ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಪರಮಪೂಜ್ಯ ಡಾII ಡಿ.ವೀರೇಂದ್ರ ಹೆಗ್ಗಡೆಯವರು ಮತ್ತು ಮಾತೃಶ್ರೀ ಡಾII ಹೇಮಾವತಿ ವಿ.ಹೆಗ್ಗಡೆಯವರ ಕೃಪಾಶೀರ್ವಾದಗಳೊಂದಿಗೆ, 1974ನೇ ಮದ್ಯವರ್ಜನ ಶಿಬಿರ ವ್ಯವಸ್ಥಾಪನಾ ಸಮಿತಿ ಸಾವಳಗಿ ವಲಯ ಇವರ ಆಶ್ರಯದಲ್ಲಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ (ರಿ.) ಜಮಖಂಡಿ ತಾಲೂಕು, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ (ರಿ.) ಬೆಳ್ತಂಗಡಿ, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ (ರಿ.) ಬಾಗಲಕೋಟೆ ಜಿಲ್ಲೆ, ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ವ್ಯಸನಮುಕ್ತಿ ಮತ್ತು ಸಂಶೋಧನಾ ಕೇಂದ್ರ ಲಾಯಿಲ ಉಜಿರೆ ಇದರ ವಿಸ್ತರಣಾ ಕಾರ್ಯಕ್ರಮದ ಅಂಗವಾಗಿ, ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ ಬೆಂಗಳೂರು ಇವರ ಮಾರ್ಗದರ್ಶನದೊಂದಿಗೆ ಮಾಳಿ ಸಮುದಾಯ ಭವನ ಸಮಿತಿ ಸಾವಳಗಿ, ಶ್ರೀ ಅಂಬಾ ಭವಾನಿ ದೇವಸ್ಥಾನ ಸಮಿತಿ ಸಾವಳಗಿ, ಕೃಷಿ ಪತ್ತಿನ ಸಹಕಾರಿ ಸಂಘ ನಿ. 1 ಮತ್ತು 2, ಸುಸಂಸ್ಕೃತ ಸಂಸ್ಕಾರ ಸೇವಾ ಮಂಚ (ರಿ.) ಸಾವಳಗಿ, ಆರಕ್ಷಕ ಇಲಾಖೆ ಸಾವಳಗಿ, ಪ್ರಾಥಮಿಕ ಆರೋಗ್ಯ ಕೇಂದ್ರ ಸಾವಳಗಿ, ಪ್ರಗತಿಬಂಧು ಸ್ವ-ಸಹಾಯ ಸಂಘಗಳ ಒಕ್ಕೂಟ ಸಾವಳಗಿ ಮತ್ತು ತೊದಲಬಾಗಿ, ನವಜೀವನ ಸಮಿತಿ ಜಮಖಂಡಿ ತಾಲೂಕು, ಶೌರ್ಯ ಶ್ರೀ ಧರ್ಮಸ್ಥಳ ವಿಪತ್ತು ನಿರ್ವಹಣಾ ಘಟಕ ಜಮಖಂಡಿ ತಾಲೂಕು, ಸ್ಥಳೀಯ ಸಂಘ ಸಂಸ್ಥೆಗಳ ಮತ್ತು ದಾನಿಗಳ ಸಹಕಾರದೊಂದಿಗೆ ಜರುಗುವ 1974ನೇ ಮದ್ಯವರ್ಜನ ಶಿಬಿರದ ಉದ್ಘಾಟನಾ ಸಮಾರಂಭವು ಸಾವಳಗಿಯ ಶ್ರೀ ಅಂಬಾ ಭವಾನಿ ದೇವಸ್ಥಾನದ ಮಾಳಿ ಸಮುದಾಯ ಭವನದಲ್ಲಿ ಸಂಪನ್ನಗೊಂಡಿತು.ಕಾರ್ಯಕ್ರಮದ ಉದ್ಘಾಟನೆಯನ್ನು ವೇದಿಕೆಯಲ್ಲಿ ಭಾಗಿಯಾದ ಅತಿಥಿ ಗಣ್ಯರು ನೆರವೇರಿಸಿದರು.
