ತೀರ್ಥಹಳ್ಳಿ 1&2 ಯೋಜನಾ ಕಚೇರಿಗೆ ವ್ಯಾಪ್ತಿಯಲ್ಲಿ ಗಾಂಧಿ ಜಯಂತಿ ಪ್ರಯುಕ್ತ ಜನಜಾಗೃತಿ ಜಾಥಾ, ಗಾಂಧಿಜಯಂತಿ ಕಾರ್ಯಕ್ರಮ ಹಾಗೂ ನವಜೀವನ ಸಮಿತಿ ಸದಸ್ಯರಿಗೆ ಅಭಿನಂದನ ಕಾರ್ಯಕ್ರಮ ನಡೆಸಲಾಯಿತು., ಜಿಲ್ಲಾ ವೇದಿಕೆ ಅಧ್ಯಕ್ಷ ಆನಂದ್ ಕುಮಾರ್ , ಜಿಲ್ಲಾ ನಿರ್ದೇಶಕ ಚಂದ್ರಶೇಖರ್ ಜೆ. ತಹಶೀಲ್ದಾರ್ ಅಮೃತ್ ಆತ್ರೆಶ್ , dysp ಶಾಂತವೀರ , ಹಾಗೂ ತಾಲೂಕು ವೇದಿಕೆ ಸದಸ್ಯರಾದ ಸೊಪ್ಪುಗುಡ್ಡೆ ರಾಘವೇಂದ್ರ, ಅಶೋಕ್ ಮೂರ್ತಿ, ಮುದ್ದಣ್ಣ, ಹಾಗೂ ತೀರ್ಥಹಳ್ಳಿ ತಾಲೂಕಿನಲ್ಲಿ ನಡೆದ 13 ಮದ್ಯಾವರ್ಜನಾ ಶಿಬಿರದ ವ್ಯವಸ್ಥಾಪನ ಸಮಿತಿ ಅಧ್ಯಕ್ಷರುಗಳು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ 200 ಮಂದಿ ನವಜೀವನ ಸಮಿತಿ ಸದಸ್ಯರು ಭಾಗವಹಿಸಿದ್ದು ವೇದಿಕೆ ವತಿಯಿಂದ ಅಭಿನಂದಿಸಲಾಯ್ತು. ಜಾಗೃತಿ ಅಣ್ಣ ಹಾಗೂ ಜಾಗೃತಿ ಮಿತ್ರ ಪ್ರಶಸ್ತಿ ಪಡೆದ ತಾಲ್ಲೂಕಿನ 5 ಮಂದಿಯನ್ನು ಸನ್ಮಾನಿಸಲಾಯ್ತು. ಈ ಬಾರಿ ಧರ್ಮಸ್ಥಳದಲ್ಲಿ ನಡೆದ ಭಜನೋತ್ಸವ ಕಾರ್ಯಕ್ರಮದಲ್ಲಿ ಸಾಧಕ ಪ್ರಶಸ್ತಿ ಪಡೆದ ತೀರ್ಥಹಳ್ಳಿ ಭಜನಾ ಪರಿಷತ್ ನ ಅಧ್ಯಕ್ಷರಾದ ಶ್ರೀ ಮಂಜುನಾಥ ರವರನ್ನು ಸಂಮಾನಿಸಲಾಯ್ತು. ಕಾರ್ಯಕ್ರಮದಲ್ಲಿ ಒಟ್ಟು ಸುಮಾರು ಸುಮಾರು 600 ಮಂದಿಸದಸ್ಯರು ಸದಸ್ಯರು ಭಾಗವಹಿಸಿದ್ದು ಜಾಥಾ ನಡೆಸಲಾಯಿತು ಎಪಿಎಂಸಿ ಯಿಂದ ತುಂಗಾ ತೀರ ಮಾಧವ ಮಂಗಳವಾರ ಭವನದ ವರೆಗೆ ಜನಜಾಗೃತಿ ಜಾಥಾ ನಡೆಸಲಾಯಿತು.
