ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ (ರಿ) ತರೀಕೆರೆ ತಾಲೂಕು, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ (ರಿ)ಬೆಳ್ತಂಗಡಿ, ಜಿಲ್ಲಾ ಜನಜಾಗೃತಿ ವೇದಿಕೆ ಚಿಕ್ಕಮಗಳೂರು, ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ ಬೆಂಗಳೂರು, ಮದ್ಯವರ್ಜನ ಶಿಬಿರ ವ್ಯವಸ್ಥಾಪನಾ ಸಮಿತಿ ತರೀಕೆರೆ, ಅಕ್ಕನಾಗಲಾಂಬಿಕಾ ಸಮುದಾಯ ಭವನ ತರೀಕೆರೆ, ಪುರಸಭೆ ತರೀಕೆರೆ, ಸರ್ಕಾರಿ ಸಾರ್ವಜನಿಕ ಆಸ್ಪತ್ರೆ ತರೀಕೆರೆ, ಪೊಲೀಸ್ ಇಲಾಖೆ ತರೀಕೆರೆ, ರೋಟರಿ ಸಂಸ್ಥೆ ತರೀಕೆರೆ, ಜನಹಿತ ಸೇವಾ ಟ್ರಸ್ಟ್ ತರೀಕೆರೆ, ಸೆಲ್ಕೋ ಸೋಲಾರ್ ಪ್ರೈವೇಟ್ ಲಿಮಿಟೆಡ್ ತರೀಕೆರೆ, ಪ್ರಗತಿಬಂಧು ಸ್ವ-ಸಹಾಯ ಸಂಘಗಳ ಒಕ್ಕೂಟಗಳು ಪುರಸಭೆ ವಲಯ ಮತ್ತು ಅಮೃತಾಪುರ ವಲಯ, ನವಜೀವನ ಸಮಿತಿಗಳು ತರೀಕೆರೆ, ಊರಿನ ಗಣ್ಯರು ಮತ್ತು ಉದಾರ ದಾನಿಗಳ ಸಹಕಾರದೊಂದಿಗೆ ಪರಮಪೂಜ್ಯ ಡಾll ಡಿ. ವೀರೇಂದ್ರ ಹೆಗ್ಗಡೆಯವರು ಮತ್ತು ಮಾತೃಶ್ರೀ ಶ್ರೀಮತಿ ಡಾll ಹೇಮಾವತಿ ವಿ.ಹೆಗ್ಗಡೆಯವರ ಶುಭಾಶೀರ್ವಾದಗಳೊಂದಿಗೆಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ವ್ಯಸನಮುಕ್ತಿ ಮತ್ತು ಸಂಶೋಧನಾ ಕೇಂದ್ರ ಲಾಯಿಲ ಬೆಳ್ತಂಗಡಿ ಇದರ ವಿಸ್ತರಣಾ ಕಾರ್ಯಕ್ರಮದ ಅಂಗವಾಗಿ 1708 ನೇ ಮದ್ಯವರ್ಜನ ಶಿಬಿರದ ಉದ್ಘಾಟನಾ ಸಮಾರಂಭವು ಶ್ರೀ ಅಕ್ಕನಾಗಲಾಂಬಿಕಾ ಸಮುದಾಯ ಭವನ ಎಂ.ಜಿ ರಸ್ತೆ ತರೀಕೆರೆ ಇಲ್ಲಿ ನಡೆಯಿತು. ಶ್ರೀ ಆರ್.ದೇವರಾಜ್ ಅಧ್ಯಕ್ಷರು 1708 ನೇ ಮದ್ಯವರ್ಜನ ಶಿಬಿರ ವ್ಯವಸ್ಥಾಪನಾ ಸಮಿತಿ ತರೀಕೆರೆ ಇವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಅಧ್ಯಕ್ಷೀಯ ಮಾತುಗಳೊಂದಿಗೆ ಶುಭಾಶಯವನ್ನು ಕೋರಿದರು. ಶ್ರೀ ನಾಗರಾಜ್ ಕುಲಾಲ್ ಯೋಜನಾಧಿಕಾರಿ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಪ್ರಾದೇಶಿಕ ವಿಭಾಗ ಚಿತ್ರದುರ್ಗ ಇವರು ಕಾರ್ಯಕ್ರಮದ ಕುರಿತು ಪ್ರಾಸ್ತಾವಿಕವಾಗಿ ಮಾತುಗಳನ್ನಾಡಿದರು. ಶ್ರೀಮತಿ ಗೀತಾ ಶಂಕರ್ ಕಾರ್ಯ ನಿರ್ವಹಣಾಧಿಕಾರಿ ತಾಲೂಕು ಪಂಚಾಯಿತಿ ತರೀಕೆರೆ ಇವರು ಕಾರ್ಯಕ್ರಮವನ್ನು ಉದ್ಘಾಟಿಸಿ ಉದ್ಘಾಟನಾ ಮಾತುಗಳನ್ನಾಡಿದರು. ಮುಖ್ಯ ಅತಿಥಿಗಳಾಗಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ (ರಿ) ಚಿಕ್ಕಮಗಳೂರು ಜಿಲ್ಲೆಯ ಗೌರವಾನ್ವಿತ ಜಿಲ್ಲಾ ನಿರ್ದೇಶಕರಾದ ಶ್ರೀ ಪ್ರಕಾಶ್ ರಾವ್ ಇವರು ಮಾತನಾಡಿ ಸಂಸ್ಥೆಯ ಹುಟ್ಟು, ಬೆಳವಣಿಗೆ, ನಡೆದು ಬಂದ ದಾರಿ, ಅಭಿವೃದ್ಧಿಯ ಪಥ ಮತ್ತು ಸಾಧನೆಯ ಪರಿಚಯದೊಂದಿಗೆ ಶುಭಾಶಯವನ್ನು ಕೋರಿದರು. ಕಾರ್ಯಕ್ರಮದ ವೇದಿಕೆಯಲ್ಲಿ ಶ್ರೀ ಎಸ್. ವೀರೇಂದ್ರ ಪೊಲೀಸ್ ವೃತ್ತ ನಿರೀಕ್ಷಕರು ತರೀಕೆರೆ ನಗರ, ಶ್ರೀಮತಿ ವಾಣಿ ಶ್ರೀನಿವಾಸ್ ಕಾರ್ಯದರ್ಶಿಗಳು ಜನಹಿತ ಸೇವಾ ಟ್ರಸ್ಟ್ ತರೀಕೆರೆ, ಶ್ರೀಮತಿ ರಾಜೇಶ್ವರಿ ಅಧ್ಯಕ್ಷರು ಮಹಿಳಾ ಮೋರ್ಚಾ ತರೀಕೆರೆ ತಾಲೂಕು, ಶ್ರೀ ಭೋಜರಾಜು ಸದಸ್ಯರು ಪುರಸಭೆ ತರೀಕೆರೆ, ಶ್ರೀ ಕೆ.ನಾಗರಾಜು ಅಧ್ಯಕ್ಷರು ತಾಲೂಕು ಪತ್ರಕರ್ತರ ಸಂಘ ತರೀಕೆರೆ, ಶ್ರೀ ದಾದಾಪೀರ್ ಸದಸ್ಯರು ಪುರಸಭೆ ತರೀಕೆರೆ, ಶ್ರೀ ಅಸ್ಲಾಂಖಾನ್ ಸದಸ್ಯರು ಜಿಲ್ಲಾ ಜನಜಾಗೃತಿ ವೇದಿಕೆ ಚಿಕ್ಕಮಗಳೂರು, ಶ್ರೀ ಟಿ.ಆರ್ ಶ್ರೀಧರ್ ಸದಸ್ಯರು ಜಿಲ್ಲಾ ಜನಜಾಗೃತಿ ವೇದಿಕೆ ಚಿಕ್ಕಮಗಳೂರು ಇವರುಗಳು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಕಾರ್ಯಕ್ರಮವನ್ನು ಕುರಿತು ಶುಭವನ್ನು ಕೋರಿದರು. ಕಾರ್ಯಕ್ರಮದಲ್ಲಿ ಶ್ರೀ ನಂದಕುಮಾರ್ ಪಿ ಪಿ ಶಿಬಿರಾಧಿಕಾರಿ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಬೆಳ್ತಂಗಡಿ, ಶ್ರೀಮತಿ ಸೌಮ್ಯ ಮಂಜುನಾಥ್ ಆರೋಗ್ಯ ಸಹಾಯಕಿ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಬೆಳ್ತಂಗಡಿ, ಶ್ರೀ ರುದ್ರಪ್ಪ ಹೂಗಾರ್ ಮೇಲ್ವಿಚಾರಕರು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಪ್ರಾದೇಶಿಕ ವಿಭಾಗ ಚಿತ್ರದುರ್ಗ ಇವರು ಉಪಸ್ಥಿತರಿದ್ದರು. ತಾಲೂಕಿನ ಎಲ್ಲಾ ಮೇಲ್ವಿಚಾರಕರು, ತತ್ಸಮಾನ ಸಿಬ್ಬಂದಿಗಳು, ವಲಯದ ಸೇವಾಪ್ರತಿನಿಧಿಗಳು, ಒಕ್ಕೂಟದ ಪಲಾಧಿಕಾರಿಗಳು, ಪ್ರಗತಿಬಂಧು ಸ್ವ-ಸಹಾಯ ಸಂಘಗಳ ಸದಸ್ಯರುಗಳು, ಸಾರ್ವಜನಿಕರು, ಹಾಗೂ ನವಜೀವನ ಸಮಿತಿ ಸದಸ್ಯರು, ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಿದರು.
ಕಾರ್ಯಕ್ರಮವನ್ನು ಶ್ರೀ ಕುಸುಮಾಧರ್ ಯೋಜನಾಧಿಕಾರಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ (ರಿ) ತರೀಕೆರೆ ತಾಲೂಕು ಇವರು ಸ್ವಾಗತಿಸಿ, ಶ್ರೀ ಸತೀಶ್ ಮೇಲ್ವಿಚಾರಕರು ಶ್ರೀ .ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ (ರಿ) ಲಿಂಗದ ಹಳ್ಳಿ ವಲಯ ಇವರು ನಿರೂಪಿಸಿ, ಶ್ರೀ ಸಿದ್ದಯ್ಯ ಮೇಲ್ವಿಚಾರಕರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ (ರಿ) ಪುರಸಭೆ ವಲಯ ಇವರು ವಂದಿಸಿದರು.
