ಜೇವರ್ಗಿ ತಾಲೂಕಿನ ಜೇವರ್ಗಿ ಕಾರ್ಯಕ್ಷೇತ್ರದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಡಾ!!ಮಹಾಂತ ಮಹಾಸ್ವಾಮಿಗಳ ಜನ್ಮದಿನದ ಅಂಗವಾಗಿ ಸ್ವಾಸ್ಯ ಸಂಕಲ್ಪ ಕಾರ್ಯಕ್ರಮ

Janajagurthi Vedike News

ಜೇವರ್ಗಿ ತಾಲೂಕಿನ ಜೇವರ್ಗಿ ಕಾರ್ಯಕ್ಷೇತ್ರದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಡಾ!!ಮಹಾಂತ ಮಹಾಸ್ವಾಮಿಗಳ ಜನ್ಮದಿನದ ಅಂಗವಾಗಿ ಸ್ವಾಸ್ಯ ಸಂಕಲ್ಪ ಕಾರ್ಯಕ್ರಮವನ್ನು ಮಾಂತೇಶ್ವರ ಪ್ರೌಢಶಾಲೆಯಲ್ಲಿ ಹಮ್ಮಿಕೊಳ್ಳಲಾಯಿತು, ಶಾಲೆಯ ಮುಖ್ಯೋಪಾಧ್ಯಾಯರಾದ ಸುಮಂಗಲ ಅವರು, ತಾಲೂಕಿನ ಯೋಜನಾಧಿಕಾರಿಗಳಾದ ದಿನೇಶ್ ಸರ್, ಸಂಪನ್ಮೂಲ ವ್ಯಕ್ತಿಗಳಾದ ಸೋಮನಾಥ್ ಕೆರಳ್ಳಿ ಗಿಡಕ್ಕೆ ನೀರೆಯುವುದರ ಮೂಲಕ ಉದ್ಘಾಟಿಸಿ ಸ್ವಾಸ್ಥ್ಯ ಎಂದರೆ ಆರೋಗ್ಯ ನಮ್ಮ ಆರೋಗ್ಯವನ್ನು, ಕಾಪಾಡಿಕೊಳ್ಳುವುದು ನಮ್ಮ ಕರ್ತವ್ಯ, ದುಶ್ಚಟಗಳಾದ ಗಾಂಜಾ, ಸಿಗರೇಟ್, ಡ್ರಗ್ಸ್, ಸೇವನೆಯ ಹಾನಿಕರಕ ಪರಿಣಾಮಗಳ ಬಗ್ಗೆ ಮಕ್ಕಳಿಗೆ ಜಾಗೃತಿ ಮೂಡಿಸಲಾಯಿತು,ಸದೃಢವಾದ ಮನಸ್ಸು, ಸದೃಢ ದೇಹ ನಮ್ಮದಾಗಬೇಕು ಈ ಮಾದಕ ವಸ್ತುಗಳಿಗೆ ದಾಸರಾಗಿ ಬುದ್ದಿಮಂದ್ಯಾರಗುತ್ತಿದ್ದಾರೆ ಹಾಗೂ ಹಲವಾರು ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ. ನಾಲಿಗೆಯ ಚಟಕ್ಕೆ ತಮ್ಮ ಜೀವನವನ್ನು ಮತ್ತು ತಮ್ಮವರ ಜೀವನವನ್ನು ಹಾಳು ಮಾಡಿಕೊಳ್ಳಬೇಡಿ ಇವುಗಳನ್ನು ಸೇವಿಸುವುದರಿಂದ ಶ್ವಾಸಕೋಶ ಹಾಳಾಗಿ ಕ್ಯಾನ್ಸರ್ ಕಾಯಿಲೆಗೆ ತುತ್ತಾಗುತ್ತಿದ್ದಾರೆ. ಅದರ ಹೊಗೆ ಸೇವನೆ ಮಾಡಿದವರಿಗೂ ಕ್ಯಾನ್ಸರ್ ಕಾಯಿಲೆ ಬರುತ್ತದೆ, ಸಮಾಜದ ಸ್ವಾಸ್ಥ್ಯ ಆರೋಗ್ಯ ಕಾಪಾಡಿಕೊಳ್ಳುವುದು ನಮ್ಮೆಲ್ಲರ ಆಧ್ಯ ಕರ್ತವ್ಯ ಎಂದರು, ತಾಲೂಕಿನ ಯೋಜನಾಧಿಕಾರಿಯವರು ಅವರು ಪ್ರಾಸ್ತವಿಕವಾಗಿ ಮಾತನಾಡಿ ಯೋಜನೆ ಕಾರ್ಯಕ್ರಮಗಳ ಬಗ್ಗೆ ದಿನಾಚರಣೆಯ ಬಗ್ಗೆ ಮಾಹಿತಿ ನೀಡಿ ನಿಮ್ಮ ಭವಿಷ್ಯ ಹಾಳಾಗುತ್ತದೆ, ನಿಮ್ಮ ಕುಟುಂಬ, ಆರೋಗ್ಯ, ಹಾನಿಯ ಬಗ್ಗೆ, ಸಾಮಾಜಿಕವಾಗಿ ಆರ್ಥಿಕವಾಗಿ ಮಾನಸಿಕವಾಗಿ ಯಾವ ರೀತಿ ಸಮಸ್ಯೆಗಳು ಉಂಟಾಗುತ್ತದೆ ಎಂದು ವಿಸ್ತಾರವಾಗಿ ಮಕ್ಕಳಿಗೆ ಮಾಹಿತಿ ನೀಡಿದರು, ಮಕ್ಕಳು ಕೂಡ ಉತ್ತಮ ರೀತಿಯಲ್ಲಿ ಅನಿಸಿಕೆಗಳನ್ನು ವ್ಯಕ್ತಪಡಿಸಿದ್ದರು, ಪ್ರತಿಜ್ಞಾವಿಧಿಯನ್ನು ಕೂಡ ಬೋಧಿಸಲಾಯಿತು, ಈ ಸಂದರ್ಭದಲ್ಲಿ ಶಾಲೆಯ ಶಿಕ್ಷಕರು ಸಂಗೀತ ಪಡಶೆಟ್ಟಿ,ಮಕ್ಕಳು,ಸೇವಾಪ್ರತಿನಿಧಿ ಜ್ಯೋತಿ ಉಪಸ್ಥಿತರಿದ್ದರು ಕಾರ್ಯಕ್ರಮದ ನಿರ್ವಹಣೆಯನ್ನು ಜ್ಞಾನ ವಿಕಾಸ ಸಮನ್ವಯಾಧಿಕಾರಿಗಳು ಅವರು ನೆರವೇರಿಸಿದರು.