಿ.) ತುಮಕೂರು-1 ಜಿಲ್ಲೆ, ಪ್ರಗತಿ ಬಂದು ಸ್ವಸಹಾಯ ಸಂಘಗಳ ಒಕ್ಕೂಟ ತಿಪಟೂರು ತಾಲೂಕು ಇವರ ಸಹಯೋಗದೊಂದಿಗೆ ಗಾಂಧಿ ಸ್ಮೃತಿ ಮತ್ತು ವ್ಯಸನ ಮುಕ್ತ ಸಾಧಕರ ಸಮಾವೇಶ ಕಾರ್ಯಕ್ರಮವು ಶಿವಶಾಂತಿ ಕಲ್ಯಾಣ ಮಂಟಪದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ತುಮಕೂರು-1 ಜಿಲ್ಲೆಯ ಮಾನ್ಯ ಜಿಲ್ಲಾ ನಿರ್ದೇಶಕರಾದ ಶ್ರೀ ಸತೀಶ್ ಸುವರ್ಣ ರವರು ಜನಜಾಗೃತಿ ವೇದಿಕೆಯ ಹುಟ್ಟು, ಬೆಳವಣಿಗೆಯ ಬಗ್ಗೆ ಹಾಗೂ ಜನಜಾಗೃತಿ ವೇದಿಕೆಯಿಂದ ನಡೆಸಲಾಗುವ ಕಾರ್ಯಕ್ರಮಗಳ ಬಗ್ಗೆ ಮತ್ತು ಬೆಂಗಳೂರು ಪ್ರಾದೇಶಿಕ ವಿಭಾಗದಲ್ಲಿ ಹಾಗೂ ರಾಜ್ಯಾದ್ಯಂತ ಇದುವರೆಗೂ ನಡೆಸಲ್ಪಟ್ಟ ಜನಜಾಗೃತಿ ವೇದಿಕೆಯ ಕಾರ್ಯಕ್ರಮಗಳು ವಿಶೇಷವಾಗಿ ನವಜೀವನ ಸಮಿತಿ ಸದಸ್ಯರಿಗೆ ನೀಡುವಂತಹ ಜಾಗೃತಿ ಅಣ್ಣ ಮತ್ತು ಜಾಗೃತಿ ಮಿತ್ರ ಪ್ರಶಸ್ತಿಗಳ ವಿವರಣೆಯೊಂದಿಗೆ ಪ್ರಾಸ್ತಾವಿಕ ನುಡಿಗಳನ್ನು ನುಡಿದರು. ವೇದಿಕೆಯಲ್ಲಿ ಆಸೀನರಿದ್ದ ಗಣ್ಯಮಾನ್ಯರುಗಳು ದೀಪವನ್ನು ಪ್ರಜ್ವಲಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿದರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ನಡೆಸಲ್ಪಡುವ ಮದ್ಯವರ್ಜನ ಶಿಬಿರಗಳಿಗೆ ಸೇರಿ ಪಾನಮುಕ್ತರಾದ ಆಯ್ದ ನವಜೀವನ ಸಮಿತಿ ಸದಸ್ಯರು ಮತ್ತು ಕುಟುಂಬಸ್ಥರು ಅನುಭವದ ಹಂಚಿಕೆಯನ್ನು ಕಾರ್ಯಕ್ರಮದಲ್ಲಿ ಮಾಡಿಕೊಂಡರು. ತುಮಕೂರು-2 ಜಿಲ್ಲಾ ಜನಜಾಗೃತಿ ವೇದಿಕೆಯ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ತುಮಕೂರು-2 ಜಿಲ್ಲಾ ವ್ಯಾಪ್ತಿಯ ನವಜೀವನ ಸಮಿತಿ ಸದಸ್ಯರಿಗೆ ಗುಲಾಬಿ ಹೂ ನೀಡುವ ಮೂಲಕ ಅಭಿನಂದಿಸಿದರು. ಶ್ರೀ ಪ್ರೊ.ಜಿ.