ಶ್ರೀ ಸುಶೀಲಕುಮಾರ ಬೆಳಗಲಿ ಅಧ್ಯಕ್ಷರು 1974ನೇ ಮದ್ಯವರ್ಜನ ಶಿಬಿರ ವ್ಯವಸ್ಥಾಪನಾ ಸಮಿತಿ ಸಾವಳಗಿ ವಲಯ ಇವರು ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ವಹಿಸಿ ಕಾರ್ಯಕ್ರಮದ ಕುರಿತು ಅಧ್ಯಕ್ಷೀಯ ಮಾತುಗಳನ್ನಾಡಿದರು.
ಶ್ರೀ ನಾಗೇಶ್ ವೈ.ಎ ಯೋಜನಾಧಿಕಾರಿ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಪ್ರಾದೇಶಿಕ ವಿಭಾಗ ಬೆಂಗಳೂರು ಇವರು ಜನಜಾಗೃತಿ ವೇದಿಕೆ ಪ್ರಾರಂಭ, ಜನಜಾಗೃತಿ ವೇದಿಕೆ ಮೂಲಕ ಸಾಮಾಜಿಕ ಆಂದೋಲನ, ಮದ್ಯವರ್ಜನ ಶಿಬಿರ ಅನುಷ್ಠಾನ, ಮದ್ಯವರ್ಜನ ಶಿಬಿರದ ರೂಪುರೇಷೆ, ಮದ್ಯವರ್ಜನ ಶಿಬಿರದ ದೈನಂದಿನ ದಿನಚರಿ ಕಾರ್ಯಕ್ರಮಗಳ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು.ಮುಖ್ಯ ಅತಿಥಿಗಳಾಗಿ ಶ್ರೀ ಚೆನ್ನಕೇಶವ ಮಾನ್ಯ ಜಿಲ್ಲಾ ನಿರ್ದೇಶಕರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ (ರಿ.) ಬಾಗಲಕೋಟೆ ಇವರು ಮಾತನಾಡಿ ಮದ್ಯವರ್ಜನ ಶಿಬಿರ ಇದೊಂದು ಪವಿತ್ರ ಕಾರ್ಯಕ್ರಮ. ಇದು ಕೇವಲ ಧರ್ಮಸ್ಥಳದ ಕಾರ್ಯಕ್ರಮವಲ್ಲ. ಬದಲಾಗಿ ಇದೊಂದು ಸಮುದಾಯದ ಸಹಭಾಗಿತ್ವದ ಕಾರ್ಯಕ್ರಮ. ಆದ್ದರಿಂದ ಸಾರ್ವಜನಿಕರ ತನು – ಮನ – ಧನ ಸಹಕಾರದೊಂದಿಗೆ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಆರಂಭ, ವಿಸ್ತರಣೆಯ ಅನುಭವ ಹಾಗೂ ಅಸಾಮಾನ್ಯ ಸಾಧನೆಗಳ ಪರಿಚಯದೊಂದಿಗೆ ಸಮುದಾಯದ ಕಾರ್ಯಕ್ರಮಗಳಾದ ನಮ್ಮೂರು ನಮ್ಮ ಕೆರೆ, ರುದ್ರಭೂಮಿ ಅನುದಾನ, ಶಿಥಿಲಗೊಂಡ ದೇವಸ್ಥಾನಗಳ ಜೀರ್ಣೋದ್ಧಾರ, ಶಾಲೆಗಳಿಗೆ ಪೀಠೋಪಕರಣ ಒದಗಣೆ, ಜ್ಞಾನದೀಪ ಕಾರ್ಯಕ್ರಮದ ಮುಖೇನ ಗೌರವ ಶಿಕ್ಷಕರ ಒದಗಣೆ, ಶಿಷ್ಯವೇತನ, ಮಾಸಾಶನ, ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ ಮತ್ತು ಶೈಕ್ಷಣಿಕ, ಸಾಂಸ್ಕೃತಿಕ, ಹಾಗೂ ಧಾರ್ಮಿಕ ಕ್ಷೇತ್ರ ಹೀಗೆ ಹಲವು ವಿಭಾಗಗಳಲ್ಲಿ ಜನಮೆಚ್ಚುಗೆಯೊಂದಿಗೆ ಸಂಸ್ಥೆಯು ವಿಶ್ವ ಮಾನ್ಯತೆಯನ್ನು ಪಡೆದುಕೊಂಡಿದೆ. ಸಮುದಾಯದ ಕಾರ್ಯಕ್ರಮಗಳಲ್ಲಿ ಪೂಜ್ಯರ ಅತೀ ಪ್ರೀತಿಯ ಕಾರ್ಯಕ್ರಮವಾದ ಮದ್ಯವರ್ಜನ ಶಿಬಿರವನ್ನು ಸಂಘಟಿಸಿದ ವ್ಯವಸ್ಥಾಪನಾ ಸಮಿತಿ ಹಾಗೂ ಜನಜಾಗೃತಿ ವೇದಿಕೆಯ ಅತ್ಯುತ್ತಮ ಸಹಕಾರವನ್ನು ಸ್ಮರಿಸಿ ಕಾರ್ಯಕ್ರಮಕ್ಕೆ ಶುಭಾಶಯವನ್ನು ಕೋರಿದರು.ಕಾರ್ಯಕ್ರಮದ ವೇದಿಕೆಯಲ್ಲಿ ಶ್ರೀ ಸಂಜಯ ಬೈರಪ್ಪ ಮಾಳಿ ಅಧ್ಯಕ್ಷರು ಗ್ರಾಮ ಪಂಚಾಯತ್ ಸಾವಳಗಿ, ಶ್ರೀ ರಾಜು ಮೇಲಿನಕೆರಿ ರಾಜ್ಯ ಸಂಚಾಲಕರು ದಲಿತ ಸಂಘರ್ಷ ಸಮಿತಿ ಬೆಂಗಳೂರು, ಶ್ರೀ ಸುಭಾಸ ರಂಗಪ್ಪಾ ಪಾಟೋಳಿ ಮಾಜಿ ಅಧ್ಯಕ್ಷರು ಗ್ರಾಮ ಪಂಚಾಯತ್ ಸಾವಳಗಿ, ಶ್ರೀ ಹುಸೇನಸಾಬ ಜಮಖಂಡಿ ಉಪಾಧ್ಯಕ್ಷರು ಗ್ರಾಮ ಪಂಚಾಯತ್ ಅಡಿಹುಡಿ, ಶ್ರೀ ಉಮೇಶ ಜಾಧವ ಅಧ್ಯಕ್ಷರು ಶ್ರೀ ಭವಾನಿ ಕೋಆಪರೇಟಿವ್ ಸಹಕಾರಿ ಸಂಘ ಸಾವಳಗಿ, ಶ್ರೀ ಶ್ರೀಧರ ಕನ್ನೂರ ಸದಸ್ಯರು ಜಿಲ್ಲಾ ಜನಜಾಗೃತಿ ವೇದಿಕೆ ಬಾಗಲಕೋಟೆ, ಶ್ರೀಮತಿ ಗೀತಾ ಸೂರ್ಯವಂಶಿ ಸದಸ್ಯರು ಜಿಲ್ಲಾ ಜನಜಾಗೃತಿ ವೇದಿಕೆ ಬಾಗಲಕೋಟೆ, ಶ್ರೀ ಪಂಡಿತ್ ಪಾರ್ಶ್ವನಾಥ ಉಪಾಧ್ಯೆ ಅಧ್ಯಕ್ಷರು ಸುಸಂಸ್ಕೃತ ಸಂಸ್ಕಾರ ಸೇವಾ ಮಂಚ (ರಿ.) ಸಾವಳಗಿ, ಶ್ರೀ ಜೆ.ಡಿ ಲಮಾಣಿ ಎ.ಎಸ್.ಐ ಆರಕ್ಷಕ ಠಾಣೆ ಸಾವಳಗಿ, ಶ್ರೀ ಶಂಕರ ಕಂಕನವಾಡಿ ಶ್ರೀ ನಿಂಗಪ್ಪ ಜಿ ಕ್ಷೇತ್ರ ಯೋಜನಾಧಿಕಾರಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ (ರಿ.) ಜಮಖಂಡಿ ತಾಲೂಕು ಇವರುಗಳು ಉಪಸ್ಥಿತರಿದ್ದು ಶುಭವನ್ನು ಹಾರೈಸಿದರು.
