ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿ. ಸಿ ಟ್ರಸ್ಟ್ (ರಿ) ತುಮಕೂರು-1 ಜಿಲ್ಲೆ ಅಖಿಲ ಕರ್ನಾಟಕ ಜಿಲ್ಲಾ ಜನಜಾಗೃತಿ ವೇದಿಕೆ ಟ್ರಸ್ಟ್ (ರಿ) ತುಮಕೂರು-1 ಜಿಲ್ಲೆ ಸಹಯೋಗದೊಂದಿಗೆ ರಾಜರ್ಷಿ ಪದ್ಮಭೂಷಣ ಡಾ. ವೀರೇಂದ್ರ ಹೆಗ್ಗಡೆಯವರು ಮತ್ತು ಮಾತೃಶ್ರೀ ಡಾ. ಹೇಮಾವತಿ ವಿ. ಹೆಗ್ಗಡೆಯವರ ಕೃಪಾಷೀರ್ವಾದ ಹಾಗೂ ಮಾರ್ಗ ದರ್ಶನಗಳೊಂದಿಗೆ ತುಮಕೂರು-1 ಜಿಲ್ಲಾ ಜನಜಾಗೃತಿ ವೇದಿಕೆ ಪದಾದಿಕಾರಿಗಳ ಸಭೆಯನ್ನು ತುಮಕೂರು ಯೋಜನಾಕಛೇರಿ ಸಭಾಂಗಣದಲ್ಲಿ ನಡೆಸಲಾಯಿತು.ತುಮಕೂರು ಗ್ರಾಮಾಂತರ ಯೋಜನಾ ಕಛೇರಿಯ ಯೋಜನಾಧಿಕಾರಿಗಳಾದ ಶ್ರೀ ಸಂದೇಶ್ ರವರು ಕಾರ್ಯ ಕ್ರಮದಲ್ಲಿ ಭಾಗವಹಿಸಿದ ಸರ್ವರಿಗೂ ಸ್ವಾಗತವನ್ನು ಬಯಸಿದರು.
ವೇದಿಕೆಯಲ್ಲಿ ಆಸೀನರಾಗಿದ್ದ ಗಣ್ಯರು ದೀಪವನ್ನು ಪ್ರಜ್ವಲಿಸುವ ಮೂಲಕ ಕಾರ್ಯಕ್ರಮವನ್ನು ಉದ್ಗಾಟಿಸಿದರು.ತುಮಕೂರು-1 ಜಿಲ್ಲೆಯ ಆಡಿಟ್ ಪ್ರಭಂದಕರಾದ ಶ್ರೀ ರಾಜೇಶ್ ರವರು ಗತ ಸಭೆಯ ವರದಿಯನ್ನು ಓದುವ ಮೂಲಕ ಸಭೆಗೆ ತಿಳಿಸಿದರು.ಕಾರ್ಯಕ್ರಮದ ಪ್ರಾಸ್ತಾವಿಕ ನುಡಿಗಳನ್ನು ತುಮಕೂರು-1 ಜಿಲ್ಲಾ ಜನಜಾಗೃತಿ ವೇದಿಕೆ ಜಿಲ್ಲಾ ಕಾರ್ಯದರ್ಶಿಗಳು ಮತ್ತು ತುಮಕೂರು-1 ಜಿಲ್ಲೆಯ ಮಾನ್ಯ ಜಿಲ್ಲಾ ನಿರ್ದೇಶಕರಾದ ಶ್ರೀ ಸತೀಶ್ ಸುವರ್ಣ ರವರು ಮಾತನಾಡಿ ಜಿಲ್ಲೆಯಲ್ಲಿ 02 ಗಾಂಧಿಸ್ಮೃತಿ ಕಾರ್ಯಕ್ರಮಗಳನ್ನು ನಡೆಸಲು ತೀರ್ಮಾನಿಸಿದ್ದು ಜಿಲ್ಲಾ ಜನಜಾಗೃತಿ ವೇದಿಕೆಯ ಪದಾದಿಕಾರಿಗಳು ಸಹಕರಿಸುವಂತೆ ತಿಳಿಸಿದರು. ಧರ್ಮಸ್ಥಳಲ್ಲಿ ಮುಂದಿನ ಆರ್ಥಿಕ ವರದಿ ವರ್ಷದಲ್ಲಿ ಎಲ್ಲಾ ತಾಲ್ಲೋಕುಗಳಲ್ಲಿ ಜನಜಾಗೃತಿ ವೇದಿಕೆಯ ಪದಾದಿಕಾರಿಗಳ ಸಹಕಾರವನ್ನು ಪಡೆದು ಜನಜಾಗೃತಿ ವೇದಿಕೆಯ ಕಾರ್ಯಕ್ರಮಗಳನ್ನು ಬಹಳಷ್ಟು ಪರಿಣಾಮಕಾರಿಯಾಗಿ ಅನುಷ್ಠಾನವನ್ನು ಮಾಡುವುದಾಗಿ ತಿಳಿಸಿದರು. ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ನಡೆಯುವ ಭಜನಾ ಕಮ್ಮಟದ ಬಗ್ಗೆ ತಿಳಿಸಿ ವೇದಿಕೆಯ ಸದಸ್ಯರಿಗೆ ಆಹ್ವಾನ ಪತ್ರಿಕೆಯನ್ನು ನೀಡುವ ಮೂಲಕ ಆಹ್ವಾನಿಸಿದರು.ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಮತ್ತು ಜನಜಾಗೃತಿ ವೇದಿಕೆಯ ಕಾರ್ಯಕ್ರಮಗಳ ಬಗ್ಗೆ ತಿಳಿಸಿ ಮಾಹಿತಿನ್ನು ನೀಡಿದರು.ಕಾರ್ಯಕ್ರಮದಲ್ಲಿ ಬೆಂಗಳೂರು ಪ್ರಾದೇಶಿಕ ವಿಭಾಗದ ಜನಜಾಗೃತಿ ವೇದಿಕೆ ಯೋಜನಾಧಿಕಾರಿ ಶ್ರೀ ತಿಮ್ಮಯ್ಯನಾಯ್ಕ ರವರು 2024-25ನೇ ಸಾಲಿನ ವರದಿ ವರ್ಷದ ಕಾರ್ಯಕ್ರಮಗಳ ಅನುಷ್ಠಾನ & ಬಾಕಿ ಉಳಿದ ಕಾರ್ಯಕ್ರಮಗಳ ಕುರಿತು ವಿಮರ್ಶೆ, ಮುಂದಿನ ವರ್ಷದ ಕ್ರಿಯಾಯೋಜನೆಯ ಕಾರ್ಯಕ್ರಮಗಳ ಬಗ್ಗೆ, ಯೋಜನೆಯ ಇತರ ಕಾರ್ಯಕ್ರಮಗಳಲ್ಲಿ ಭಾಗಿಯಾಗುವ ಕುರಿತು, ವಲಯಕ್ಕೊಂದು ನವಜೀವನ ಸಮಿತಿಗಳ ರಚನೆ ಮತ್ತು ಅನುಪಾಲನೆ, ಅಕ್ಟೋಬರ್ ತಿಂಗಳಲ್ಲಿ ನಡೆಸಲಾಗುವ ಗಾಂಧೀಸ್ಮೃತಿ ಕಾರ್ರಕ್ರಮಗಳನ್ನು ನಡೆಸುವ ಕುರಿತು ಮತ್ತು ಜಿಲ್ಲಾ ಕಛೇರಿ ವ್ಯಾಪ್ತಿಯಲ್ಲಿ ಸಪ್ಟಂಬರ್ ತಿಂಗಳ ಕೊನೆಯ ವಾರದದೊಳಗೆ ಸ್ವಾಸ್ತ್ಯ ಸಂಕಲ್ಪ ಕಾರ್ಯಕ್ರಮಗಳನ್ನು ಪೂರ್ಣಗೊಳಿಸುವಂತೆ ತಿಳಿಸಿದರು. 30/10/2025 ರಂದು 2000ನೇ ಮದ್ಯವರ್ಜನ ಶಿಬಿರವನ್ನು ನಡೆಸುವ ಬಗ್ಗೆ ಮಾಹಿತಿಯನ್ನು ನೀಡಿದರು.