ಬಿ ಶಿವರಾಜ್ (ಮಹಾತ್ಮ ಗಾಂಧಿ ಸೇವಾ ರಾಜ್ಯ ಪ್ರಶಸ್ತಿ ಪುರಸ್ಕೃತರು) ಟ್ರಸ್ಟಿ ಕಸ್ತೂರಬಾ ಗಾಂಧಿ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ಹಿಂದುಪುರ್ ಮಧ್ಯಪ್ರದೇಶ ರವರು ಕಾರ್ಯಕ್ರಮದ ಉದ್ಗಾಟಕರಾಗಿ ಆಗಮಿಸಿ ಮಾತನಾಡಿ ಕರ್ನಾಟಕ ರಾಜ್ಯದಲ್ಲಿ ಪ್ರಥಮ ಬಾರಿಗೆ ಮಹಾತ್ಮಗಾಂಧಿ ಸಂಯಮ ಪ್ರಶಸ್ತಿಯನ್ನು ಪಡೆದ ಮೊದಲಿಗರ ಸಾಲಿನಲ್ಲಿ ಪರಮಪೂಜ್ಯ ಡಾ| ಡಿ. ವೀರೇಂದ್ರ ಹೆಗ್ಗಡೆಯವರು ನಿಲ್ಲುತ್ತಾರೆ ಯಾವುದೇ ಸರ್ಕಾರ ಮಾಡದಂತಹ ಮಹಾನ್ ಪುಣ್ಯ ಕಾರ್ಯವನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಜನಜಾಗೃತಿ ವೇದಿಕೆಯ ಮುಖಾಂತರವಾಗಿ ಮಾಡುತ್ತಿರುವುದು ಹೆಮ್ಮೆಯ ಸಂಗತಿ ಎಂದು ತಿಳಿಸಿದರು. ಜನಜಾಗೃತಿ ಜಾಥ ಮತ್ತು ಸಮಾವೇಶದ ಮೂಲಕ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಮಹಾತ್ಮ ಗಾಂಧೀಜಿಯವರ ತತ್ವಾದರ್ಶಗಳನ್ನು ಸಮಾಜಕ್ಕೆ ತಿಳಿಸುವಂತಹ ಮಹತ್ತರವಾದ ಕಾರ್ಯವನ್ನು ಮಾಡುತ್ತಿರುವುದು ಶ್ಲಾಘನೀಯವಾದ ವಿಚಾರವಾಗಿದ್ದು ಇಂತಹ ಹಲವಾರು ಕಾರ್ಯಕ್ರಮಗಳನ್ನು ಪೂಜ್ಯ ಡಾ. ವೀರೇಂದ್ರ ಹೆಗ್ಗಡೆಯವರು ನಡೆಸುತ್ತ ಬಂದಿದ್ದು ಸಮಾಜದಲ್ಲಿ ಬೆಲೆ ಇಲ್ಲದ ಮದ್ಯವ್ಯಸನಿಗಳಿಗೆ ಮದ್ಯವರ್ಜನ ಶಿಬಿರಗಳ ಮೂಲಕ ವ್ಯಸನ ಮುಕ್ತರನ್ನಾಗಿಮಾಡಿ ಸಮಾಜದಲ್ಲಿ ವೇದಿಕೆಯನ್ನು ಕಲ್ಪಿಸಿ ಸನ್ಮಾನವನ್ನು ಮಾಡುತ್ತಿರುವುದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ| ಡಿ. ವೀರೇಂದ್ರ ಹೆಗಡೆಯವರು ಮಾತ್ರ ಎಂದು ತಿಳಿಸಿ ಮಹಾತ್ಮಗಾಂಧಿ ರವರ ತತ್ವಾದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಪಾನಮುಕ್ತ ಉತ್ತಮವಾದ ಜೀವನವನ್ನು ನಡೆಸುವಂತೆ ಕಿವಿಮಾತನ್ನು ಹೇಳಿ ಶುಭ ಹಾರೈಸಿದರು. ತುಮಕೂರು-1 ಜಿಲ್ಲೆಯ ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯರಾದ ತರಕಾರಿ ಗಂಗಾಧರ್ ರವರು ಶುಭ ಹಾರೈಸಿದರು. ತುಮಕೂರು-1 ಜಿಲ್ಲೆಯ ಜಿಲ್ಲಾ ಜನಜಾಗೃತಿ ವೇದಿಕೆ ಜಿಲ್ಲಾಧ್ಯಕ್ಷರಾದ ಶ್ರೀ ಅಮರನಾಥ್ ಶೆಟ್ಟಿ ರವರು ಮಾತನಾಡಿ ಜನಜಾಗೃತಿ ವೇದಿಕೆಯ ಮೂಲಕವಾಗಿ ಶಾಲಾ ಕಾಲೇಜುಗಳಲ್ಲಿ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ, ತಂಬಾಕು ವಿರೋಧಿ ಕಾರ್ಯಕ್ರಮ, ಮಾದಕ ವಸ್ತು ವಿರೋಧಿ ದಿನಾಚರಣೆಗಳಂತಹ ಹಾಗೂ ಗಾಂಧೀಜಿಯವರ ಕಂಡಂತಹ ರಾಮರಾಜ್ಯದ ಕನಸನ್ನು ನನಸು ಮಾಡುವ ನಿಟ್ಟಿನಲ್ಲಿ ಗಾಂಧೀಜಿಯವರ ವಿಚಾರಧಾರೆಗಳನ್ನು ಜನರಿಗೆ ಮುಟ್ಟಿಸುವ ಕೆಲಸವನ್ನು ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಪೂಜ್ಯ ಶ್ರೀ ಡಾ| ಡಿ. ವೀರೇಂದ್ರ ಹೆಗ್ಗಡೆಯವರು ಮಾಡುತ್ತಾ ಬರುತ್ತಿರುವುದು ಸಂತೋಷದ ವಿಷಯ ಎಂದು ತಿಳಿಸುವ ಮೂಲಕ ಶುಭ ಹಾರೈಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಶಿವಶಂಕರಪ್ಪ ವಲಯ ಒಕ್ಕೂಟದ ಅಧ್ಯಕ್ಷರು ಬಿಳಿಗೆರೆ ವಲಯ ರವರು ವಹಿಸಿದ್ದರು. ಕಾರ್ಯಕ್ರಮದಲ್ಲಿ ತುಮಕೂರು-1 ಜಿಲ್ಲೆಯ ಜಿಲ್ಲಾ ಜನಜಾಗೃತಿ ವೇದಿಕೆಯ ಪದಾಧಿಕಾರಿಗಳು, ತುಮಕೂರು-1 ಜಿಲ್ಲಾ ಕಛೇರಿ ವ್ಯಾಪ್ತಿಯ ಯೋಜನಾಧಿಕಾರಿಗಳು, ಮೇಲ್ವಿಚಾರಕರು, ತಿಪಟೂರು-1, ತಿಪಟೂರು-2 ಯೋಜನಾ ಕಛೇರಿಗಳ ಆಂತರಿಕಲೆಕ್ಕ ಪರಿಶೋಧಕರು/ಜ್ಞಾನವಿಕಾಸ ಸಮನ್ವಯಾಧಿಕಾರಿ ಹಾಗೂ ಬೆಂಗಳೂರು ಪ್ರಾದೇಶಿಕ ವಿಭಾಗದ ಜನಜಾಗೃತಿ ವೇದಿಕೆ ಮೇಲ್ವಿಚಾರಕರು, ಸೇವಾ ಪ್ರತಿನಿಧಿಗಳು, ತುಮಕೂರು-1 ಜಿಲ್ಲಾ ವ್ಯಾಪ್ತಿಯ ನವಜೀವನ ಸಮಿತಿ ಸದಸ್ಯರು ಹಾಗೂ ಕುಟುಂಬಸ್ಥರು ಉಪಸ್ಥಿತರಿದ್ದರು.