ಶ್ರೀ ನಂದಕುಮಾರ್ ಪಿ ಪಿ ಶಿಬಿರಾಧಿಕಾರಿ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಬೆಳ್ತಂಗಡಿ, ಶ್ರೀ ವೆಂಕಟೇಶ್ ಆರೋಗ್ಯ ಸಹಾಯಕರು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಬೆಳ್ತಂಗಡಿ, ಶ್ರೀ ಸಚಿನ್ ಮೇಲ್ವಿಚಾರಕರು ಜನಜಾಗೃತಿ ವಿಭಾಗ ಪ್ರಾದೇಶಿಕ ಕಛೇರಿ ಕೊಪ್ಪಳ ಇವರುಗಳು ಎಂಟು ದಿನಗಳ ಮದ್ಯವರ್ಜನ ಶಿಬಿರವನ್ನು ನಿರ್ವಹಿಸಲಿದ್ದಾರೆ.ಶ್ರೀ ಪರಶುರಾಮ ಕೊಟೂರು ಮೇಲ್ವಿಚಾರಕರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ (ರಿ.) ಸಾವಳಗಿ ವಲಯ, ಸೇವಾಪ್ರತಿನಿಧಿಗಳು ಸಾವಳಗಿ ವಲಯ, ಒಕ್ಕೂಟದ ಅಧ್ಯಕ್ಷರು / ಪದಾಧಿಕಾರಿಗಳು ಮತ್ತು ಪ್ರಗತಿಬಂಧು ಸ್ವ-ಸಹಾಯ ಸಂಘದ ಸದಸ್ಯರುಗಳು ಸಾವಳಗಿ ವಲಯ, ಶೌರ್ಯ ಶ್ರೀ ಧರ್ಮಸ್ಥಳ ವಿಪತ್ತು ನಿರ್ವಹಣಾ ಘಟಕ ಜಮಖಂಡಿ ತಾಲೂಕು, ನವಜೀವನ ಸಮಿತಿ ಜಮಖಂಡಿ ತಾಲೂಕು ಮತ್ತು ಸಾರ್ವಜನಿಕರು ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಿದರು.ಕಾರ್ಯಕ್ರಮವನ್ನು ಗ್ರಾಮಾಭಿವೃದ್ಧಿ ಯೋಜನೆಯ ಸಿಬ್ಬಂದಿಗಳು ಪ್ರಾರ್ಥಿಸಿ, ಶ್ರೀ ನಿಂಗಪ್ಪ ಜಿ ಯೋಜನಾಧಿಕಾರಿ ಸ್ವಾಗತಿಸಿ, ಶ್ರೀ ಸಚಿನ್ ಜನಜಾಗೃತಿ ಮೇಲ್ವಿಚಾರಕರು ನಿರೂಪಿಸಿ, ಶ್ರೀ ಪರಶುರಾಮ ಕೊಟೂರು ಮೇಲ್ವಿಚಾರಕರು ವಂದಿಸಿದರು.