ಅಕ್ಟೋಬರ್ 11 ರಂದು ತಿಪಟೂರು-1, ತಿಪಟೂರು-2, ತುರುವೇಕೆರೆ-1, ತುರುವೇಕೆರೆ-2 ಯೋಜನಾಕಛೇರಿಗಳು ಸೇರಿ ತಿಪಟೂರಿನಲ್ಲಿ ಗಾಂಧಿಸ್ಮೃತಿ ಕಾರ್ಯಕ್ರಮವನ್ನು ನಡೆಸುವಂತೆ ಹಾಗೂ ತುಮಕೂರು-1, ತುಮಕೂರು-2, ಗುಬ್ಬಿ, ಕುಣಿಗಲ್ ಯೋಜನಾಕಛೇರಿಗಳು ಸೇರಿ ತುಮಕೂರಿನಲ್ಲಿ ಗಾಂಧಿಸ್ಮೃತಿ ಕಾರ್ಯಕ್ರಮವನ್ನು ನಡೆಸುವಂತೆ ಚರ್ಚಿಸಿ ನಿರ್ಣಯಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ತುಮಕೂರು-1 ಜಿಲ್ಲೆಯ ಜಿಲ್ಲಾ ಜನಜಾಗೃತಿ ವೇದಿಕೆ ಜಿಲ್ಲಾ ಅಧ್ಯಕ್ಷರಾದ ಶ್ರೀ ಅಮರನಾಥ್ ಶೆಟ್ಟಿ ರವರು ಅಧ್ಯಕ್ಷತೆಯನ್ನು ವಹಿಸಿ ರಾಜ್ಯ ಸಂಘಟನಾ ಅಧ್ಯಕ್ಷರು ತಿಳಿಸಿರುವಂತೆ ಜಿಲ್ಲಾ ಜನಜಾಗೃತಿ ವೇದಿಕೆ ಪದಾದಿಕಾರಿಗಳೆಲ್ಲರೂ ಸೇರಿ ಕ್ಷೇತ್ರಕ್ಕೆ ತೆರಳಿ ಪೂಜ್ಯರ ಮತ್ತು ಶ್ರೀಕ್ಷೇತ್ರ ಧರ್ಮಸ್ಥಳದ ಬಗ್ಗೆ ನಡೆಯುತ್ತಿರುವ ಪಿತೂರಿಗಳ ಬಗ್ಗೆ ಖಂಡನೆಯನ್ನು ಮಾಡುವಬಗ್ಗೆ ತಿಳಿಸಿದರು. ಶ್ರೀ ಕ್ಷೇತ್ರ ಧರ್ಮಸ್ಥಳದ ಬಗ್ಗೆ ಹಲವಾರು ಜನರು ಈಗಲೂ ಪಿಶ್ರೀಕ್ಷೇತ್ರ ಧರ್ಮಸ್ಥಳ ಹಾಗೂ ಪೂಜ್ಯರ ವಿರುದ್ದ ಷಡ್ಯಂತರವನ್ನು ನಡೆಸುತ್ತಿರುವವರ ವಿರುದ್ದ ಸರ್ಕಾರ ಸೂಕ್ತ ಕ್ರಮವನ್ನು ಕೖಗೊಂಡು ಪ್ರಕರಣವನ್ನು ಹೆಚ್ಚಿನ ತನಿಕೆಗಾಗಿ ಎನ್. ಐ. ಎ ತನಿಕೆಗೆ ವಹಿಸಬೇಕೆಂದು ಸಭೆಯಲ್ಲಿ ಆಗ್ರಹಿಸಲಾಯಿತು. ಪೂಜ್ಯರ ಮತ್ತು ಕ್ಷೇತ್ರದ ವಿರುದ್ದದ ಅಪಪ್ರಚಾರವನ್ನು ಜಿಲ್ಲಾ ಜನಜಾಗೃತಿ ವೇದಿಕೆಯ ಪದಾದಿಕಾರಿಗಳು ವೇದಿಕೆಯಲ್ಲಿ ಖಂಡಿಸಿ ಖಂಡನಾ ನಿರ್ಣಯವನ್ನು ನಿರ್ಣಯಿಸಲಾಯಿತು.
