ಟಿವಿ 9 ಸುದ್ದಿ ವಾಹಿನಿ ಮೂಲಕ ಡ್ರಗ್ಸ್ ಬೇಡ ಕರ್ನಾಟಕ ಎಂಬ ದುಂಡು ಮೇಜಿನ ಸಭೆ

Janajagurthi Vedike News

ಟಿವಿ 9 ಸುದ್ದಿ ವಾಹಿನಿಯ ಮೂಲಕ ಡ್ರಗ್ಸ್ ಬೇಡ ಕರ್ನಾಟಕ ಎನ್ನುವ ದುಂಡು ಮೇಜಿನ ಸಭೆಗೆ ರಾಜ್ಯದ ವ್ಯಸನ ಮುಕ್ತಿ ಕೇಂದ್ರದ ಪ್ರತಿನಿಧಿಯಾಗಿ ಜನಜಾಗೃತಿ ವೇದಿಕೆಗೆ ಆಮಂತ್ರಣವನ್ನು ನೀಡಿದ್ದರು .ಈ ಸಭೆಯಲ್ಲಿ ವೇದಿಕೆಯ ಪ್ರತಿನಿಧಿಯಾಗಿ ನಾನು ಭಾಗವಹಿಸಿ ಸರಕಾರಕ್ಕೆ ಉಪಯುಕ್ತ ಸಲಹೆಗಳನ್ನು ನೀಡಿರುತ್ತೇನೆ .ಬಳಿಕ ಗೃಹ ಸಚಿವರಲ್ಲಿ ವೈಯಕ್ತಿಕವಾಗಿ ಮಾತನಾಡಿ ಡ್ರಗ್ಸ್ ನಿರ್ಮೂಲನೆ ವಿಚಾರದಂತೆ ಧರ್ಮಸ್ಥಳ ಜತೆಯಲ್ಲಿ ಸೇರಿಕೊಂಡು ಕ್ರಮ ಕೈಗೊಳ್ಳಬೇಕು ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿರುತ್ತಾರೆ .ಸಭೆಯಲ್ಲಿ ರಾಜ್ಯದ ಮುಖ್ಯಮಂತ್ರಿಗಳಾದ ಬಿಎಸ್ ಯಡಿಯೂರಪ್ಪ ಗೃಹ ಸಚಿವರಾದ ಬಸವರಾಜ್ ಬೊಮ್ಮಾಯಿ ಸಂಸದೆ ಸುಮಲತಾ ಸಂಸದರಾದ ತೇಜಸ್ವಿ ಸೂರ್ಯ ಹಾಜರಿದ್ದರು ವಿಧಾನ ಪರಿಷತ್ ಸದಸ್ಯರಾದ ಲಹರ್ ಸಿಂಗ್ ನಟರಾದ ಅಜಯ್ ನಿವೃತ್ತ ಪೊಲೀಸ್ ವರಿಷ್ಠಾಧಿಕಾರಿ ಶಂಕರ್ ಬಿದರಿ .ಲೋಕಾಯುಕ್ತ ನ್ಯಾಯಾಧೀಶರು .ಚರ್ಚೆಯಲ್ಲಿ ಉಪಸ್ಥಿತರಿದ್ದರು .ಸಭೆಯಲ್ಲಿ ಇನ್ನೂರಕ್ಕೂ ಮಿಕ್ಕಿದ ವಿವಿಧ ಸಂಘಟನೆಗಳ ಮುಖಂಡರು ಇಲಾಖಾಧಿಕಾರಿಗಳು ಉಪಸ್ಥಿತರಿದ್ದರು .ರಂಗನಾಥ್ ಭಾರದ್ವಾಜ್ ಕಾರ್ಯಕ್ರಮವನ್ನು ನಡೆಸಿಕೊಟ್ಟರು .ಜನಜಾಗೃತಿ ವೇದಿಕೆಗೆ ಲಭಿಸಿದ ಒಂದು ದೊಡ್ಡ ಅವಕಾಶ ಅವಕಾಶ ಇದಾಗಿದೆ.ಅಖಿಲ ಕರ್ನಾಟಕ ಜನಜಾಗತಿ ವೇದಿಕೆಯ ರಾಜ್ಯಾಧ್ಯಕ್ಷರಾದ ವಿ ರಾಮಸ್ವಾಮಿ ವಿಪತ್ತು ನಿರ್ವಹಣೆ ಯೋಜನಾಧಿಕಾರಿ ಜಯವಂತ್ ಪಟಗಾರ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು .