ಜನನ, ಜೀವನ, ಮರಣ ಇವುಗಳನ್ನು ಅರಿತುಕೊಂಡು ಬಾಳಿದಲ್ಲಿ ಜನ್ಮ ಸಾರ್ಥಕ – ಶ್ರೀ ಶ್ರೀ ಶ್ರೀ ಕಾರದ ವೀರ ಬಸವ ಮಹಾಸ್ವಾಮಿಗಳು

Janajagurthi Vedike News

ಬೆಂಗಳೂರು ಪ್ರಾದೇಶಿಕ ವಿಭಾಗದ ತುಮಕೂರು ತಾಲೂಕಿನ ನವಜೀವನೋತ್ಸವ ಹಾಗೂ ಜನಜಾಗೃತಿ ಕಾರ್ಯಕ್ರಮ ಉದ್ಘಾಟನೆಯನ್ನು ಶ್ರೀಶ್ರೀಶ್ರೀ ಕಾರದ ವೀರಭದ್ರ ಮಹಾಸ್ವಾಮಿಜಿಗಳು ಜಂಗಮ ಸುಕ್ಷೇತ್ರ ಬೆಳ್ಳಾವಿ ನೆರವೇರಿಸಿ ಆಶೀರ್ವಚನ ಮಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾ ಅಧ್ಯಕ್ಷರಾದ ಶ್ರೀ ಪ್ರೆಸ್ ರಾಜಣ್ಣರವರು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಮಹಾನಗರ ಪಾಲಿಕೆಯ ಸದಸ್ಯರಾದ ಶ್ರೀನಿವಾಸ್, ಜಿಲ್ಲಾ ಉಪಾಧ್ಯಕ್ಷರಾದ ಅಮರನಾಥ ಶೆಟ್ಟಿ, ಶ್ರೀ ಕಾಮರಾಜ್, ಮಾಜಿ ಅಧ್ಯಕ್ಷರಾದ ಡಾ. ಸಂಜಯ್ ನಾಯಕ್, ಸದಸ್ಯರಾದ ಶ್ರೀಮತಿ ವಿಜಯಭಾಸ್ಕರ್, ಶ್ರೀಮತಿ ಪ್ರೇಮ, ಶ್ರೀ ಕುಂಬಯ್ಯ, ಉಪಸ್ಥಿತರಿದ್ದರು. ತಾಲೂಕು ಯೋಜನಾಧಿಕಾರಿಗಳಾದ ಶ್ರೀಮತಿ ಸುನೀತಾ ಪ್ರಭು ಸ್ವಾಗತಿಸಿದರು. ಜನಜಾಗೃತಿ ಬೆಂಗಳೂರು ವಿಭಾಗದ ಯೋಜನಾಧಿಕಾರಿ ಗಣೇಶ್ ಆಚಾರ್ಯ ಪ್ರಾಸ್ತಾವಿಕವಾಗಿ ಮಾತನಾಡಿದರು. ಶುಭೋದಯ ಭಾಗ್ಯ ರವರು ಪ್ರಾರ್ಥಿಸಿ, ಶ್ರೀಶೈಲ ರವರು ಧನ್ಯವಾದವಿತ್ತರು. ಕಾರ್ಯಕ್ರಮದ ನಿರ್ವಹಣೆಯನ್ನು ಜನಜಾಗೃತಿ ಮೇಲ್ವಿಚಾರಕ ರಾಜೇಶ್ ಅವರು ನೆರವೇರಿಸಿದರು. ಎಲ್ಲಾ ನವಜೀವನ ಸಮಿತಿ ಸದಸ್ಯರನ್ನು ಶಾಲು ಹಾಗೂ ಗುಲಾಬಿ ಹೂವನ್ನು ನೀಡುವುದರ ಮೂಲಕ ಅಭಿನಂದಿಸಲಾಯಿತು. ಕಾರ್ಯಕ್ರಮದಲ್ಲಿ ಮೇಲ್ವಿಚಾರಕರು, ನವಜೀವನ ಪೋಷಕರು, ಸೇವಾ ಪ್ರತಿನಿಧಿಗಳು ಹಾಗೂ ನವಜೀವನ ಸಮಿತಿ ಸದಸ್ಯರು ಹಾಗೂ ಮನೆಯವರು ಉಪಸ್ಥಿತರಿದ್ದರು.