ಕಾರ್ಯಕ್ರಮದಲ್ಲಿ ಎಂ. ಐ. ಎಸ್ ಯೋಜನಾಧಿಕಾರಿ ಶ್ರೀಮತಿ ಪ್ರಭಾ ಕೆ. ಶೆಟ್ಟಿ ಕ್ಷೇತ್ರ ಯೋಜನಾಧಿಕಾರಿಗಳಾದ ಶ್ರೀ ಪ್ರಭಾಕರ್ ನಾಯ್ಕ, ಶ್ರೀ ಸತೀಶ್ ಶೇಟ್, ಶ್ರೀ ಉದಯ್, ಶ್ರೀ ಸುರೇಶ್, ಶ್ರೀ ಶೇಖರ್ ಶೆಟ್ಟಿ, ಶ್ರೀಮತಿ ಶಾಲಿನಿ ಶೆಟ್ಟಿ. ಬೆಂಗಳೂರು ಪ್ರಾದೇಶಿಕ ವಿಭಾಗದ ಜನಜಾಗೃತಿ ವೇದಿಕೆ ಮೇಲ್ವಿಚಾರಕ ಶ್ರೀ ಎಂ. ಎಸ್ ದರ್ಶನ್ ತುಮಕೂರು-1 ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯರುಗಳು ಜಿಲ್ಲಾ ವೇದಿಕೆ ಸಭೆಯಲ್ಲಿ ಭಾಗವಹಿಸಿದ್ದರು.
ತೂರಿಗಳನ್ನು ನಡೆಸುತ್ತಿದ್ದು ಜನಜಾಗೃತಿ ವೇದಿಕೆಯ ಪದಾದಿಕಾರಿಗಳೆಲ್ಲರು ಸೇರಿ ಅಂತಹ ವ್ಯಕ್ತಿಗಳಿಗೆ ತಕ್ಕ ಉತ್ತರವನ್ನು ನೀಡುವಂತಾಗಬೇಕೆಂದು ತಿಳಿಸುವ ಮೂಲಕ ಅಧ್ಯಕ್ಷೀಯ ನುಡಿಗಳನ್ನು ನುಡಿದರು.
ಶ್ರೀಕ್ಷೇತ್ರ ಧರ್ಮಸ್ಥಳ ಹಾಗೂ ಪೂಜ್ಯರ ವಿರುದ್ದ ಷಡ್ಯಂತರವನ್ನು ನಡೆಸುತ್ತಿರುವವರ ವಿರುದ್ದ ಸರ್ಕಾರ ಸೂಕ್ತ ಕ್ರಮವನ್ನು ಕೖಗೊಂಡು ಪ್ರಕರಣವನ್ನು ಹೆಚ್ಚಿನ ತನಿಕೆಗಾಗಿ ಎನ್. ಐ. ಎ ತನಿಕೆಗೆ ವಹಿಸಬೇಕೆಂದು ಸಭೆಯಲ್ಲಿ ಆಗ್ರಹಿಸಲಾಯಿತು. ಪೂಜ್ಯರ ಮತ್ತು ಕ್ಷೇತ್ರದ ವಿರುದ್ದದ ಅಪಪ್ರಚಾರವನ್ನು ಜಿಲ್ಲಾ ಜನಜಾಗೃತಿ ವೇದಿಕೆಯ ಪದಾದಿಕಾರಿಗಳು ವೇದಿಕೆಯಲ್ಲಿ ಖಂಡಿಸಿ ಖಂಡನಾ ನಿರ್ಣಯವನ್ನು ನಿರ್ಣಯಿಸಲಾಯಿತು.
ಕಾರ್ಯಕ್ರಮದಲ್ಲಿ ಎಂ. ಐ. ಎಸ್ ಯೋಜನಾಧಿಕಾರಿ ಶ್ರೀಮತಿ ಪ್ರಭಾ ಕೆ. ಶೆಟ್ಟಿ ಕ್ಷೇತ್ರ ಯೋಜನಾಧಿಕಾರಿಗಳಾದ ಶ್ರೀ ಪ್ರಭಾಕರ್ ನಾಯ್ಕ, ಶ್ರೀ ಸತೀಶ್ ಶೇಟ್, ಶ್ರೀ ಉದಯ್, ಶ್ರೀ ಸುರೇಶ್, ಶ್ರೀ ಶೇಖರ್ ಶೆಟ್ಟಿ, ಶ್ರೀಮತಿ ಶಾಲಿನಿ ಶೆಟ್ಟಿ. ಬೆಂಗಳೂರು ಪ್ರಾದೇಶಿಕ ವಿಭಾಗದ ಜನಜಾಗೃತಿ ವೇದಿಕೆ ಮೇಲ್ವಿಚಾರಕ ಶ್ರೀ ಎಂ. ಎಸ್ ದರ್ಶನ್ ತುಮಕೂರು-1 ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯರುಗಳು ಜಿಲ್ಲಾ ವೇದಿಕೆ ಸಭೆಯಲ್ಲಿ ಭಾಗವಹಿಸಿದ್ದರು.
