ಜ್ಞಾನ ವಿಕಾಸ ತರಬೇತಿ ಸಂಸ್ಥೆ ರಾಯಾಪುರ ಧಾರವಾಡದ ಐಸೋಲೇಶನ್ ಸೆಂಟರ್ ನ ಕಾರ್ಯವೈಖರಿಯ ಪರೀಶೀಲನಾ ಸಭೆ:

Janajagurthi Vedike News

ಸಿರಿಧಾನ್ಯ ಘಟಕದ ನಿರ್ದೇಶಕರಾದ ದಿನೇಶ್ ರವರ ಉಪಸ್ಥಿತಿಯಲ್ಲಿ ಐಸೋಲೇಶನ್ ಸೆಂಟರ್ ನ ಕಾರ್ಯವೈಖರಿಯ ಬಗ್ಗೆ ವಿಮರ್ಶೆ ನೆಡೆಸಿದ್ದು, ಈ ಸಂದರ್ಭದಲ್ಲಿ ಜನಜಾಗೃತಿ ವಿಭಾಗದ ಯೋಜನಾಧಿಕಾರಿ ನಾಗೇಶ್ ವೈ.ಎ, ಆರೋಗ್ಯ ಸಹಾಯಕರಾದ ವೆಂಕಟೇಶ್, ಶ್ರೀಮತಿ ಪ್ರೇಸಿಲ್ಲಾ ಡಿ.ಸೋಜ, ತರಬೇತಿ ಕೇಂದ್ರದ ಉಪನ್ಯಾಸಕಿ ಶ್ರೀಮತಿ ವಿಜಯಲಕ್ಷ್ಮಿ ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥರಿದ್ದರು. ಈ ಸಂದರ್ಭದಲ್ಲಿ ಗೌರವಾನ್ವಿತ ಮಾನ್ಯ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು, ಹಣಕಾಸು ವಿಭಾಗದ ಪ್ರಾದೇಶಿಕ ನಿರ್ದೇಶಕರು ಹಾಗೂ ಧಾರವಾಡ ಪ್ರಾದೇಶಿಕ ವಿಭಾಗದ ಪ್ರಾದೇಶಿಕ ನಿರ್ದೇಶಕರು ಜನಜಾಗೃತಿ ವೇದಿಕೆಯ ಪ್ರಾದೇಶಿಕ ನಿರ್ದೇಶಕರು ದೂರವಾಣಿ ಸಂಪರ್ಕದ ಮೂಲಕ ಸೂಕ್ತ ಮಾರ್ಗದರ್ಶನ ನೀಡಿರುತ್ತಾರೆ.