ತೀರ್ಥಹಳ್ಳಿ ತಾಲೂಕಿನ ಆರಗದ ದೇವರಗುಡಿ ಗುತ್ತಿ ರೇಣುಕಾಂಬ ದೇವಸ್ಥಾನದಲ್ಲಿ 1,719ನೇ ಮಧ್ಯವರ್ಜನ ಶಿಬಿರದ ಉದ್ಘಾಟನಾ ಸಮಾರಂಭ

Janajagurthi Vedike News

ತೀರ್ಥಹಳ್ಳಿ ತಾಲೂಕಿನ ಆರಗದ ದೇವರಗುಡಿ ಗುತ್ತಿ ರೇಣುಕಾಂಬ ದೇವಸ್ಥಾನದಲ್ಲಿ 1,719ನೇ ಮಧ್ಯವರ್ಜನ ಶಿಬಿರದ ಉದ್ಘಾಟನಾ ಸಮಾರಂಭ ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿದ ಕರ್ನಾಟಕ ಸರಕಾರದ ಮಾಜಿ ಶಿಕ್ಷಣ ಸಚಿವರಾದ ಶ್ರೀ ಕಿಮ್ಮನೆ ರತ್ನಾಕರ ರವರು ಸುಂದರವಾದ ಬದುಕಿಗೆ ಮಧ್ಯ ವ್ಯಸನವು ಕಂಟಕವಾಗಿದೆ. ಮಧ್ಯ ಅಥವಾ ಮಾದಕ ವಸ್ತುಗಳ ವ್ಯಸನದಿಂದ ಜೀವನವು ನರಕ ಸದೃಶವಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಅತಿ ಹೆಚ್ಚು ಯುವ ಜನಾಂಗವು ವ್ಯಸನಕ್ಕೆ ಬಲಿಯಾಗುತ್ತಿದ್ದು ಇದರಿಂದಾಗಿ ಅನೇಕ ಅಪರಾಧ ಚಟುವಟಿಕೆಗಳು ನಡೆಯುತ್ತಿವೆ. ಸಮಾಜದ ಉತ್ತಮ ಸ್ವಾಸ್ಥ್ಯಕ್ಕಾಗಿ ನಾವು ಯುವಜನರ ದುರ್ವ್ಯಸನವನ್ನು ನಿಯಂತ್ರಣ ಗೊಳಿಸಲೇಬೇಕಾಗಿದೆ ಈ ನಿಟ್ಟಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದ ಪೂಜ್ಯ ಖಾವಂದರ ಮಾರ್ಗದರ್ಶನದಲ್ಲಿ ಅತ್ಯುತ್ತಮ ಕಾರ್ಯಕ್ರಮವನ್ನು ನಡೆಸಿ ಸಮಾಜಕ್ಕೆ ಮಾದರಿಯಾಗಿದೆ ಎಂದು ನುಡಿದರು. ಜಿಲ್ಲಾ ಜನಜಾಗೃತಿ ವೇದಿಕೆ ಶಿವಮೊಗ್ಗ ಇದರ ಅಧ್ಯಕ್ಷರಾದ ಶ್ರೀ ಸೊಪ್ಪುಗುಡ್ಡೆ ರಾಘವೇಂದ್ರರವರು ಅಧ್ಯಕ್ಷತೆಯನ್ನು ವಹಿಸಿದ್ದರು. 1,719ನೇ ಮಧ್ಯವರ್ಜನ ಶಿಬಿರ ವ್ಯವಸ್ಥಾಪನ ಸಮಿತಿ ಆರಗ ಇದರ ಅಧ್ಯಕ್ಷರಾದ ಚಂದವಳ್ಳಿ ಸೋಮಶೇಖರ್ ರವರು, ತೀರ್ಥಹಳ್ಳಿ ತಾಲೂಕು ಯೋಜನಾಧಿಕಾರಿ ಶ್ರೀಮತಿ ಮಾಲತಿ ದಿನೇಶ್ ರವರು, ಜಿಲ್ಲಾ ಜನ ಜಾಗೃತಿ ವೇದಿಕೆಯ ಸದಸ್ಯರಾದ ಶ್ರೀ ಅಶೋಕ್ ಮೂರ್ತಿ,ಶ್ರೀಮತಿ ಆಶಾ ಸತೀಶ್, ಶ್ರೀಮತಿ ಆಶಾ ಶ್ರೀನಿವಾಸ್, ಶ್ರೀ ಗುತ್ತಿ ರೇಣುಕಾಂಬ ದೇವಸ್ಥಾನದ ಧರ್ಮದರ್ಶಿಗಳಾದ ಶ್ರೀ ಸುರೇಂದ್ರ ಗೌಡ್ರು, ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀ ಜಗದೀಶ್ ಹಿರೇಗದ್ದೆ, ಅರಗ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಶ್ರೀ ಚಂದ್ರಶೇಖರ್, ಶ್ರೀ ಕಲನಾಥೇಶ್ವರ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷರು ಶ್ರೀ ಮಹೇಶ್, ಕಲಾನಾಥೇಶ್ವರ ವ್ಯವಸಾಯ ಸೇವಾ ಸಹಕಾರಿ ಸಂಘದ ನಿರ್ದೇಶಕರಾದ ಶ್ರೀ ಗಂಗಾಧರ, ಧನ್ಯರಾದ ಕೇಳೂರು ಮಿತ್ರ, ಆರೋಗ ಗ್ರಾಮ ಪಂಚಾಯಿತಿ ಸದಸ್ಯರಾದ ಶ್ರೀ ಶಂಕರಪ್ಪ, ಜಿಲ್ಲಾ ಜನಜಾಗೃತಿ ವೇದಿಕೆಯ ಮಾಧ್ಯಮ ಸಲಹೆಗಾರರಾದ ಶ್ರೀ ತುಪ್ಪದ ಮನೆ ಶಿವಣ್ಣ, ಜನಜಾಗೃತಿ ಯೋಜನಾಧಿಕಾರಿಗಳು, ಮುಂತಾದವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಗ್ರಾಮ ಅಭಿವೃದ್ಧಿ ಯೋಜನೆಯ ತೀರ್ಥಹಳ್ಳಿ2 ಯೋಜನಾ ಕಚೇರಿಯ ಯೋಜನಾಧಿಕಾರಿ ಮಂಜುನಾಥ್ ಕಾರ್ಯಕ್ರಮವನ್ನು ನಿರ್ವಹಿಸಿದರು. ಆರೋಗ್ಯ ಸಹಾಯಕರು, ಆರಗ ವಲಯ ಮೇಲ್ವಿಚಾರಕಿ ಶ್ರೀಮತಿ ಕಮಲಾಕ್ಷಿ ಇವರು ಸ್ವಾಗತಿಸಿದರು, ಕಡಗದ್ದೆ ಕಾರ್ಯಕ್ಷೇತ್ರದ ಸೇವಾ ಪ್ರತಿನಿಧಿ ಶ್ರೀಮತಿ ಭಾಗ್ಯಲಕ್ಷ್ಮಿ ಅವರು ಧನ್ಯವಾದ ಮಾಡಿದರು.