ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ. ಸಿ ಟ್ರಸ್ಟ್ (ರಿ.) ಜೇವರ್ಗಿ ತಾಲೂಕು ಯಾದಗಿರಿ ಜಿಲ್ಲೆ, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ (ರಿ.) ಬೆಳ್ತಂಗಡಿ, ಕರ್ನಾಟಕ ರಾಜ್ಯ ಮಧ್ಯಪಾನ ಸಯಮ ಮಂಡಳಿ ಬೆಂಗಳೂರು, ಮದ್ಯವರ್ಜನ ಶಿಬಿರ ವ್ಯವಸ್ಥಾಪನ ಸಮಿತಿ ಇಜೇರಿ, ಪುರಸಭೆ ಜೇವರ್ಗಿ, ಶೌರ್ಯ ವಿಪತ್ತು ನಿರ್ವಹಣಾ ಘಟಕ, ವೈದ್ಯರು ಮತ್ತು ಮೆಡಿಕಲ್ ಅಸೋಸಿಯೇಷನ್ ಜೇವರ್ಗಿ, ಆರಕ್ಷಕರ ಠಾಣೆ, ಸ್ಥಳೀಯ ಸಂಘ ಸಂಸ್ಥೆಗಳು, ಸ್ಥಳೀಯ ಎಲ್ಲಾ ಇಲಾಖೆಗಳು, ಸಮಸ್ತ ದಾನಿಗಳು ಮತ್ತು ಪ್ರಗತಿ ಬಂಧು ಸ್ವಸಹಾಯ ಸಂಘಗಳು ಇಜೇರಿ ಮತ್ತು ಜೇವರ್ಗಿ ವಲಯ ಸಹಕಾರದೊಂದಿಗೆ ಜೇವರ್ಗಿ ತಾಲೂಕಿನಲ್ಲಿ 1856 ನೇ ಮದ್ಯವರ್ಜನ ಶಿಬಿರದ ಉದ್ಘಾಟನಾ ಕಾರ್ಯಕ್ರಮ ನಡೆಯಿತು. ಶ್ರೀ ರಾಜಸಾಬ್ ನದಾಫ್, ಶ್ರೀ ಅಂಬರೀಶ್ ಬಿ. ಲಿಂಗಸುರ, ಶ್ರೀ ಗುರುವಣ್ಣ ಅಮ್ಮಪುರ, ಶ್ರೀ ಕಮಲಾಕ್ಷ, ಶ್ರೀ ಮಲ್ಲನಗೌಡ ಪಾಟೀಲ್ ಗೋಗಿಹಾಳ, ಶ್ರೀ ದಿನೇಶ್ ಎನ್., ಶ್ರೀ ದಿವಾಕರ್ ಪೂಜಾರಿ, ಶ್ರೀಮತಿ ಜಯಲಕ್ಷ್ಮಿ, ಶ್ರೀ ಮಲ್ಲೇಶಪ್ಪ ಕೆ., ಜೇವರ್ಗಿ ತಾಲೂಕಿನ ಎಲ್ಲಾ ವಲಯದ ಮೇಲ್ವಿಚಾರಕರು, ಕೃಷಿ ಮೇಲ್ವಿಚಾರಕರು, ಕಛೇರಿ ಸಹಾಯಕರು, ಸ್ವಸಹಾಯ ಸಂಘದವರು, ನವಜೀವನ ಸಮಿತಿಯ ಸದಸ್ಯರು, ಶೌರ್ಯ ಘಟಕದ ಸ್ವಯಂಸೇವಕರು ಮತ್ತು ತಾಲೂಕಿನ ಗಣ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
