ತೀರ್ಥಹಳ್ಳಿ ತಾಲೂಕಿನಲ್ಲಿ ಇಂದು ಜನಜಾಗೃತಿ ಜಾಥಾ,ಗಾಂಧೀಜಯಂತಿ, ಹಾಗೂ ನವಜೀವನ ಸಮಿತಿ ಸದಸ್ಯರ ಅಭಿನಂದನಾ ಕಾರ್ಯಕ್ರಮ ಹಮ್ಮಿಕೊಂಡಿದ್ದು ಈ ಕಾರ್ಯಕ್ರಮದ ಉದ್ಘಾಟನೆಯನ್ನು ಸನ್ಮಾನ್ಯ ಮಾಜಿ ಗೃಹ ಸಚಿವರೂ ತೀರ್ಥಹಳ್ಳಿ ವಿಧಾನ ಸಭಾ ಕ್ಷೇತ್ರದ ಶಾಸಕರು ಆಗಿರುವ ಶ್ರೀ ಅರಗ ಜ್ಞಾನೇಂದ್ರ ರವರು ನೆರವೇರಿಸಿ ಶುಭಹಾರೈಸಿದರು. ಜಿಲ್ಲಾ ವೆದಿಕೆಯ ಅಧ್ಯಕ್ಷರಾದ ಸೊಪ್ಪುಗುಡ್ಡೆ ರಾಘವೇಂದ್ರರವರು ವಹಿಸಿ ಜನಜಾಗೃತಿ ವೇದಿಕೆಯ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿ, ಜಿಲ್ಲಾ ನಿರ್ದೇಶಕರು ಕಾರ್ಯಕ್ರಮದಲ್ಲಿ ನವಜೀವನ ಸಮಿತಿ ಸದಸ್ಯರಿಗೆ ಮಾರ್ಗದರ್ಶನ ನೀಡಿದರು. ಉಪನ್ಯಾಸವನ್ನ ಮನೋವೈದ್ಯರಾದ drಪವಿತ್ರ ರವರು “”ಮತ್ತೆ ವ್ಯಸನಕ್ಕೆ ಮರಳದಿರಿ “” ಎಂಬ ವಿಷಯದ ಬಗ್ಗೆ ಮಾಹಿತಿ ನೀಡಿದರೂ, ಮುಖ್ಯ ಅತಿಥಿಗಳಾಗಿ dr.ಜೀವಂಧರ್ ಜೈನ್ ರವರು ಹಾಗೂ ಜಿಲ್ಲಾ ವೇದಿಕೆಯ ಸದಸ್ಯರೂ, ಪಟ್ಟಣ ಪಂಚಾಯತ್ ಅದ್ಯಕ್ಷರು ಶೌರ್ಯ ಮಾಸ್ಟರ್, ರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು, ಜಾಥಾ ಕಾರ್ಯಕ್ರಮದಲ್ಲಿ ಸುಮಾರು 500 ಮಂದಿ ಭಾಗವಹಿಸಿದ್ದರು
