ತಿಪಟೂರು ತಾಲೂಕಿನ ಕರಡಿ ವಲಯದ ಬಿಳಿಗೆರೆ ಕಾರ್ಯಕ್ಷೇತ್ರದಲ್ಲಿ ಜ್ಞಾನವಿಕಾಸ ಕೇಂದ್ರದಲ್ಲಿ ಅಂತಾರಾಷ್ಟ್ರೀಯ ಮಾದಕದ್ರವ್ಯ ವಿರೋಧಿ ದಿನಾಚರಣೆ ಆಚರಿಸಲಾಯಿತು. ಈ ಸಂದರ್ಭದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಜನಜಾಗೃತಿ ವೇದಿಕೆ ಸದಸ್ಯರಾದ ಪ್ರತಾಪ್ ಸಿಂಗ್, ,ಮಾಜಿ ಪಂಚಾಯತ್ ಉಪಾಧ್ಯಕ್ಷರಾದ ನೀಲಮ್ಮ, ಆರ್ಥಿಕ ಸಮಾಲೋಚಕರಾದ ರೇಖಾ, ವಲಯ ಮೇಲ್ವಿಚಾರಕ ರಮೇಶ್, ಜ್ಞಾನವಿಕಾಸ ಸಮನ್ವಯಾಧಿಕಾರಿ ವಿಜಯಲಕ್ಷ್ಮಿ, ಸೇವಾಪ್ರತಿನಿಧಿ ವೀಣಾ ಹಾಗೂ ಸಂಘದ ಸದಸ್ಯರು ಉಪಸ್ಥಿತರಿದ್ದರು.
